ICC World Cup 2019

ಮಹೇಂದ್ರ ಸಿಂಗ್ ಧೋನಿ ಮೇಲೆ ಸಂಪೂರ್ಣ ವಿಶ್ವಾಸ: ವಿರಾಟ್ ಕೊಹ್ಲಿ
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೊಂಡಾಡಿದ್ದಾರೆ.

ಐಸಿಸಿ ವಿಶ್ವಕಪ್ 2019: ವಿರಾಟ್ ಕೊಹ್ಲಿ ವಿಕೆಟ್ ಉರುಳಿಸುವುದೇ ಗುರಿ: ಮೊಯಿನ್ ಅಲಿ
ಭಾರತದ ವಿರುದ್ಧದ ಪಂದ್ಯದಲ್ಲಿ ಆ ತಂಡದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೇ ನನ್ನ ಗುರಿ ಎಂದು ಇಂಗ್ಲೆಂಡ್ ತಂಡದ ಬೌಲರ್ ಮೊಯಿನ್ ಅಲಿ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯ ಅತ್ಯಂತ ರೋಚಕ ಪಂದ್ಯವಾಗಲಿದೆ, ಭಾರತ ಗೆಲ್ಲುವ ಫೇವರಿಟ್: ಕೆ ಶ್ರೀಕಾಂತ್
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಣಾಹಣಿ ಟೂರ್ನಿಯ ಅತ್ಯಂತ ರೋಚಕ ಪಂದ್ಯವಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪುವ ತುಡಿತದಲ್ಲಿ ಭಾರತ!
ಸತತ ಎರಡು ಪಂದ್ಯಗಳಲ್ಲಿ ಸೋತು ಅಪಾಯದಂಚಿನಲ್ಲಿರುವ ಆತಿಥೇಯರಿಗೆ ಈ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಐಸಿಸಿ ವಿಶ್ವಕಪ್ 2019: ವೀಕ್ಷಕರ ಸಂಖ್ಯೆಯಲ್ಲೂ ದಾಖಲೆ ಬರೆದ ಭಾರತ-ಪಾಕ್ ಪಂದ್ಯ!
ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಇಡೀ ಟೂರ್ನಿಯ ಕೇಂದ್ರ ಬಿಂದುವಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮುಕ್ತಾಯವಾಗಿದ್ದರೂ, ಆ ಪಂದ್ಯದ ಕುರಿತ ಸುದ್ದಿಗಳು ಮಾತ್ರ ಇನ್ನೂ ನಿಂತಿಲ್ಲ.

ಬಾಂಗ್ಲಾದೇಶ ಸುಲಭ ತುತ್ತಲ್ಲ, ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ನಮಗೆ ಗೊತ್ತು: ಕೋಚ್ ಸುನಿಲ್ ಜೋಶಿ
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅಜೇಯರಾಗಿರಬಹುದು, ಆದರೆ ಟೀಂ ಇಂಡಿಯಾಗೆ ಬಾಂಗ್ಲಾದೇಶ ಖಂಡಿತಾ ಸುಲಭದ ತುತ್ತಾಗುವುದಿಲ್ಲ. ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ನಮಗೆ ಗೊತ್ತು ಎಂದು ಬಾಂಗ್ಲಾದೇಶ ಕೋಚ್ ಸುನಿಲ್ ಜೋಶಿ ಹೇಳಿದ್ದಾರೆ.

'ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಈ ತಂಡವನ್ನು ಮಣಿಸಿದ ತಂಡವೇ ವಿಶ್ವ ಚಾಂಪಿಯನ್ ಆಗಲಿದೆ'
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಈ ಪ್ರಬಲ ತಂಡವನ್ನು ಮಣಿಸುವವರೇ ಈ ಬಾರಿ ಚಾಂಪಿಯನ್ ಆಗಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.

ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನಕ್ಕೆ ಭಾರತ ತಂಡದ ನೆರವು ಅತ್ಯಗತ್ಯ: ಶೋಯಬ್ ಅಖ್ತರ್
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಮಾಡಲು ಭಾರತ ತಂಡದ ನೆರವು ಅತ್ಯಗತ್ಯ ಎಂದು ಮಾಜಿ ವೇಗಿ ಶೊಯಬ್ ಅಖ್ತರ್ ಹೇಳಿದ್ದಾರೆ.

ಸೆಮೀಸ್ ಕನಸು ಕಾಣುತ್ತಿರುವ ಬಾಂಗ್ಲಾಗೆ ಭಾರಿ ಪೆಟ್ಟು, ಮೊಹಮ್ಮದುಲ್ಲಾಗೆ ಗಾಯ!
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಪ್ರವೇಶಿಸುವ ಕನಸು ಕಾಣುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಭಾರಿ ಆಘಾತವಾಗಿದ್ದು, ತಂಡದ ಪ್ರಮುಖ ಆಲ್ ರೌಂಡರ್ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾಗೆ ಗಾಯಕ್ಕೆ ತುತ್ತಾಗಿದ್ದಾರೆ.

