Loksabha Election 2019

ಮೋದಿ ಜೀ ಗೆಲ್ಲುತ್ತಾರೆಂದು ಭಾವಿಸಿ ಸುಮ್ಮನಿರಬೇಡಿ, ಹೋಗಿ ಮತದಾನ ಮಾಡಿ: ಪ್ರಧಾನಿ ಮೋದಿ
ರ್ಯಾಲಿ, ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಾತ್ರಕ್ಕೇ ಗೆಲುವು ಸಾಧ್ಯವಿಲ್ಲ. ಮತದಾನದ ದಿನ ಹೋಗಿ ಮತದಾನ ಮಾಡಿದರೆ ಮಾತ್ರ ಗೆಲುವು ಸಾಧಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕ ಸಮರ: ಗುಜರಾತ್ ನ ಈ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನ!
ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ದೇಶಾದ್ಯಂತ ಮೂರನೇ ಹಂತದ ಹಾಗೂ ಕರ್ನಾಟಕದ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೊನೆಯ ಕ್ಷಣದಲ್ಲಿ ಬಿರುಸಿನ ಮತದಾನವಾಗುತ್ತಿದೆ.

2016ರಲ್ಲಿ ಬಾಕ್ಸಿಂಗ್ ಪಂದ್ಯಕ್ಕೆ ಪ್ರಧಾನಿ ಮೋದಿ ಆಹ್ವಾನಿಸಿದ್ದ ವಿಜೇಂದರ್ ಸಿಂಗ್ ಕಾಂಗ್ರೆಸ್ ಪಕ್ಷ ಸೇರಿದ್ದೇಕೆ?
ಬಾಕ್ಸರ್ ವಿಜೇಂದರ್ ಸಿಂಗ್ ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಹಿಂದೆ 2016ರಲ್ಲಿ ಬಾಕ್ಸಿಂಗ್ ಪಂದ್ಯಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದ ವಿಜೇಂದರ್ ಸಿಂಗ್ ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ವಿವಾದಾತ್ಮಕ ಹೇಳಿಕೆ: ಸಾಧ್ವಿ ಪ್ರಗ್ಯಾ ಸಿಂಗ್ ಗೆ ಬಿಗ್ ರಿಲೀಫ್, ಚುನಾವಣಾ ಸ್ಪರ್ಧೆ ತಡೆ ಅಸಾಧ್ಯ ಎಂದ ಕೋರ್ಟ್!
ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಚುನಾವಣಾ ಸ್ಪರ್ಧೆ ತಡೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ ವಿಶೇಷ ಕೋರ್ಟ್ ಹೇಳಿದೆ.

ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಸೇರ್ಪಡೆ, ಅಮೃತಸರದಿಂದ ಸ್ಪರ್ಧೆ ಸಾಧ್ಯತೆ!
ನಿರೀಕ್ಷೆಯಂತೆಯೇ ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಾನಂತು ಯಾವುದೇ ಮೋದಿ ಅಲೆ ನೋಡಿಲ್ಲ; ಕಾಂಗ್ರೆಸ್ ಟಿಕೆಟ್ ಸಿಕ್ಕ ಬಳಿಕ ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿಕೆ
ಒಲಂಪಿಕ್ ಪದಕ ವಿಜೇತ ಹಾಗೂ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ವಿಜೇಂದರ್ ಸಿಂಗ್ ದೆಹಲಿ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಇಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ವಿವಾದಿತ ಹೇಳಿಕೆ: ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಗೆ ಚುನಾವಣಾ ಆಯೋಗ ನೋಟಿಸ್
ಹೇಮಂತ್ ಕರ್ಕರೆ ಸಾವು ಮತ್ತು ಬಾಬ್ರಿ ಮಸೀದಿ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಪಶ್ಚಿಮ ಬಂಗಾಳ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದೆ: ಚುನಾವಣಾ ಆಯೋಗದ ವಿಶೇಷ ವೀಕ್ಷಕರು
ಹಾಲಿ ಪಶ್ಚಿಮ ಬಂಗಾಳ ರಾಜ್ಯ ಈ ಹಿಂದೆ ಅಂದರೆ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದ್ದು, ಇಲ್ಲಿನ ಪ್ರಜೆಗಳಿಗೆ ಚುನಾವಣೆ ಮತ್ತು ಜನಪ್ರತಿನಿಧಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಸನ್ನಿ ಡಿಯೋಲ್ ಅಮಿತ್ ಶಾ ಭೇಟಿ; ಅಮೃತಸರದಿಂದ ಸ್ಪರ್ಧೆ ಸಾಧ್ಯತೆ!
ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

