ಎರಡು ಪ್ರತ್ಯೇಕ ರಸ್ತೆ ಅಪಘಾತ: 14 ಮಂದಿ ವಲಸೆ ಕಾರ್ಮಿಕರು ಸಾವು
ವಲಸೆ ಕಾರ್ಮಿಕರು ಮಾರ್ಗ ಮಧ್ಯೆ ತಮ್ಮೂರಿಗೆ ಹೋಗುತ್ತಿರುವಾಗ ಸಾಯುವ ಪ್ರಕರಣ ಮುಂದುವರಿದಿದೆ. ಕಳೆದ ತಡರಾತ್ರಿ ಮುಜಾಫರ್ ನಗರ-ಶಹರಾನ್ ಪುರ ಹೆದ್ದಾರಿಯಲ್ಲಿ 6 ಮಂದಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಬಸ್ ಹರಿದು ಮೃತಪಟ್ಟಿದ್ದಾರೆ.

ಮುಜಾಫರ್ ನಗರ (ಉತ್ತರ ಪ್ರದೇಶ): ವಲಸೆ ಕಾರ್ಮಿಕರು ಮಾರ್ಗ ಮಧ್ಯೆ ತಮ್ಮೂರಿಗೆ ಹೋಗುತ್ತಿರುವಾಗ ಸಾಯುವ ಪ್ರಕರಣ ಮುಂದುವರಿದಿದೆ. ಕಳೆದ ತಡರಾತ್ರಿ ಮುಜಾಫರ್ ನಗರ-ಶಹರಾನ್ ಪುರ ಹೆದ್ದಾರಿಯಲ್ಲಿ 6 ಮಂದಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಬಸ್ ಹರಿದು ಮೃತಪಟ್ಟಿದ್ದಾರೆ.
ಅನಾಮಧೇಯ ಬಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ. ಘಲೌಲಿ ಚೆಕ್ ಪೋಸ್ಟ್ ಹತ್ತಿರ ಈ ಘಟನೆ ನಡೆದಿದೆ.
ಮತ್ತೊಂದು ಘಟನೆಯಲ್ಲಿ ಮಧ್ಯ ಪ್ರದೇಶದ ಕ್ಯಾಂಟ್ ಪಿ ಎಸ್ ಗುನಾ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಸಂಚರಿಸುತ್ತಿದ್ದ ಟ್ರಕ್ ಬಸ್ ಗೆ ಡಿಕ್ಕಿ ಹೊಡೆದು 8 ಮಂದಿ ಕಾರ್ಮಿಕರು ಮೃತಪಟ್ಟು 50 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಎಲ್ಲಾ 8 ಮಂದಿ ಕಾರ್ಮಿಕರು ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ತಮ್ಮೂರಿಗೆ ಹೊರಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


