ನಿಜವಾದ ಜೆಡಿಯು ನಿಮ್ಮ ಬಳಿ ಇದ್ದರೆ, ಬಹುಮತ ಸಾಬೀತು ಪಡಿಸಿ: ನಿತೀಶ್ ಕುಮಾರ್
ಜೆಡಿಯು ಪಕ್ಷದಲ್ಲಿನ ಶೀಥಲ ಸಮರ ತಾರಕಕ್ಕೇರಿದ್ದು, ಪಕ್ಷದ ಚಿನ್ಹೆಗಾಗಿ ಶರದ್ ಬಣ ಚುನಾವಣಾ ಆಯೋಗದ ಮೊರೆ ಹೋಗಲ ನಿರ್ಧರಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಬಣ ಕೂಡ ಸವಾಲೊಂದನ್ನು ಎಸೆದಿದೆ.

ಪಾಟ್ನಾ: ಜೆಡಿಯು ಪಕ್ಷದಲ್ಲಿನ ಶೀಥಲ ಸಮರ ತಾರಕಕ್ಕೇರಿದ್ದು, ಪಕ್ಷದ ಚಿನ್ಹೆಗಾಗಿ ಶರದ್ ಬಣ ಚುನಾವಣಾ ಆಯೋಗದ ಮೊರೆ ಹೋಗಲ ನಿರ್ಧರಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಬಣ ಕೂಡ ಸವಾಲೊಂದನ್ನು ಎಸೆದಿದೆ.
ನಿಜವಾದ ಜೆಡಿಯು ಶರದ್ ಯಾದವ್ ಅವರ ಬಳಿ ಇದ್ದರೆ ಅವರು ಬಹುಮತ ಸಾಬೀತು ಪಡಿಸಲಿ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಶನಿವಾರ ಪಕ್ಷದ ಸಭೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು, ಶರದ್ ಯಾದವ್ ಅವರು ತಮ್ಮ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ. ನಾನು ಈ ಹಿಂದೆಯೇ ಹೇಳಿದಂತೆ ಶರದ್ ಯಾದವ್ ಮತ್ತು ಅವರ ಬೆಂಬಲಿಗ ಶಾಸಕ ಮತ್ತು ಸಂಸದರು ಪಕ್ಷ ತೊರೆದರೆ ಅದರಿಂದ ತಮ್ಮ ಸರ್ಕಾರಕ್ಕೇನೂ ತೊಂದರೆ ಇಲ್ಲ.
ಶರದ್ ಯಾದವ್ ಅವರು ತಮ್ಮ ಬೆಂಬಲಿತ ಶಾಸಕರನ್ನು ಮುಂದಿಟ್ಟುಕೊಂಡು ಪಕ್ಷವನ್ನು ಇಬ್ಭಾಗ ಮಾಡುವ ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆಲ್ಲಾ ತಾವು ಬಗ್ಗುವುದಿಲ್ಲ. ಒಂದು ವೇಳೆ ಶರದ್ ಯಾದವ್ ಅವರ ಬಳಿಯಲ್ಲೇ ನಿಜವಾದ ಜೆಡಿಯು ಇದ್ದರೆ ಅವರು ಅದನ್ನು ಸಾಬೀತು ಪಡಿಸಲಿ. ಪಕ್ಷದಳೊಗೆ ಅವರು ತಮ್ಮ ಬಹುಮತ ಸಾಬೀತು ಪಡಿಸಲು. ಪಕ್ಷದಲ್ಲಿ ಶರದ್ ಯಾದವ್ ಅವರು 2/3ರಷ್ಟು ಬೆಂಬಲ ಪಡೆದು ತೋರಿಸಲಿ ಎಂದು ನಿತೀಶ್ ಕುಮಾರ್ ಸವಾಲೆಸೆದಿದ್ದಾರೆ.
ಅಂತೆಯೇ ಜೆಡಿಯು ಈ ಹಿಂದೆ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಾಗ ಪ್ರಶ್ನಿಸದ ಶರದ್ ಯಾದವ್ ಅವರು ಇದೀಗ ಏಕೆ ಮಹಾಘಟ್ ಬಂಧನದಿಂದ ಹೊರಬಂದಾಗ ಪ್ರಶ್ನಿಸುತ್ತಿದ್ದಾರೆ ತಿಳಿಯುತ್ತಿಲ್ಲ. ಮೈತ್ರಿಯಿಂದ ಹೊರಬರುತ್ತಿದ್ದಾಗ ಸುಮ್ಮನ್ನಿದ್ದು, ಇದೀಗ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪ್ರಶ್ನಿಸುವುದು ಸರಿಯಲ್ಲ ಎಂದು ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.
ಬಹುಮತ ಸಾಬೀತು ಪಡಿಸಿ, ಇಲ್ಲವಾದರೆ ನಿಮ್ಮ ಸದಸ್ಯತ್ವವೇ ರದ್ದು!
ಇದೇ ವೇಳೆ ಪಕ್ಷವನ್ನು ಇಬ್ಙಾಗದತ್ತ ಕೊಂಡೊಯ್ಯುತ್ತಿರುವ ಶರದ್ ಯಾದವ್ ಅವರ ವಿರುದ್ಧ ಕಿಡಿಕಾರಿದ ನಿತೀಶ್ ಕುಮಾರ್ ಅವರು, ಪಕ್ಷದಲ್ಲಿನ ಆಂತರಿಕಗೊಂದಲಗಳಿಂದಾಗಿ ಪಕ್ಷ ತೀವ್ರ ಮುಜುಗರಕ್ಕೊಳಗಾಗಿದೆ. ಹೀಗಾಗಿ ಇಂತಹ ಪ್ರಕ್ರಿಯೆಗಳಿಗೆ ತಾವು ಆಸ್ಪದ ನೀಡುವುದಿಲ್ಲ. ಶರದ್ ಯಾದವ್ ಅವರು ಪಕ್ಷದಲ್ಲಿ 2/3ರಷ್ಟು ಬೆಂಬಲ ಪಡೆದು ತೋರಿಸಬೇಕು. ಇಲ್ಲವಾದಲ್ಲಿ ಅವರ ಸದಸ್ಯತ್ವವನ್ನು ವಜಾ ಮಾಡಲಾಗುತ್ತದೆ ಎಂದು ನಿತೀಶ್ ಕುಮಾರ್ ಅಂತಿಮ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


