ಸೋನು ಸೂದ್ ನಂತರ ಉತ್ತರ ಪ್ರದೇಶ ವಲಸಿಗರಿಗಾಗಿ 10 ಬಸ್ ಗಳ ವ್ಯವಸ್ಥೆ ಮಾಡಿದ ಅಮಿತಾಬ್!
ಸೋನು ಸೂದ್ ನಂತರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಅವರು ಪ್ರಾಯೋಜಿಸಿರುವ 10 ಬಸ್‍ಗಳು 200 ಕ್ಕೂ ಹೆಚ್ಚು ವಲಸಿಗರನ್ನು ಹೊತ್ತು ಶುಕ್ರವಾರ ಮುಂಬೈನಿಂದ ಉತ್ತರ ಪ್ರದೇಶಕ್ಕೆ ತೆರಳಿವೆ.

ಮುಂಬೈ: ಸೋನು ಸೂದ್ ನಂತರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಅನ್ನ, ನೀರು ಇಲ್ಲದೆ ಮುಂಬೈನಲ್ಲಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಅವರವರ ಊರುಗಳಿಗೆ ಕಳುಹಿಸಿದ್ದಾರೆ.
ಅಮಿತಾಬ್ ಬಚ್ಚನ್ ಪ್ರಾಯೋಜಿಸಿರುವ 10 ಬಸ್‍ಗಳು 200 ಕ್ಕೂ ಹೆಚ್ಚು ವಲಸಿಗರನ್ನು ಹೊತ್ತು ಶುಕ್ರವಾರ ಮುಂಬೈಯಿಂದ ಉತ್ತರ ಪ್ರದೇಶಕ್ಕೆ ತೆರಳಿವೆ.
ಮುಂಬೈಯಿಂದ ಒಂದು ಬಸ್ ಲಕ್ನೋಗೆ, ತಲಾ 2 ಬಸ್‍ಗಳು ಗೋರಖ್‌ಪುರ ಮತ್ತು ಭಾದೊಯ್‌ಗೆ ಹಾಗೂ ಐದು ಬಸ್‍ಗಳು ಅಲಹಾಬಾದ್‌ಗೆ ತೆರಳಿವೆ. ಈ ಸ್ಥಳಗಳಿಂದ ವಲಸಿಗರು ತಮ್ಮ ಸ್ವಂತ ಗ್ರಾಮಗಳಿಗೆ ತೆರಳಲಿದ್ದಾರೆ.
ಉತ್ತರಪ್ರದೇಶದ ವಿವಿಧ ಸ್ಥಳಗಳಿಗೆ ಶುಕ್ರವಾರ ಮಧ್ಯಾಹ್ನ ಮಹಿಳೆಯರು ಮತ್ತು 43 ಮಕ್ಕಳು ಸೇರಿದಂತೆ ಸುಮಾರು 225 ವಲಸಿಗರನ್ನು ಹೊತ್ತ 10 ಬಸ್‌ಗಳಿಗೆ ಹಸಿರು ನಿಶಾನೆ ತೋರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


