Karnataka

8.7 ಕೋಟಿ ರೂ ಸಾರ್ವಜನಿಕ ಹಣ ನೀರು ಪಾಲು: ಸಂಪರ್ಕ ರಸ್ತೆಯೇ ಇಲ್ಲದೆ ಅನಾಥವಾಗಿ ನಿಂತಿದೆ ಕಾರವಾರ ಹೆದ್ದಾರಿ ಸೇತುವೆ, ಸರ್ಕಾರದ ಯಡವಟ್ಟು ಎತ್ತಿ ತೋರಿಸಿದ CAG..!
2024ರ ಮಾರ್ಚ್‌ಗೆ ಅಂತ್ಯಗೊಂಡ ವರ್ಷದ ಸಿಎಜಿ ಅನುಸರಣೆ ಲೆಕ್ಕಪರಿಶೋಧನಾ ವರದಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ.

ಕಸ್ತೂರಿರಂಗನ್ ವರದಿ ವಿವಾದ: ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ವಾಕ್ಸಮರ..!
ಚರ್ಚೆ ವೇಳೆ ಪಶ್ಚಿಮ ಘಟ್ಟಗಳ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸುವ ಪ್ರಸ್ತಾವನೆಗೆ ರಾಜ್ಯವು ಬಲವಾದ ಹಾಗೂ ಒಗ್ಗಟ್ಟಿನ ಸಂದೇಶ ನೀಡಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿತು.

ರಾಜ್ಯದ ಹಲವೆಡೆ ವರುಣನ ಆರ್ಭಟ: ಬೆಂಗಳೂರು ಸೇರಿ ಪ್ರಮುಖ ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ!
ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಹಾಗೂ ಪಶ್ಚಿಮ ಮಧ್ಯ ಭಾಗದಲ್ಲಿ ಉಂಟಾಗಿರುವ ಗುರುತಿಸಲ್ಪಟ್ಟ ವಾಯುಭಾರ ಕುಸಿತದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ, ಮಾಹಿತಿ ನೀಡಿ; ತುಳು ಬೆನ್ನಲ್ಲೇ ಉರ್ದುಗೂ ಅಧಿಕೃತ ಭಾಷಾ ಸ್ಥಾನಮಾನಕ್ಕೆ SDPI ಆಗ್ರಹ: CMಗೆ ಪತ್ರ
ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಎಸ್‌ಡಿಪಿಐ(SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು, ಕರ್ನಾಟಕದಲ್ಲಿ ಉರ್ದುವಿಗೂ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದಾರೆ.

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ; ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!
ಅಧಿವೇಶನದ ಮೊದಲ ದಿನ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಬೆಂಗಳೂರು ಸೇರಿ ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ: ಆಕ್ಸ್‌ಫರ್ಡ್ ಸೂಚ್ಯಂಕದಲ್ಲಿ ಕಲಬುರಗಿಗೂ ರ‍್ಯಾಂಕ್..!
ಆಕ್ಸ್‌ಫರ್ಡ್ ಎಕನಾಮಿಕ್ಸ್ ವಿಶ್ವದ ಪ್ರಮುಖ ಸ್ವತಂತ್ರ ಆರ್ಥಿಕ ಸಲಹಾ ಸಂಸ್ಥೆಯಾಗಿದ್ದು, 200ಕ್ಕೂ ಹೆಚ್ಚು ದೇಶಗಳು, 100 ಕೈಗಾರಿಕಾ ವಲಯಗಳು ಹಾಗೂ 8,000 ನಗರಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸುತ್ತದೆ.

ಕ್ರೆಡಿಟ್ ನೀವೇ ಪಡೆದುಕೊಳ್ಳಿ, ರೈತರ ಸಾಲ ಮನ್ನಾ ಮಾಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯ
ರಾಜ್ಯಾದ್ಯಂತ ಬಡ ಕುಟುಂಬಗಳಿಗೆ 30x40 ಅಡಿ ಅಳತೆಯ 15 ಲಕ್ಷ ವಸತಿ ನಿವೇಶನಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಡಿಸೆಂಬರ್ ವೇಳೆಗೆ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದೆ.

ಕರ್ನಾಟಕದಲ್ಲಿ ಇವಿ ಕ್ರಾಂತಿ: ನೀತಿ ಆಯೋಗದ ಇಂಡೆಕ್ಸ್‌ನಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್!
ನೀತಿ ಆಯೋಗದ ಪ್ರಕಾರ, 84 ಅಂಕಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, 78 ಅಂಕಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ 73 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಬಳಿಕ ಚಂಡೀಗಢ 71 ಹಾಗೂ ಗೋವಾ 65 ಅಂಕಗಳನ್ನು ಗಳಿಸಿವೆ.

ಮರ್ಮಾಂಗ ತೋರಿಸಿ ವಿದ್ಯಾರ್ಥಿನಿಗೆ ಕಿರುಕುಳ; ಕಾಮುಕನಿಗೆ ಧರ್ಮದೇಟು, ರಕ್ಷಿಸಿದ ಯುವಕರನ್ನೇ ಬಂಧಿಸಿದ ಪೊಲೀಸರು!
ಬಾಗಲಕೋಟೆಯ ನವನಗರದ ಬಳಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಂಡು ಕಾಮುಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

