Migrant workers

ಪಶ್ಚಿಮ ಬಂಗಾಳ: ರಸ್ತೆ ಬದಿ ಹಳ್ಳಕ್ಕೆ ಬಿದ್ದ ಬಸ್, 6 ಮಂದಿ ವಲಸೆ ಕಾರ್ಮಿಕರ ದಾರುಣ ಸಾವು
ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ್ ಜಿಲ್ಲೆಯ ರಾಯ್ಗಂಜ್ನಲ್ಲಿ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದ್ದು, ಪರಿಣಾಮ 6 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ: ರಾಹುಲ್ ಗಾಂಧಿ
ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.

ಕೊರೋನಾ ತಂದ ಸಂಕಷ್ಟ: ವಲಸೆ ಕಾರ್ಮಿಕರ ಓಲೈಕೆಗಾಗಿ ಕೋವಿಡ್ ವಿಮೆ ಮೊರೆ ಹೋಗುತ್ತಿರುವ ಮಾಲೀಕರು!
ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕೇವಲ ಕಾರ್ಮಿಕ ವಲಯ ಮಾತ್ರವಲ್ಲ...ಮಾಲೀಕ ವಲಯ ಕೂಡ ಸಂಕಷ್ಟ ಪಡುವಂತಾಗಿದೆ.

ಬೆಂಗಳೂರು: ನಕಲಿ ಮಿಲಿಟರಿ ವಾರಂಟ್ ನಲ್ಲಿ ಪ್ರಯಾಣಿಸುತ್ತಿದ್ದ 10 ವಲಸೆ ಕಾರ್ಮಿಕರ ಬಂಧನ
ಕಳೆದ ಅಕ್ಟೋಬರ್ 8ರಂದು ಅಸ್ಸಾಂನಿಂದ ಗುವಾಹಟಿ ಎಕ್ಸ್ ಪ್ರೆಸ್ ನಲ್ಲಿ ಬೆಂಗಳೂರಿಗೆ ಬಂದಿಳಿದ 10 ಮಂದಿ ವಲಸೆ ಕಾರ್ಮಿಕರು ನಕಲಿ ಮಿಲಿಟರಿ ವಾರಂಟ್ ನಲ್ಲಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಲಾಕ್ ಡೌನ್ ಸಮಯದಲ್ಲಿ 1 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತವರು ರಾಜ್ಯಗಳಿಗೆ ಮರಳಿದ್ದಾರೆ: ಕೇಂದ್ರ
ಮಾಹಾಮಾರಿ ಕೊರೋನಾ ವೈರಸ್ ಪ್ರೇರಿತ ಲಾಕ್‌ಡೌನ್ 2020ರ ಮಾರ್ಚ್-ಜೂನ್ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನೀವು ಲೆಕ್ಕ ಮಾಡಿಲ್ಲ ಅಂದ್ರೆ ಯಾರೂ ಸತ್ತಿಲ್ಲವೇ?: ವಲಸಿಗರ ಸಾವು ಕುರಿತು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಕಿಡಿ
ಲಾಕ್‌ಡೌನ್ ಅವಧಿಯಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದರು ಅಥವಾ ಎಷ್ಟು ಮಂದಿ ಕೆಲಸ ಕಳೆದು ಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ವ್ಯಾಪಾರ, ವಹಿವಾಟು ಆಗುತ್ತಿಲ್ಲ, ದಿನದ ಊಟ-ತಿಂಡಿಗೆ ಪರದಾಟ:ವಲಸೆ ಕಾರ್ಮಿಕರ ಪಾಡು ಕೇಳುವವರಿಲ್ಲ!
ಉತ್ತರ ಪ್ರದೇಶದಲ್ಲಿರುವ ಕುಶಾಂಬಿಗೆ ಲಾಕ್ ಡೌನ್ ಸಮಯದಲ್ಲಿ ಹೋಗದಿರುವುದಕ್ಕೆ ಕಮಲಾಗೆ ವಿಷಾದವಿದೆ. ಕೋವಿಡ್-19 ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗ ಊರಿಗೆ ಹೋಗದೆ ಉಳಿದುಕೊಂಡ ಕಮಲಾರಂಥ ಅನೇಕ ವಲಸೆ ಕಾರ್ಮಿಕರಿದ್ದಾರೆ. ಇಂದು ಪ್ರತಿದಿನದ ಊಟ-ಒಪ್ಪತ್ತಿಗೆ ಪರದಾಡುತ್ತಿದ್ದಾರೆ.

ವಾರದ ಲಾಕ್‌ಡೌನ್: ವಲಸೆ ಕಾರ್ಮಿಕರು ಸ್ವಂತ ಸ್ಥಳಗಳಿಗೆ ತೆರಳಲು ಕೆಎಸ್‌ಆರ್‌ಟಿಸಿಯಿಂದ 1,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ರಾಜಧಾನಿಯಲ್ಲಿ ವಾರದ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ಸುರಕ್ಷಿತವಾಗಿ ತೆರಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸೋಮವಾರ ಮತ್ತು ಮಂಗಳವಾರ 1,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.

ಗರೀಬ್ ಕಲ್ಯಾಣ್: 50 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಉದ್ಯೋಗ
50 ಸಾವಿರ ಕೋಟಿ ರೂ ಮೌಲ್ಯದ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

