ದೇಶ

ಸನ್ನಿ ಡಿಯೋಲ್ ಅಮಿತ್ ಶಾ ಭೇಟಿ; ಅಮೃತಸರದಿಂದ ಸ್ಪರ್ಧೆ ಸಾಧ್ಯತೆ!

ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.

ಸನ್ನಿ ಡಿಯೋಲ್ ಅಮಿತ್ ಶಾ ಭೇಟಿ; ಅಮೃತಸರದಿಂದ ಸ್ಪರ್ಧೆ ಸಾಧ್ಯತೆ!
ಸನ್ನಿ ಡಿಯೋಲ್ ಅಮಿತ್ ಶಾ ಭೇಟಿ
Published On :
ನವದೆಹಲಿ: ಖ್ಯಾತ ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ಮೂಲಗಳ ಪ್ರಕಾರ ಹಾಲಿ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಡಿಯೋಲ್ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂತೆಯೇ ಬಿಜೆಪಿ ಮೂಲಗಳು ತಿಳಿಸಿರುವಂತೆ ಅವರು ಪಂಜಾಬ್ ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಅಮಿತ್ ಶಾರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಬಾಲಿವುಡ್ ನ ದಿಗ್ಗಜ ಕುಟುಂಬ ಧರ್ಮೇಂದ್ರ ಕುಟುಂಬದಿಂದ ಈಗಾಗಲೇ ಧರ್ಮೇಂದ್ರ ಅವರ ಧರ್ಮ ಪತ್ನಿ ಹೇಮಾಮಾಲಿನಿ ಬಿಜೆಪಿ ಸಂಸದರಾಗಿದ್ದು, ಮಥುರಾದಿಂದ ಮತ್ತೆ ಈ ಬಾರಿ ಆಯ್ಕೆ ಬಯಸಿದ್ದಾರೆ. ಇನ್ನು ಒಂದು ವೇಳೆ ಸನ್ನಿ ಡಿಯೋಲ್ ಗೆ ಬಿಜೆಪಿ ಮಣೆ ಹಾಕಿದ್ದೇ ಆದರೆ ಆಗ ಧರ್ಮೇಂದ್ರ ಕುಟುಂಬದಿಂದ ಮತ್ತೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದಂತಾಗುತ್ತದೆ.
ರಾಜಕೀಯವೇನಿಲ್ಲ, ಸಾಮಾನ್ಯ ಭೇಟಿ ಎಂದು ಸನ್ನಿ ಡಿಯೋಲ್ ಸ್ಪಷ್ಟನೆ
ಇನ್ನು ಭೇಟಿ ಬಳಿಕ ಮಾಧ್ಯಮಗಳಲ್ಲಿ ಉದ್ಭವವಾಗಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿರುವ ನಟ ಸನ್ನಿ ಡಿಯೋಲ್, ಇದೊಂದು ಸಾಮಾನ್ಯ ಭೇಟಿಯಷ್ಟೇ. ಇಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಎಂದು ಸನ್ನಿ ಡಿಯೋಲ್ ಸ್ಪಷ್ಟ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.