Migrant workers

ವಲಸೆ ಕಾರ್ಮಿಕರ ವಿಚಾರ: ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ನಡೆದುಕೊಳ್ಳಲಿ: ಸಿದ್ದರಾಮಯ್ಯ
ವಲಸೆ ಕಾರ್ಮಿಕರ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನ್ಯಾಯಾಲಯದ ಆದೇಶದಂತೆ ಸರ್ಕಾರಗಳು ಆದಷ್ಟು ಬೇಗ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು 15 ದಿನಗಳೊಳಗಾಗಿ ತವರು ರಾಜ್ಯಗಳಿಗೆ ಕಳುಹಿಸಿ: ರಾಜ್ಯ ಸರ್ಕಾರಗಳಿಗೆ 'ಸುಪ್ರೀಂ' ಸೂಚನೆ
ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಎಲ್ಲಾ ವಲಸೆ ಕಾರ್ಮಿಕರನ್ನು 15 ದಿನಗಳೊಳಗಾಗಿ ಅವರವರ ತವರು ರಾಜ್ಯಗಳಿಗೆ ಕಳುಹಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ಮಹಾರಾಷ್ಟ್ರದಿಂದ ಮರಳಿದ ವಲಸೆ ಕಾರ್ಮಿಕರಿಗೆ ಮನ್ರೇಗಾ ಅಡಿ ಉದ್ಯೋಗ: ಈಶ್ವರಪ್ಪ
ಮಹಾರಾಷ್ಟ್ರದಿಂದ ಬಂದಿರುವ ವಲಸೆ ಕಾರ್ಮಿಕರಿಗೆ ನರೇಗಾ ಅಡಿ ಕೆಲಸ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರಪ್ಪ ಹೇಳಿದ್ದಾರೆ.

ವಲಸೆ ಕಾರ್ಮಿಕರಿಗೆ ಆಹಾರ ವಿತರಿಸಿ ಮಾನವೀಯತೆ ಮೆರೆದ ಟೀಂ ಇಂಡಿಯಾ ಆಟಗಾರ ಶಮಿ
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಸಂಕಷ್ತಕ್ಕೀಡಾದ ವಲಸೆ ಕಾರ್ಮಿಕರ ನೆರವಿಗೆ ನಾನಾ ಸೆಲೆಬ್ರೆಟಿಗಳು ಮುಂದಾಗುತ್ತಿರುವುದು ಗೊತ್ತೇ ಇದೆ. ಇದೀಗ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಸಹ ಇಂತಹಾ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಹಾರ ಪ್ಯಾಕೆಟ್ ಮತ್ತು ಮಾಸ್ಕ್ ಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.

ವಲಸೆ ಕಾರ್ಮಿಕರ ಸಮಸ್ಯೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಲಾಕ್‌ಡೌನ್ ಮತ್ತು ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿವೇಚನಾರಹಿತ ಕ್ರಮದಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಶ್ರಮಿಕರ ಬದುಕನ್ನು ಕೇಂದ್ರ ಸರಕಾರ ಅಸಹನೀಯಗೊಳಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ 'ಸೇವಾ ಸಿಂಧು' ಪೋರ್ಟಲ್ ನೋಂದಣಿ ಕಡ್ಡಾಯ
ಬೆಂಗಳೂರು ನಗರವನ್ನು ತ್ಯಜಿಸುತ್ತಿರುವ ವಲಸೆ ಕಾರ್ಮಿಕರು ಇನ್ನು ಮುಂದೆ ಕಡ್ಡಾಯವಾಗಿ 'ಸೇವಾ ಸಿಂಧು' ಪೋರ್ಟಲ್ ಅಡಿಯಲ್ಲಿ ನೋಂದಣಿಯಾಗಿ ವಿವರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಅರಮನೆ ಮೈದಾನದಲ್ಲಿ ಕುಸಿದ ವಲಸಿಗರ ಶೆಡ್: ಪೊಲೀಸರಿಂದ ಇಬ್ಬರ ರಕ್ಷಣೆ
ಭಾರೀ ಮಳೆ ಮತ್ತು ಬಿರುಗಾಳಿಗೆ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರಿಗೆ ಹಾಕಲಾಗಿದ್ದ ಶೆಡ್ ನ ಮೇಲ್ಟಾವಣಿ ಗಾಳಿಗೆ ತೂರಿ ಹೋಗಿತ್ತು, ಮೇಲ್ಚಾವಣಿ ಕೆಳಗೆ ಸಿಕ್ಕಿಕೊಂಡಿದ್ದ ಇಬ್ಬರನ್ನು ಸದಾಶಿವನಗರ ಪೇದೆ ರಕ್ಷಿಸಿದ್ದಾರೆ.

ಸೋನು ಸೂದ್ ನಂತರ ಉತ್ತರ ಪ್ರದೇಶ ವಲಸಿಗರಿಗಾಗಿ 10 ಬಸ್ ಗಳ ವ್ಯವಸ್ಥೆ ಮಾಡಿದ ಅಮಿತಾಬ್!
ಸೋನು ಸೂದ್ ನಂತರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಅವರು ಪ್ರಾಯೋಜಿಸಿರುವ 10 ಬಸ್‍ಗಳು 200 ಕ್ಕೂ ಹೆಚ್ಚು ವಲಸಿಗರನ್ನು ಹೊತ್ತು ಶುಕ್ರವಾರ ಮುಂಬೈನಿಂದ ಉತ್ತರ ಪ್ರದೇಶಕ್ಕೆ ತೆರಳಿವೆ.

ಕೊಚ್ಚಿಯಿಂದ ಒಡಿಶಾಗೆ 167 ವಲಸೆ ಕಾರ್ಮಿಕರನ್ನು ವಿಮಾನದಲ್ಲಿ ಕಳಿಸಿದ ಬಾಲಿವುಡ್ ನಟ ಸೋನು ಸೂದ್!
ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದ 167 ಮಹಿಳಾ ಕಾರ್ಮಿಕರು ಚಾರ್ಟೆರ್ಡ್ ವಿಮಾನದಲ್ಲಿ ತಮ್ಮೂರು ಒಡಿಶಾಕ್ಕೆ ಹೋಗಿದ್ದಾರೆ.

