ದೇಶ

ಉಚ್ಛಾಟಿತ ಜೆಡಿಯು ಮುಖಂಡ ಶಿವಾನಂದ ತಿವಾರಿ ಆರ್ ಜೆಡಿ ಉಪಾಧ್ಯಕ್ಷರಾಗಿ ಆಯ್ಕೆ!

ಬಿಹಾರ ರಾಜಕೀಯ ಶೀಥಲ ಸಮರ ಇನ್ನೂ ಮುಂದುವರೆದಿದ್ದು, ಇತ್ತೀಚೆಗಷ್ಟೇ ಜೆಡಿಯು ಪಕ್ಷದಿಂದ ಹೊರಬಿದಿದ್ದಿ ಮಾಜಿ ಸಂಸದ ಹಾಗೂ ಪಕ್ಷದ ಹಿರಿಯ ಮುಖಂಡ ಶಿವಾನಂದ ತಿವಾರಿ ಆರ್ ಜೆಡಿ ಪಕ್ಷ ಸೇರಿದ್ದು, ಅವರನ್ನು ಆರ್ ಜೆಡಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಉಚ್ಛಾಟಿತ ಜೆಡಿಯು ಮುಖಂಡ ಶಿವಾನಂದ ತಿವಾರಿ ಆರ್ ಜೆಡಿ ಉಪಾಧ್ಯಕ್ಷರಾಗಿ ಆಯ್ಕೆ!
ಶಿವಾನಂದ ತಿವಾರಿ ಹಾಗೂ ಲಾಲು ಪ್ರಸಾದ್ ಯಾದವ್
Published On :

ಪಾಟ್ನಾ: ಬಿಹಾರ ರಾಜಕೀಯ ಶೀಥಲ ಸಮರ ಇನ್ನೂ ಮುಂದುವರೆದಿದ್ದು, ಇತ್ತೀಚೆಗಷ್ಟೇ ಜೆಡಿಯು ಪಕ್ಷದಿಂದ ಹೊರಬಿದಿದ್ದಿ ಮಾಜಿ ಸಂಸದ ಹಾಗೂ ಪಕ್ಷದ ಹಿರಿಯ ಮುಖಂಡ ಶಿವಾನಂದ ತಿವಾರಿ ಆರ್ ಜೆಡಿ ಪಕ್ಷ ಸೇರಿದ್ದು, ಅವರನ್ನು  ಆರ್ ಜೆಡಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಸ್ವತಃ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮಾಹಿತಿ ನೀಡಿದ್ದು, ಶಿವಾನಂದ ತಿವಾರಿ ಅವರನ್ನು ಆರ್ ಜೆಡಿ ಪಕ್ಷದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಶಿವಾನಂದ ತಿವಾರಿ ಮತ್ತು ಜೆಡಿಯುನ ಇತರೆ ನಾಲ್ಕು ಸಂಸದರನ್ನು ಪಕ್ಷವಿರೋಧಿ ಚಟುವಟಿಕೆಯ ಆರೋಪದ ಮೇರೆಗೆ ನಿತೀಶ್ ಕುಮಾರ್ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಜೆಡಿಯು ಮುಖ್ಯಸ್ಥ ಶರದ್  ಯಾದವ್ ಅವರ ಆಪ್ತರಲ್ಲಿ ಪ್ರಮುಖರಾಗಿದ್ದ ಶಿವಾನಂದ ತಿವಾರಿ ಅವರನ್ನು ಪಕ್ಷದಿಂದ ಹೊರ ಹಾಕುವ ಮೂಲಕ ನಿತೀಶ್ ಕುಮಾರ್ ಶರದ್ ಯಾದವ್ ಅವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದರು. ಇದೀಗ ಶಿವಾನಂದ್ ತಿವಾರಿ  ಆವರು ಆರ್ ಜೆಡಿ ಪಕ್ಷ ಸೇರಿದ್ದು, ಅವರಿಗೆ ಪಕ್ಷದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.