Migrant workers

ವಲಸೆ ಕಾರ್ಮಿಕರ ಕುರಿತು ಚರ್ಚಿಸಲು ಮೇ 22 ರಂದು ವಿರೋಧ ಪಕ್ಷಗಳ ಸಭೆ ಕರೆದ ಸೋನಿಯಾ ಗಾಂಧಿ
ಕೊರೋನಾ ವೈರಸ್ ಹಾಗೂ ವಲಸೆ ಕಾರ್ಮಿಕರ ಕುರಿತು ಚರ್ಚಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೇ 22 ರಂದು ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ ಮೂಲಗಳು ತಿಳಿಸಿವೆ.

ಸತೀಶ್ ಜಾರಕಿಹೊಳಿ ಸಹಾಯ ಹಸ್ತ: 1 ಸಾವಿರ ಮಂದಿಗೆ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ
ಯಮನಕರಡಿ ಶಾಸಕ ಸತೀಶ್ ಜಾರಕಿಹೊಳಿ ವಲಸೆ ಕಾರ್ಮಿಕರ ಸಹಾಯಕ್ಕೆ ಮುಂದಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮುಂಬಯಿಯಿಂದ ಬೆಳಗಾವಿಗೆ ಆಗಮಿಸಿದ 1 ಸಾವಿರ ವಲಸೆ ಕಾರ್ಮಿಕರನ್ನು ಮಹಾರಾಷ್ಟ್ರ -ಕರ್ನಾಟಕ ಗಡಿ ಭಾಗದಲ್ಲಿರುವ ಕುನಗೋಳಿಯಲ್ಲಿ ಸ್ವಾಗತಿಸಿದ ಸತೀಶ್, ಅವರಿಗೆಲ್ಲಾ ತಮ್ಮ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರಿದ್ದ ವಾಹನ ಮಗುಚಿಬಿದ್ದು 3 ಮಹಿಳೆಯರ ಸಾವು, 17 ಮಂದಿಗೆ ಗಾಯ
ಮಿನಿ ಟ್ರಕ್ ನ ಚಕ್ರ ಸ್ಫೋಟಗೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ವಲಸೆ ಕಾರ್ಮಿಕರು ಮೃತಪಟ್ಟು 17 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮಹೊಬಾ ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರು ಎಲ್ಲರೂ ಮಹಿಳೆಯರಾಗಿದ್ದಾರೆ.

ವಲಸೆ ಕಾರ್ಮಿಕರಿಗೆ ತಲಾ 5 ಕೆಜಿ ಅಕ್ಕಿ, 2 ಕೆಜಿ ಕಡಲೆಕಾಳು: ಸಚಿವ ಗೋಪಾಲಯ್ಯ
ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ಯಾಕೇಜ್ -2 ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ನಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧಾರ ಕೈಗೊಂಡಿದೆ.

ಮುಂದಿನ ಆರು ತಿಂಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಏನೇನು ಮಾಡಬೇಕು ಗೊತ್ತಾ? ತಜ್ಞರು ಏನಂತಾರೆ
ಲಾಕ್ ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ವಲಸೆ ಕಾರ್ಮಿಕರು ತಮ್ಮೂರಿನತ್ತ ಹೋಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಸೋನಿಯಾ ಗಾಂಧಿಗೆ ಕೈ ಮುಗಿದು ಕೇಳಿಕೊಂಡ ನಿರ್ಮಲಾ ಸೀತಾರಾಮನ್: ಏನು, ಏಕೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾ ವೈರಸ್ ಹಾವಳಿಯ ಪರಿಣಾಮವಾಗಿ ಎದುರಾಗಿರುವ ಆರ್ಥಿಕ ಸಂಕಷ್ಟವನ್ನು ಎದುರಿಸಲು, ಮೋದಿ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ನ ಕೊನೆಯ ಹಂತದ ಘೋಷಣೆಗಳನ್ನು ಭಾನುವಾರ ಮಾಡಿದರು.

ವಲಸಿಗ ಕಾರ್ಮಿಕರ ಬಗ್ಗೆ ಉತ್ತರ ಪ್ರದೇಶ ಸಚಿವರ ವಿವಾದಾತ್ಮಕ ಹೇಳಿಕೆ!
ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಯತ್ನಿಸುತ್ತಿದ್ದರೆ ಉತ್ತರ ಪ್ರದೇಶ ಸಚಿವ ಉದಯ್ ಭಾನ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಲಸೆ ಕಾರ್ಮಿಕರನ್ನು ಭೇಟಿಯಾದ ರಾಹುಲ್, ತವರಿಗೆ ಮರುಳಿಸಲು ವಾಹನ ವ್ಯವಸ್ಥೆ!
ದೆಹಲಿಯ ಸುಖದೇವ್ ವಿಹಾರ್ ಪ್ರದೇಶದ ಫ್ಲೈಓವರ್ ಬಳಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರ ಗುಂಪನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾದರು.

ಮಧ್ಯ ಪ್ರದೇಶದಲ್ಲಿ ಮಗುಚಿ ಬಿದ್ದ ಟ್ರಕ್: 5 ಮಂದಿ ವಲಸೆ ಕಾರ್ಮಿಕರು ಸಾವು; 17 ಮಂದಿಗೆ ಗಾಯ
ಉತ್ತರ ಪ್ರದೇಶದ ಔರೈಯಾದಲ್ಲಿ ಶನಿವಾರ ನಸುಕಿನ ಜಾವ ಟ್ರಕ್ ಅಪಘಾತದಲ್ಲಿ 24 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಘಟನೆಯ ಮಾದರಿಯಲ್ಲಿಯೇ ಮಧ್ಯ ಪ್ರದೇಶದ ಸಾಗರ್ ಮತ್ತು ಛತಾಪುರ್ ಗಡಿಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಮಗುಚಿ ಬಿದ್ದು ಐವರು ಮೃತಪಟ್ಟಿದ್ದಾರೆ, 17 ಮಂದಿಗೆ ಗಾಯವಾಗಿದೆ.

