ದೇಶ

ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ: ವಿಪಕ್ಷಗಳ ಆರೋಪ, ದೂರು ದಾಖಲು

ಇವಿಎಂ ಟ್ಯಾಂಪರ್ ವಿವಾದದ ಬಳಿಕ ಹಾಲಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ವಿವಾದ ಕೇಳಿಬಂದಿದ್ದು, ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ ವಿಪಕ್ಷಗಳು ಆರೋಪಿಸಿವೆ.

ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ: ವಿಪಕ್ಷಗಳ ಆರೋಪ, ದೂರು ದಾಖಲು
ಅಭಿಷೇಕ್ ಮನು ಸಂಘ್ವಿ, ಸುದ್ದಿಗೋಷ್ಠಿ
Published On :
ನವದೆಹಲಿ: ಇವಿಎಂ ಟ್ಯಾಂಪರ್ ವಿವಾದದ ಬಳಿಕ ಹಾಲಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ವಿವಾದ ಕೇಳಿಬಂದಿದ್ದು, ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ ವಿಪಕ್ಷಗಳು ಆರೋಪಿಸಿವೆ.
Story image
ಈ ಬಗ್ಗೆ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಮನು ಸಂಘ್ವಿ, ತೃಣಮೂಲ ಕಾಂಗ್ರೆಸ್‌ ನ ದಿನೇಶ್ ತ್ರಿವೇದಿ ಮತ್ತು ರಾಜ್ಯ ಸಭೆ ಸದಸ್ಯ ಡೆರಿಕ್ ಒ ಬ್ರೇನ್ ಗಂಭೀರ ಆರೋಪ ಮಾಡಿದ್ದು, ಇವಿಎಂನಲ್ಲಿ 'ಕಮಲ' ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಪಕ್ಷಗಳ ಸುಮಾರು 10 ಜನ ನಾಯಕರ ತಂಡ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ದೂರಿನಲ್ಲಿ ವಿವಾದಿತ ಇವಿಎಂ ನಲ್ಲಿ ಬಿಜೆಪಿಯ ಚಿನ್ಹೆ ಕಮಲದ ಅಡಿಯಲ್ಲಿರುವ ಬಿಜೆಪಿ ಅಕ್ಷರವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಂಘ್ವಿ, 'ಇವಿಎಂನಲ್ಲಿ ಕಮಲದ ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಒಂದು ರಾಜಕೀಯ ಪಕ್ಷ ತನ್ನ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಜೊತೆಯಾಗಿ ಬಳಸಬಾರದು ಎಂದು ಹೇಳಿದ್ದಾರೆ.
ಅಂತೆಯೇ ಒಂದು ವೇಳೆ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಕ್ರಮಕ್ಕೆ ಮುಂದಾಗದಿದ್ದರೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿಯೂ ಸಂಘ್ವಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.