Karnataka

ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದಂತಿದೆ; 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ..?
ಬರಗೆಟ್ಟ ಆಡಳಿತ ನಡೆಸುತ್ತಿರುವ ಸರ್ಕಾರ, ಟೀಕೆಗೆ ಗುರಿಯಾಗಿರುವ ತನ್ನ ನೂರು ದಿನಗಳ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಬೆಂಗಳೂರು ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಲು ಹೊರಟಿದೆ.

ಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು KSTDC ಮಾಸ್ಟರ್‌ಪ್ಲಾನ್: ನವೆಂಬರ್‌ನಿಂದ 'ಮಯೂರ ರುಚಿ ಆನ್ ವೀಲ್ಸ್' ಸೇವೆ ಆರಂಭ..!
ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ.

ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!
ಮೂರು ಸಹೋದರರಲ್ಲಿ ಎರಡನೆಯವರಾದ ದಿವಾಕರ್ ಅವರಿಗೆ ಆರಂಭದಲ್ಲಿ ಕೃಷಿ ಅವರ ಆಯ್ಕೆಯಾಗಿರಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ತಂದೆಯ ಆರೈಕೆಗಾಗಿ ನೆಮ್ಮದಿಯಂತಿದ್ದ ಶಿಕ್ಷಕ ವೃತ್ತಿಗೆ ವಿರಾಮ ನೀಡಬೇಕಾಯಿತು. ಆ ನಿರ್ಧಾರವೇ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ ಶಿವಕುಮಾರ್ ಸ್ಪಷ್ಟನೆ
ಅರ್ಜಿ ನಮೂನೆಗಳನ್ನು ಎಲ್ಲಿಂದ ಮುದ್ರಿಸಲಾಯಿತು, ಅವು ಬಿಜೆಪಿಗೆ ಹೇಗೆ ತಲುಪಿದವು ಎಂಬ ವಿವರಗಳು ಹೊರಬರುತ್ತಿವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೂ ಸತ್ಯಾಂಶ ತಿಳಿದಿದೆ. ಆಯೋಗ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡೋಣ.

ರಾಜಕೀಯ ಒತ್ತಡಕ್ಕೆ ಮಣಿದು FIR ಹಾಕಬೇಡಿ, ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ: ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ಮನವಿ; Video
ಬಿಜೆಪಿ ಸಲ್ಲಿಸಿದ ಮನವಿಯಲ್ಲಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ರಾಜ್ಯ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದೆ ಹಾಗೂ ಚುನಾವಣಾ ವ್ಯವಸ್ಥೆಯಡಿ ತಮಗಿರುವ ಕಾನೂನುಬದ್ಧ ಹಕ್ಕುಗಳನ್ನು ಚಲಾಯಿಸುವ ನಾಗರಿಕರನ್ನು ಬೆದರಿಸುತ್ತಿದೆ ಎಂದು ಆರೋಪಿಸಿದೆ.

ಕರ್ನಾಟಕದ ಬರ ಪರಿಸ್ಥಿತಿ, ಬೆಳೆ ನಷ್ಟ ಪರಿಶೀಲನೆ: ಕೇಂದ್ರ ತಂಡ ರಾಜ್ಯಕ್ಕೆ ಆಗಮನ; ಸಿಎಂ ಸಭೆ; Video
ರಾಜ್ಯದಲ್ಲಿನ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ, ಮಳೆ ಕೊರತೆಯಿಂದ ಉಂಟಾಗಿರುವ ಹಾನಿಯ ಪ್ರಮಾಣವನ್ನು ಅಂದಾಜಿಸಲು ಕೇಂದ್ರದ ತಂಡ ಕರ್ನಾಟಕಕ್ಕೆ ಆಗಮಿಸಿದೆ. ಹೆಚ್ಚುವರಿ ಪ್ರದೇಶಗಳಲ್ಲೂ ವಾಸ್ತವಾಂಶ ಪರಿಶೀಲನೆ (Ground reality ) ನಡೆಯುತ್ತಿದೆ.

SIR ಬಳಿಕ ವಿಶೇಷ ನೋಂದಣಿ ಅಭಿಯಾನ: ಅಕ್ಟೋಬರ್ 27ಕ್ಕೆ ಆರಂಭ
SIR ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಅಭಿಯಾನ ನಡೆಯಲಿದೆ. ಕರ್ನಾಟಕದಲ್ಲಿ SIR ಬಳಿಕ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದ್ದು, ಆ ಬಳಿಕ ವಿಶೇಷ ನೋಂದಣಿ ಅಭಿಯಾನ ಆರಂಭವಾಗಲಿದೆ.

KPS ಯೋಜನೆ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಎಡಿಬಿ ಯಿಂದ 1,750 ಕೋಟಿ ರೂ ಸಾಲ; ಶಾಲೆಗಳಿಗೆ ಕಾರ್ಯಕ್ಷಮತೆಯ ಗುರಿ ನಿಗದಿ!
ಈ ನಿಟ್ಟಿನಲ್ಲಿ, 2030ರ ವೇಳೆಗೆ ಶಾಲೆಗಳು ಸಾಧಿಸಬೇಕಾದ ಗುರಿಗಳಿಗೆ ಸಂಬಂಧಿಸಿದಂತೆ ಇಲಾಖೆಯು ಹಣ ಬಿಡುಗಡೆಗೆ ಸಂಬಂಧಿಸಿದಂತೆ ಒಂಬತ್ತು ಸೂಚಕಗಳನ್ನು' (DLIs) ರೂಪಿಸಿದೆ.

ಫಲಾನುಭವಿಗಳಿಗೆ 5 ಗ್ಯಾರಂಟಿ ಯೋಜನೆ ತಲುಪಿಸಲು ಸರ್ಕಾರದ ಹೊಸ ಹೆಜ್ಜೆ: ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆಗೆ ಸೂಚನೆ..!
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರಗಳ ವಾರ್ಡ್ ಮಟ್ಟದಲ್ಲಿ ತಲಾ ಆರು ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ರಚಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.

