ಕ್ರೀಡೆ

Olympics ಐತಿಹಾಸಿಕ ಸಾಧನೆ; ಚಿನ್ನ ಗೆದ್ದ ನೊವಾಕ್ ಜೊಕೋವಿಕ್!

ಈ ಗೆಲುವಿನ ಮೂಲಕ 37 ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಗೆ ಜೊಕೊವಿಕ್ ಭಾಜನರಾಗಿದ್ದಾರೆ.

Olympics ಐತಿಹಾಸಿಕ ಸಾಧನೆ; ಚಿನ್ನ ಗೆದ್ದ ನೊವಾಕ್ ಜೊಕೋವಿಕ್!
ನೊವಾಕ್ ಜೊಕೋವಿಕ್ — online desk
Published On :

ಪ್ಯಾರೀಸ್: ಟೆನ್ನೀಸ್ ಲೆಜೆಂಡ್ ನೊವಾಕ್ ಜೊಕೋವಿಕ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೊವಿಕ್ ಸ್ಪ್ಯಾನಿಷ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6(3), 7-6(2) ನೇರ ಸೆಟ್‌ಗಳಿಂದ ಮಣಿಸಿದರು.

ಈ ಗೆಲುವಿನ ಮೂಲಕ 37 ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಗೆ ಜೊಕೊವಿಕ್ ಭಾಜನರಾಗಿದ್ದಾರೆ.

ಒಲಂಪಿಕ್ಸ್ ನಲ್ಲಿ ಜೊಕೊವಿಕ್ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

16 ವರ್ಷಗಳ ನಂತರ ಜೊಕೊವಿಕ್ ಚಿನ್ನದ ಪದಕ ಪಡೆದಿದ್ದಾರೆ. ಈ ಗೆಲುವಿನೊಂದಿಗೆ ಜೊಕೊವಿಕ್​ ರಾಫೆಲ್ ನಡಾಲ್, ಸ್ಟೆಫಿ ಗ್ರಾಫ್, ಆಂಡ್ರೆ ಅಗಾಸ್ಸಿ, ಸೆರೆನಾ ವಿಲಿಯಮ್ಸ್ ಮತ್ತು ಗೋಲ್ಡನ್ ಸ್ಲಾಮ್ ವಿಜೇತರ ಸಾಲಿಗೆ ಸೇರಿದ್ದಾರೆ.

ಜೊಕೊವಿಕ್ ಈಗಾಗಲೇ ಪುರುಷರ ವಿಭಾಗದಲ್ಲಿ 24 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನ ಗೆದ್ದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.