ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನಕ್ಕೆ ಭಾರತ ತಂಡದ ನೆರವು ಅತ್ಯಗತ್ಯ: ಶೋಯಬ್ ಅಖ್ತರ್
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಮಾಡಲು ಭಾರತ ತಂಡದ ನೆರವು ಅತ್ಯಗತ್ಯ ಎಂದು ಮಾಜಿ ವೇಗಿ ಶೊಯಬ್ ಅಖ್ತರ್ ಹೇಳಿದ್ದಾರೆ.

Published On :
ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಮಾಡಲು ಭಾರತ ತಂಡದ ನೆರವು ಅತ್ಯಗತ್ಯ ಎಂದು ಮಾಜಿ ವೇಗಿ ಶೊಯಬ್ ಅಖ್ತರ್ ಹೇಳಿದ್ದಾರೆ.
ಈ ಕುರಿತಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅಖ್ತರ್, 'ಭಾರತ ತಂಡದವರೆ, ಪಾಕಿಸ್ತಾನ ತಂಡವು ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲು ದಯವಿಟ್ಟು ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
'ಭಾರತ ತಂಡದವರು ಭಾನುವಾರ ಇಂಗ್ಲೆಂಡ್ ಎದುರು ಆಡಲಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಗೆದ್ದರೆ ಇಂಗ್ಲೆಂಡ್ ಟೂರ್ನಿಯಿಂದ ಹೊರಬೀಳಲಿದೆ. ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕಿಸ್ತಾನವು ತನ್ನ ಪಾಲಿನ ಕೊನೆಯ ಎರಡು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಮಣಿಸಿದರೆ ತಂಡದ ಒಟ್ಟು ಪಾಯಿಂಟ್ಸ್ 11ಕ್ಕೇರಲಿದೆ. ಆಗ ಸೆಮಿಫೈನಲ್ ಹಾದಿ ಸುಗಮವಾಗಲಿದೆ ಎಂದು ಅಖ್ತರ್ ಹೇಳಿದ್ದಾರೆ.
ಸೆಮೀಸ್ ನಲ್ಲಿ ಪಾಕ್ ವಿರುದ್ದ ಭಾರತಕ್ಕೆ ಸೋಲು
ಅಂತೆಯೇ 'ಪಾಕಿಸ್ತಾನ ತಂಡವು ಹಿಂದಿನ ಎರಡು ಪಂದ್ಯಗಳಲ್ಲಿ ಗೆದ್ದು ಭರವಸೆ ಮೂಡಿಸಿದೆ. ಈಗ ಚೆಂಡು ಭಾರತದ ಅಂಗಳದಲ್ಲಿದೆ. ಕೊಹ್ಲಿ ಪಡೆ ಮೇಲೆ ಪಾಕಿಸ್ತಾನದವರ ಚಿತ್ತ ನೆಟ್ಟಿದೆ. ಭಾರತವು ಇಂಗ್ಲೆಂಡ್ ಎದುರು ಗೆಲ್ಲಲಿ ಎಂಬುದು ನಮ್ಮ ಹಾರೈಕೆ. ನಮ್ಮ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ, ನಾಲ್ಕರ ಘಟ್ಟದಲ್ಲಿ ಖಂಡಿತವಾಗಿಯೂ ನಿಮ್ಮನ್ನು (ಭಾರತ) ಸೋಲಿಸುತ್ತಾರೆ’ ಎಂದು ಅಕ್ತರ್ ಭವಿಷ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್indiaಭಾರತPakistanಪಾಕಿಸ್ತಾನShoaib AkhtarICC World Cup 2019ಐಸಿಸಿ ವಿಶ್ವಕಪ್ 2019ಶೋಯೆಬ್ ಅಖ್ತರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


