Bihar Politics

"ನಾನು ಕೃಷ್ಣ, ನನ್ನ ತಮ್ಮ ಅರ್ಜುನ; ಇಲ್ಲಿಂದಲೇ ಬಿಜೆಪಿ ನಾಶ ಆರಂಭ"!
ಮಹಾಮೈತ್ರಿಕೂಟ ತ್ಯಜಿಸಿ ಬಿಜೆಪಿ ತೆಕ್ಕೆಗೆ ಜಾರಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಅವರು ರಣ ಕಹಳ ಮೊಳಗಿಸಿದ್ದು, ನಾನು ಕೃಷ್ಣ, ನನ್ನ ತಮ್ಮ ತೇಜಸ್ವಿ ಯಾದವ್ ಅರ್ಜುನ; ಇಲ್ಲಿಂದಲೇ ಬಿಜೆಪಿ ನಾಶ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ನಿಜವಾದ ಜೆಡಿಯು ನಿಮ್ಮ ಬಳಿ ಇದ್ದರೆ, ಬಹುಮತ ಸಾಬೀತು ಪಡಿಸಿ: ನಿತೀಶ್ ಕುಮಾರ್
ಜೆಡಿಯು ಪಕ್ಷದಲ್ಲಿನ ಶೀಥಲ ಸಮರ ತಾರಕಕ್ಕೇರಿದ್ದು, ಪಕ್ಷದ ಚಿನ್ಹೆಗಾಗಿ ಶರದ್ ಬಣ ಚುನಾವಣಾ ಆಯೋಗದ ಮೊರೆ ಹೋಗಲ ನಿರ್ಧರಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಬಣ ಕೂಡ ಸವಾಲೊಂದನ್ನು ಎಸೆದಿದೆ.

ಲಕ್ಷಣ ರೇಖೆ ದಾಟದಿರಿ: ಶರದ್ ಯಾದವ್ ಗೆ ಜೆಡಿಯು ಎಚ್ಚರಿಕೆ
ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಅವರು ಆರ್ ಜೆಡಿ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡರೆ ಖಂಡಿತಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಜೆಡಿಯು ಸ್ಪಷ್ಟಪಡಿಸಿದೆ.

ಉಚ್ಛಾಟಿತ ಜೆಡಿಯು ಮುಖಂಡ ಶಿವಾನಂದ ತಿವಾರಿ ಆರ್ ಜೆಡಿ ಉಪಾಧ್ಯಕ್ಷರಾಗಿ ಆಯ್ಕೆ!
ಬಿಹಾರ ರಾಜಕೀಯ ಶೀಥಲ ಸಮರ ಇನ್ನೂ ಮುಂದುವರೆದಿದ್ದು, ಇತ್ತೀಚೆಗಷ್ಟೇ ಜೆಡಿಯು ಪಕ್ಷದಿಂದ ಹೊರಬಿದಿದ್ದಿ ಮಾಜಿ ಸಂಸದ ಹಾಗೂ ಪಕ್ಷದ ಹಿರಿಯ ಮುಖಂಡ ಶಿವಾನಂದ ತಿವಾರಿ ಆರ್ ಜೆಡಿ ಪಕ್ಷ ಸೇರಿದ್ದು, ಅವರನ್ನು ಆರ್ ಜೆಡಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಎಐಎಡಿಎಂಕೆ ಬಳಿಕ ಜೆಡಿಯು ನಲ್ಲೂ ಶುರುವಾಯ್ತು ಪಕ್ಷದ ಚಿನ್ಹೆಗಾಗಿ ಹಗ್ಗಜಗ್ಗಾಟ!
ಇತ್ತೀಚೆಗಷ್ಟೇ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ಬಕ್ಷದ ಚಿನ್ಹೆಗಾಗಿ ಕಚ್ಚಾಡಿ ರಾದ್ಧಾಂತ ಮಾಡಿಕೊಂಡ ಪ್ರಕರಣ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪರಿಸ್ಥಿತಿ ಬಿಹಾರದ ಜೆಡಿಯು ಪಕ್ಷಕ್ಕೂ ಬರುವ ಮುನ್ಸೂಚನೆ ಲಭಿಸಿದೆ.

ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ರಚನೆ ಪ್ರಶ್ನಿಸಿ ಆರ್ ಜೆಡಿ ಸಲ್ಲಿಸಿದ್ದ ಆರ್ಜಿ ವಜಾ!
ಬಿಜೆಪಿ ಜೊತೆಗೂಡಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ರಚನೆ ಮಾಡಿದ್ದ ಸರ್ಕಾರ ಕಾನೂನು ಬಾಹಿರ ಎಂದು ಆರೋಪಿಸಿ ಆರ್ ಜೆಡಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಪಾಟ್ನಾ ಹೈಕೋರ್ಟ್ ವಜಾ ಮಾಡಿದೆ.

"ಜೈ ಶ್ರೀರಾಮ್" ಎಂದ ಬಿಹಾರ ಸಚಿವನ ವಿರುದ್ಧ ಫತ್ವಾ ಜಾರಿ!
ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ ಬಿಹಾರ ಸಚಿವರ ವಿರುದ್ಧ ಅಲ್ಲಿನ ಇಮಾರತ್ -ಇ-ಶರಿಯಾ ಫತ್ವಾ ಹೊರಡಿಸಲಾಗಿದೆ.

ಆರ್ ಜೆಡಿ ಸಖ್ಯ ತೊರೆದ ನಿತೀಶ್ ಗೆ "ವಿಶ್ವಾಸ ಮತ"ದ ಸವಾಲು!
ಗುರುವಾರ 6ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಿದೆ.

ಕುತೂಹಲ ಮೂಡಿಸಿದ ಶರದ್ ಯಾದವ್-ರಾಹುಲ್ ಗಾಂಧಿ ಭೇಟಿ
ಆರ್ ಜೆಡಿ ಜೊತೆಗಿನ ಮೈತ್ರಿ ಮುರಿದು ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿರುವ ನಿತೀಶ್ ಕುಮಾರ್ ಅವರ ನಿಲುವು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

