ಮಹೇಂದ್ರ ಸಿಂಗ್ ಧೋನಿ ಮೇಲೆ ಸಂಪೂರ್ಣ ವಿಶ್ವಾಸ: ವಿರಾಟ್ ಕೊಹ್ಲಿ
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೊಂಡಾಡಿದ್ದಾರೆ.

Published On :
ಬರ್ಮಿಂಗ್ ಹ್ಯಾಮ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೊಂಡಾಡಿದ್ದಾರೆ.
ಎಡ್ಜ್ ಬ್ಯಾಸ್ಟನ್ ನಲ್ಲಿ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, 'ತಂಡಕ್ಕೆ ಧೋನಿ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಹಿಂದಿನ ಪಂದ್ಯದಲ್ಲೂ ನಾನು ಇದೇ ಮಾತನ್ನು ಹೇಳಿದ್ದೆ. ಧೋನಿ ಅವರಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ಅರಿವಿದೆ. ನಮಗೆ ಅವರ ಆಟದ ಮೇಲೆ ನಂಬಿಕೆ ಇದೆ. ಅವರು ಯಾವಾಗಲೂ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗ ಬಲ್ಲ ಆಟಗಾರ. ಟೂರ್ನಿಯಲ್ಲಿ ಅವರ ಪ್ರದರ್ಶನ ಸಂತಸ ತಂದಿದೆ' ಎಂದು ಹೇಳಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಿಚ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾವು ಶಾಟ್ ಸೆಲೆಕ್ಷನ್ ಕುರಿತು ಮಾತನಾಡಿದ್ದೆವು. ಈ ವೇಳೆ ಧೋನಿ ಸಾಕಷ್ಟು ಟಿಪ್ಸ್ ನೀಡಿದ್ದರು. ತಂಡ ಸಂಕಷ್ಟದಲ್ಲಿದ್ದಾಗ ಧೋನಿ ಖಂಡಿತಾ ನೆರವಾಗುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.
ಅಂತೆಯೇ ತಂಡದ ಬೌಲರ್ ಗಳ ಕುರಿತು ಮಾತನಾಡಿದ ಕೊಹ್ಲಿ, 'ಭುವಿ ವಿಶ್ವ ದರ್ಜೆಯ ಬೌಲರ್. ಶಮಿ ಕಳೆದ ಒಂದು ವರ್ಷದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರು ವಿಕೆಟ್ ಪಡೆಯುವುದರೊಂದಿಗೆ ಫಿಟ್ ಆಗಿದ್ದಾರೆ. ಭುವಿ ಅವರು ಫಿಟ್ ಆಗುತ್ತಿದ್ದು, ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದು ಚಿಂತೆ ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಅಂತೆಯೇ ವಿಜಯ್ ಶಂಕರ್ ಗೆ ಬೆಂಬಲ ನೀಡಿದ ಕೊಹ್ಲಿ, ಪ್ರಸ್ತುತ ನಾಲ್ಕನೇ ಕ್ರಮಾಂಕಕ್ಕೆ ವಿಜಯ್ ಶಂಕರ್ ಗಿಂತ ಉತ್ತಮ ಆಯ್ಕೆ ಬೇರೆ ಕಾಣುತ್ತಿಲ್ಲ. ತಮಗೆ ಸಿಕ್ಕ ಅವಕಾಶವನ್ನು ಶಂಕರ್ ಉತ್ತಮವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್indiaಭಾರತVirat Kohliವಿರಾಟ್ ಕೊಹ್ಲಿಇಂಗ್ಲೆಂಡ್EnglandICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


