Loksabha Election 2019

'ದೇಶವೇ ನಿಮ್ಮನ್ನು ನೋಡಿ ನಗುವ ಕಾಲ ಬರುತ್ತದೆ'; ಫಲಿತಾಂಶದ ಬೆನ್ನಲ್ಲೇ ವಾಜಪೇಯಿ ಸಂಸತ್ ಭಾಷಣ ವೈರಲ್!
ದಾಖಲೆ ಪ್ರಮಾಣದಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತಿದೆ. ಇದರ ನಡುವೆ 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ ನಲ್ಲಿ ಮಾಡಿದ್ದ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

2 ಸ್ಥಾನದಲ್ಲಿದ್ದ ಬಿಜೆಪಿ 2ನೇ ಬಾರಿಗೆ ಆಯ್ಕೆಯಾಗಿದೆ, ಅಂದಿನ ಸಂಸ್ಕಾರವೇ ಮುಂದೆಯೂ ಇರಲಿದೆ: ಪ್ರಧಾನಿ ಮೋದಿ
ಕೇವಲ ಎರಡೇ ಎರಡು ಸ್ಥಾನದೊಂದಿಗೆ ಆರಂಭಿಸಿದ್ದ ಬಿಜೆಪಿ ಇಂದು 2ನೇ ಬಾರಿಗೆ ಆಯ್ಕೆಯಾಗಿದೆ. ಅಂದಿದ್ದ ಸಂಸ್ಕಾರ ಮುಂದೆಯೂ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಡ್ಯ ರಣಕಣ; ಪಕ್ಷೇತರ ಅಭ್ಯರ್ಥಿ ಪಾಲಾಯಿತೇ ನಿಖಿಲ್ ಕುಮಾರಸ್ವಾಮಿ ಮತಗಳು?
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮತಗಳು ಪಕ್ಷೇತರ ಅಭ್ಯರ್ಥಿಯೊಬ್ಬರ ಪಾಲಾಯಿತೇ ಎಂಬ ಹೊಸದೊಂದು ವಾದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದೆ.

ಮಂಡ್ಯ ರಣಕಣ; ಸುಮಲತಾ ಹೆಸರಿನ ಅಭ್ಯರ್ಥಿಗಳು ಗಳಿಸಿದ ಮತಗಳೆಷ್ಟು?
ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಸಾಕಷ್ಟು ಅಚ್ಚರಿ ಫಲಿತಾಂಶಗಳು ಹೊರಬಂದಿವೆ. ಈ ಪೈಕಿ ಅತೀ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದ ಮತ್ತು ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಯೂ ಕೆಲ ಅಚ್ಚರಿ ಬೆಳವಣಿಗೆಗಳಾಗಿವೆ.

ನೂತನ ಮೋದಿ ಸಂಪುಟಕ್ಕೆ ಅರುಣ್ ಜೇಟ್ಲಿ ಸೇರ್ಪಡೆ ಇಲ್ಲ..?; ಕಾರಣ ಏನು ಗೊತ್ತಾ!
ಯಾವ ಯಾವ ನಾಯಕರನ್ನು ಮೋದಿ ಸರ್ಕಾರದ ಸಂಪುಟಕ್ಕೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಂತೆಯೇ ನೂತನ ಮೋದಿ ಕ್ಯಾಬಿನೆಟ್ ನಿಂದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ಧರಾಮಯ್ಯರನ್ನು ದೂರುವುದು ಸರಿಯಲ್ಲ; ಖರ್ಗೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರನ್ನು ದೂರುವುದು ಸರಿಯಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಫಲಿತಾಂಶಕ್ಕಾಗಿ ಆ್ಯಪ್ ಬಿಡುಗಡೆ, ಇವಿಎಂಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗೆ ನಿಯಂತ್ರಣ ಕೊಠಡಿ!
ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲಕ್ಕೆ ನಾಳೆ ತೆರೆ ಬೀಳಲಿದ್ದು, ಪ್ರಜೆಗಳಿಗೆ ತತ್ ಕ್ಷಣದ ಫಲಿತಾಂಶದ ಮಾಹಿತಿ ನೀಡಲು ಚುನಾವಣಾ ಆಯೋಗ ನೂತನ ಆ್ಯಪ್ ಬಿಡುಗಡೆ ಮಾಡಿದೆ.

ಮತಎಣಿಕೆಗೆ ಕ್ಷಣಗಣನೆ; ವಿಪಕ್ಷಗಳಿಗೆ ಮತ್ತೆ ಹಿನ್ನಡೆ, ವಿವಿಪ್ಯಾಟ್ ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ
ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಇವಿಎಂ ಸಂಬಂಧ ತೀವ್ರ ಅಸಮಾಧಾನಗೊಂಡಿರುವ ವಿಪಕ್ಷಗಳಿಗೆ ಮತ್ತೆ ಚುನಾವಣಾ ಆಯೋಗ ನಿರಾಸೆ ಮಾಡಿದ್ದು, ಮೊದಲಿಗೆ ವಿವಿಪ್ಯಾಟ್ ಎಣಿಕೆ ಸಾಧ್ಯವಿಲ್ಲ ಎಂದು ಹೇಳಿದೆ.

ನೆಹರೂ, ಇಂದಿರಾ ಬಳಿಕ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಜಯ ಗಳಿಸಿರುವ ಪ್ರಧಾನಿ ಮೋದಿ, ಈ ಭರ್ಜರಿ ಜಯದ ಮೂಲಕ ಈ ಹಿಂದೆ ಮಾಜಿ ಪ್ರಧಾನಿ ಗಳಾದ ದಿವಂಗತ ಇಂದಿರಾಗಾಂಧಿ ಮತ್ತು ದಿವಂಗತ ಜವಹರ್ ಲಾಲ್ ನೆಹರು ಅವರು ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

