ಎಐಎಡಿಎಂಕೆ ಬಳಿಕ ಜೆಡಿಯು ನಲ್ಲೂ ಶುರುವಾಯ್ತು ಪಕ್ಷದ ಚಿನ್ಹೆಗಾಗಿ ಹಗ್ಗಜಗ್ಗಾಟ!
ಇತ್ತೀಚೆಗಷ್ಟೇ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ಬಕ್ಷದ ಚಿನ್ಹೆಗಾಗಿ ಕಚ್ಚಾಡಿ ರಾದ್ಧಾಂತ ಮಾಡಿಕೊಂಡ ಪ್ರಕರಣ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪರಿಸ್ಥಿತಿ ಬಿಹಾರದ ಜೆಡಿಯು ಪಕ್ಷಕ್ಕೂ ಬರುವ ಮುನ್ಸೂಚನೆ ಲಭಿಸಿದೆ.

ಪಾಟ್ನಾ: ಇತ್ತೀಚೆಗಷ್ಟೇ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ಬಕ್ಷದ ಚಿನ್ಹೆಗಾಗಿ ಕಚ್ಚಾಡಿ ರಾದ್ಧಾಂತ ಮಾಡಿಕೊಂಡ ಪ್ರಕರಣ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪರಿಸ್ಥಿತಿ ಬಿಹಾರದ ಜೆಡಿಯು ಪಕ್ಷಕ್ಕೂ ಬರುವ ಮುನ್ಸೂಚನೆ ಲಭಿಸಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಮುನಿಸಿಕೊಂಡಿದ್ದ ಜೆಡಿಯು ಪಕ್ಷದ ಹಿರಿಯ ಮುಖಂಡ ಶರದ್ ಯಾದವ್ ಅವರು ಇದೀಗ ಪಕ್ಷದ ಚಿನ್ಹೆ ಬಾಣದ ಗುರುತಿಗಾಗಿ ಚುನಾವಣಾ ಆಯೋಗದ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ನಿಜವಾಜ ಜೆಡಿಯು ಪಕ್ಷ ಇನ್ನೂ ತಮ್ಮ ಬಳಿಯಲ್ಲೇ ಇದ್ದು, ನಿಜವಾದ ಜೆಡಿಯು ಪಕ್ಷದ ಸದಸ್ಯರೊಂದಿಗೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅರ್ಜಿ ಸಲ್ಲಿಸುವುದಾಗಿ ಶರದ್ ಯಾದವ್ ಬಣದ ಮುಖಂಡ ಎಂಐ ಖಾನ್ ತಿಳಿಸಿದ್ದಾರೆ.
ಬಿಹಾರದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಜೆಡಿಯು ಪಕ್ಷದ ಅಸ್ತಿತ್ವವಿದ್ದು, ಎಲ್ಲ ರಾಜ್ಯಗಳ ಶಾಸಕ ಹಾಗೂ ಸಂಸದರು ಶರದ್ ಯಾದವ್ ಬಣದೊಂದಿಗಿದ್ದಾರೆ. ಹೀಗಾಗಿ ಶರದ್ ಯಾದವ್ ಅವರದ್ದೇ ನಿಜವಾದ ಜೆಡಿಯು ಪಕ್ಷವಾಗಿದ್ದು, ಅವರ ಬಣಕ್ಕೇ ಪಕ್ಷದ ಬಾಣದ ಗುರುತನ್ನು ಚಿನ್ಹೆಯಾಗಿ ನೀಡಬೇಕು ಎಂದು ಕೆಲ ಮುಖಂಡರು ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಸಿಎಂ ನಿತೀಶ್ ಕುಮಾರ್ ಅವರು ಜೆಡಿಯು ಪಕ್ಷದಲ್ಲಿದ್ದ ಶರದ್ ಯಾದವ್ ಬಣದ ಮುಖಂಡರನ್ನು ಪಕ್ಷದ ವಿವಿಧ ಹುದ್ದೆಗಳಿಂದ ಕಿತ್ತೊಗೆದಿದ್ದರು. ಅಲ್ಲದೆ ಶರದ್ ಯಾದವ್ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಎಂದು ಹೇಳುವ ಮೂಲಕ ಪಕ್ಷರೋವಾಗಿ ಶರದ್ ಯಾದವ್ ಅವರಿಗೆ ಟಾಂಗ್ ನೀಡಿದ್ದರು. ಇದೀಗ ನಿತೀಶ್ ಬಣಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಶರದ್ ಯಾದವ್ ಬಣ ಪಕ್ಷದ ಚಿನ್ಹೆಗಾಗಿ ಚುನಾವಣಾ ಆಯೋಗದ ಮೊರೆ ಹೋಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


