demonetization

ಡಿಸೆಂಬರ್ 17ರವರೆಗೆ ಹವಾಲ ಏಜೆಂಟ್ ವೀರೇಂದ್ರಗೆ ನ್ಯಾಯಾಂಗ ಬಂಧನ
ಕಳೆದ ಶನಿವಾರ ಬಂಧನಕ್ಕೀಡಾಗಿದ್ದ ಹವಾಲ ಏಜೆಂಟ್ ವೀರೇಂದ್ರ ಅವರನ್ನು ಡಿಸೆಂಬರ್ 17ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ, ಜನಸಭೆಯಲ್ಲಿ ಮಾತನಾಡುತ್ತೇನೆ: ಪ್ರಧಾನಿ ಮೋದಿ
ನೋಟು ನಿಷೇಧ ಕುರಿತಂತೆ ತಮ್ಮ ಪ್ರತಿಕ್ರಿಯೆ ಬಯಸಿದ್ದ ಪ್ರತಿಪಕ್ಷಗಳು ಸದನದಲ್ಲಿ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ಲೋಕಸಭೆಯಲ್ಲಿ ಅವಕಾಶ ಸಿಗದಿದ್ದರೇನು ಜನಸಭೆಯಲ್ಲಿ ಮಾತನಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಚೆನ್ನೈ ಐಟಿ ದಾಳಿ: ವೆಲ್ಲೂರಿನಲ್ಲಿ ಮತ್ತೆ 24 ಕೋಟಿ ಹೊಸ ನೋಟುಗಳು ಪತ್ತೆ!
ಚೆನ್ನೈನಲ್ಲಿ ದಾಳಿ ಮಾಡಿದ್ದ ಆದಾಯ ತೆರಿಗೆ ಅಧಿಕಾರಿಗಳು ಭಾರಿ ಪ್ರಮಾಣದ ಅಕ್ರಮ ನಗದು ವಶಪಡಿಸಿಕೊಂಡಿದ್ದ ಪ್ರಕರಣದ ಬೆನ್ನಲ್ಲೇ ಮತ್ತೆ ವೆಲ್ಲೂರಿನಲ್ಲಿ 24 ಕೋಟಿ ಅಕ್ರಮ ಹೊಸ ನೋಟುಗಳು ಪತ್ತೆಯಾಗಿವೆ.

TNIE Reality Check. ಕ್ಯಾಶ್ ಲೆಸ್ ವಹಿವಾಟು ಎಂದರೆ ಖಾಲಿ ಎಟಿಎಂ ಎಂಬ ಅರ್ಥವಲ್ಲ!
ದೇಶದ ಶೇ.95ರಷ್ಟು ಎಟಿಎಂಗಳು ಸಾಮಾನ್ಯದಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕೇಂದ್ರ ಸರ್ಕಾರದ ಈ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ?...

3 ದಿನ ಬ್ಯಾಂಕ್ ಮುಂದೆ ನಿಂತರೂ ಬದಲಾವಣೆಯಾಗದ ಹಳೆಯ ನೋಟು; ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು
ಹಳೆಯ ನೋಟು ಬದಲಾವಣೆಗಾಗಿ ಸತತ 3 ದಿನಗಳ ಕಾಲ ಬ್ಯಾಂಕ್ ಮುಂದೆ ನಿಂತರೂ ಹಣ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ವಿಫಲವಾದ ಮಹಿಳೆಯೊಬ್ಬಳು ತೀವ್ರ ನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ.

ಚಿಕ್ಕರಾಯಪ್ಪ, ಜಯಚಂದ್ರ ಸಂಬಂಧಿಗಳ ಮನೆ ಮೇಲೆ ಎಸಿಬಿ ದಾಳಿ!
ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿಗೊಳಗಾಗಿದ್ದ ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ಸಂಬಂಧಿಕರ ಮನೆಗಳ ಮೇಲೆ ಇದೀಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ
ಟೀ ಮಾರುವವನಂತೆ ಬಂದ ನರೇಂದ್ರ ಮೋದಿಯವರು ದೇಶದ ಹಣವನ್ನು ಹೊತ್ತು ಓಡಿಹೋಗುತ್ತಿದ್ದಾರೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರ...

ನೋಟು ನಿಷೇಧ ವಿರುದ್ಧ ಅರ್ಜಿ ವಿಚಾರಣೆ ಡಿಸೆಂಬರ್ 9ಕ್ಕೆ ಮುಂದೂಡಿಕೆ!
ನೋಟು ನಿಷೇಧ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಜನ್ ಧನ್ ಖಾತೆಯಲ್ಲಿರುವ ಕಪ್ಪುಹಣ ಕಾಳಧನಿಕರಿಗೆ ಕೊಡಬೇಡಿ; ಅದು ಬಡವರ ಹಣ: ಪ್ರಧಾನಿ ಮೋದಿ
ನೋಟು ನಿಷೇಧದ ಬಳಿಕ ಜನ್ ಧನ್ ಖಾತೆಗಳಲ್ಲಿ ಕಪ್ಪುಹಣ ಹಾಕುವ ಮೂಲಕ ಬಿಳಿಯಾಗಿಸುವ ಯತ್ನ ಮಾಡುತ್ತಿರುವ ಕಾಳಧನಿಕರಿಗೆ ಪ್ರಧಾನಿ ಮೋದಿ ಭರ್ಜರಿ ಶಾಕ್ ನೀಡಿದ್ದು, ಜನ್ ಧನ್ ಖಾತೆಗಳಲ್ಲಿರುವ ಕಪ್ಪುಹಣವನ್ನು ಕಾಳಧನಿಕರಿಗೆ ಹಿಂದುರುಗಿಸದಂತೆ ಕರೆ ನೀಡಿದ್ದಾರೆ.

