Olympics 2024: 71 ಕೆಜಿ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ನಲ್ಲಿ ನಿಶಾಂತ್ ದೇವ್ ಗೆ ನಿರಾಸೆ
ಒಂದು ವೇಳೆ ನಿಶಾಂತ್ ದೇವ್ ಗೆದ್ದಿದ್ದರೆ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ನಾಲ್ಕನೆ ಪದಕ ಖಾತ್ರಿಯಾಗಿರುತ್ತಿತ್ತು.

ಪ್ಯಾರಿಸ್: ಒಲಿಂಪಿಕ್ಸ್ 2024 ರಲ್ಲಿ 8 ನೇ ದಿನದಂದು 71 ಕೆ.ಜಿ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ವಿಭಾಗದಲ್ಲಿ ಭಾರತದ ಬಾಕ್ಸರ್ ನಿಶಾಂತ್ ದೇವ್ ಗೆ ನಿರಾಸೆ ಉಂಟಾಗಿದೆ. ಮೆಕ್ಸಿಕೋದ ಮಾರ್ಕೊ ಅಲೋನ್ಸೊ ವರ್ಡೆ ಅಲ್ವಾರೆಜ್ ವಿರುದ್ಧ ನಿಶಾಂತ್ ದೇವ್ ಪರಾಭವಗೊಂಡಿದ್ದಾರೆ.
ಒಂದು ವೇಳೆ ನಿಶಾಂತ್ ದೇವ್ ಗೆದ್ದಿದ್ದರೆ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ನಾಲ್ಕನೆ ಪದಕ ಖಾತ್ರಿಯಾಗಿರುತ್ತಿತ್ತು. ಏತನ್ಮಧ್ಯೆ, ಮಹಿಳೆಯರ 66 ಕೆಜಿ ಬಾಕ್ಸಿಂಗ್ ಕ್ವಾರ್ಟರ್-ಫೈನಲ್‌ನಲ್ಲಿ ಅನ್ನಾ ಲುಕಾ ಹಮೊರಿ (ಹಂಗೇರಿ) ಅವರನ್ನು ಸೋಲಿಸಿದ ನಂತರ ಲಿಂಗಕ್ಕೆ ಸಂಬಂಧಿಸಿದ ವಿವಾದಕ್ಕೆ ಗುರಿಯಾಗಿರುವ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್ ಪದಕದ ಭರವಸೆ ಹೊಂದಿದ್ದಾರೆ.
ಇದಕ್ಕೂ ಮುನ್ನ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ನಾಮ್ ಸುಹ್ಯೆನ್ ವಿರುದ್ಧ ಸೋಲು ಕಂಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ನಲ್ಲಿ 4 ನೇ ಸ್ಥಾನ ಗಳಿಸಿ ಭಾರತದ ಶೂಟರ್ ಮನು ಭಾಕರ್ ಅವರು ಪದಕದಿಂದ ವಂಚಿತರಾದರು. ಸೇಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್ ಅವರು ಒಲಿಂಪಿಕ್ ಮಹಿಳೆಯರ 100 ಮೀ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಶಾ'ಕ್ಯಾರಿ ರಿಚರ್ಡ್ಸನ್ ಅವರನ್ನು ದಂಗುಬಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



