Loksabha Election 2019

ಲೋಕ ಸಮರ: ಪಶ್ಚಿಮ ಬಂಗಾಳದಲ್ಲಿ ಘರ್ಷಣೆ, ಬಿಜೆಪಿ ಅಭ್ಯರ್ಥಿ ಬಬುಲ್ ಸುಪ್ರೀಯೋ ಕಾರು ಜಖಂ!
ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು 4ನೇ ಹಂತದ ಮತದಾನ ನಡೆಯುತ್ತಿದ್ದು, ಅತ್ತ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಆಸನೋಲ್ ಬಿಜೆಪಿ ಅಭ್ಯರ್ಥಿ ಬಬುಲ್ ಸುಪ್ರೀಯೋ ಅವರ ಕಾರನ್ನು ಜಖಂ ಮಾಡಲಾಗಿದೆ.

ನೈಲ್ ಪಾಲಿಶ್ ನಿಂದ ವೋಟಿಂಗ್ ಇಂಕ್ ಮಾಯ?: ಸುದ್ದಿಗೆ ಗ್ರಾಸವಾಯ್ತು 'ಕೈ' ಮುಖಂಡ ಸಂಜಯ್ ಝಾ ಟ್ವೀಟ್
ಇಡೀ ದೇಶ 4ನೇ ಹಂತದ ಮತದಾನದ ಕುರಿತು ಗಮನ ಹರಿಸಿದ್ದರೆ, ಇದರ ನಡುವೆಯೇ ಮತದಾರರಿಗೆ ಚುನಾವಣಾ ಆಯೋಗ ಹಾಕುತ್ತಿರುವ ಶಾಹಿ (ಕೈ ಬೆರಳಿಗೆ ಹಾಕುವ ಇಂಕ್)ನ ಗುಣಮಟ್ಟದ ಕುರಿತು ಮತ್ತೆ ವಿವಾದ ಭುಗಿಲೆದ್ದಿದೆ.

ವಿಪಕ್ಷಗಳಿಗೆ ತಪ್ಪು ತಿಳುವಳಿಕೆಯಾಗಿದ್ದು, ಅದು 'ಬಿಜೆಪಿ' ಅಕ್ಷರ ಅಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
ಮತಯಂತ್ರದಲ್ಲಿ ಕಮಲದ ಚಿನ್ಹೆ ಕೆಳಗೆ ಬಿಜೆಪಿ ಎಂಬ ಅಕ್ಷರ ಇದೆ ಎಂಬ ವಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ವಿಪಕ್ಷಗಳಿಗೆ ತಪ್ಪು ತಿಳುವಳಿಕೆಯಾಗಿದ್ದು, ಅದು 'ಬಿಜೆಪಿ' ಅಕ್ಷರ ಅಲ್ಲ ಎಂದು ಹೇಳಿದೆ.

ನನ್ನನ್ನೂ ಜಾತಿ ರಾಜಕಾರಣಕ್ಕೆ ಎಳೆಯಬೇಡಿ; ಮಾಯಾವತಿ ವಿರುದ್ಧ ಪ್ರಧಾನಿ ಮೋದಿ ಕಿಡಿ
ನನ್ನನ್ನೂ ಕೂಡ ನಿಮ್ಮ ಜಾತಿ ರಾಜಕಾರಣಕ್ಕೆ ಎಳೆಯಬೇಡಿ ಎಂದು ಪ್ರಧಾನಿ ಮೋದಿ ಬಿಎಸ್ ಪಿ ಅಧಿನಾಯಕಿ ಮಾಯಾವತಿ ಅವರಿಗೆ ತಿರುಗೇಟು ನೀಡಿದ್ದಾರೆ.

ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ: ವಿಪಕ್ಷಗಳ ಆರೋಪ, ದೂರು ದಾಖಲು
ಇವಿಎಂ ಟ್ಯಾಂಪರ್ ವಿವಾದದ ಬಳಿಕ ಹಾಲಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ವಿವಾದ ಕೇಳಿಬಂದಿದ್ದು, ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ ವಿಪಕ್ಷಗಳು ಆರೋಪಿಸಿವೆ.

ಸರ್ಜಿಕಲ್ ಸ್ಟ್ರೈಕ್ ಏಕೆ ಬೇಕಿತ್ತು..? ಸಾಧ್ವಿ ಶಾಪ ಕೊಟ್ಟಿದ್ದರೆ ಸಾಕಿತ್ತು: ದಿಗ್ವಿಜಯ್ ಸಿಂಗ್ ವ್ಯಂಗ್ಯ
ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಬದಲು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ರಿಂದ ಶಾಪ ಕೊಡಿಸಿದ್ದರೆ ಸಾಕಿತ್ತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಭೋಪಾಲ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

'ನನಗಾಗಿ ನಾನೇ ಕತ್ತಲಲ್ಲಿ ಸಂಘರ್ಷ ಮಾಡಿದಂತಾಗಿದೆ': ಮೋದಿ ಹೆಲಿಕಾಪ್ಟರ್ ಪರಿಶೀಲಿಸಿದ್ದ ಅಧಿಕಾರಿ ಅಳಲು
ನನ್ನ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕಾಗಿ ನನ್ನನ್ನು ಅಮಾನತು ಮಾಡಲಾಗಿದೆ. ನನ್ನ ಪರಿಸ್ಥಿತಿ ಈಗ ನನಗಾಗಿ ನಾನೇ ಕತ್ತಲೆಯಲ್ಲಿ ಸಂಘರ್ಷ ಮಾಡಿದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲಿಸಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಿಸಿನ್ ಹೇಳಿದ್ದಾರೆ.

ಕ್ಷಮೆ ಕೇಳಿದರೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪರ ಪ್ರಚಾರಕ್ಕೆ ಸಿದ್ಧ: ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಧಿಕಿ
ಮುಸ್ಲಿಮ್ ಸಮುದಾಯದ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕ್ಷಮೆ ಕೇಳಿದರೆ ಕ್ಷೇತ್ರದಲ್ಲಿ ಅವರ ಪ್ರಚಾರ ಮಾಡಲು ಸಿದ್ಧ ಎಂದು ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಜಿಕಿ ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್ ನಲ್ಲಿ ದೋಷ, ವಿಮಾನ ದೆಹಲಿಗೆ ವಾಪಸ್!
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಎಂಜಿನ್ ದೋಷ ಕಂಡು ಬಂದ ಹಿನ್ನಲೆಯಲ್ಲಿ ವಿಮಾನ ದೆಹಲಿಗೆ ವಾಪಸ್ ಆಗಿದೆ ಎಂದು ತಿಳಿದುಬಂದಿದೆ.

