ಪರ್ಸನಲ್ ಲೋನ್‌ಗಿಂತ ಚಿನ್ನದ ಸಾಲವೇ ಬೆಸ್ಟ್! ಬಡ್ಡಿ ಕಡಿಮೆ ಸಿಗೋದು ಹೇಗೆ ಗೊತ್ತಾ?
ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲ ಪಡೆಯುವುದು ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ತುರ್ತು ಆರ್ಥಿಕ ಅಗತ್ಯಗಳ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಒಡವೆಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು. ಆ ಕುರಿತ ವರದಿ ಇಲ್ಲಿದೆ:

Gold Loan: ಕೈಯಲ್ಲಿ ಹಣವಿಲ್ಲದಾಗ ನಮಗೆ ಮೊದಲು ನೆನಪಾಗುವುದೇ ಪರ್ಸನಲ್ ಲೋನ್. ಆದರೆ ಹೆಚ್ಚಿನ ಬಡ್ಡಿ, ಸಾಕಷ್ಟು ದಾಖಲೆಗಳು ಮತ್ತು ಕಡಿಮೆ ಸಾಲದ ಮೊತ್ತದಿಂದ ಅದು ಹೊರೆಯಾಗುತ್ತದೆ. ಅದೇ ಮನೆಯಲ್ಲಿರುವ ಚಿನ್ನ ಇದ್ದರೆ ಪರಿಸ್ಥಿತಿ ಬೇರೆ. ಯಾಕಂದ್ರೆ, ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಅದೊಂದು ತುರ್ತು ಸಂದರ್ಭದಲ್ಲಿ ನೆರವಾಗುವ ಹಣಕಾಸಿನ ಆಧಾರ. ಹಾಗಾದರೆ ಇತರ ಸಾಲಗಳಿಗಿಂತ ಚಿನ್ನದ ಸಾಲ ಯಾಕೆ ಉತ್ತಮ ಎಂಬುದನ್ನು ನೋಡೋಣ...
ಇತರ ಸಾಲಕ್ಕಿಂತ ಚಿನ್ನದ ಸಾಲ ಉತ್ತಮ ಯಾಕೆ ಗೊತ್ತಾ...
ತುರ್ತು ಸಂದರ್ಭದಲ್ಲಿ ತಕ್ಷಣ ಹಣ ಸಿಗುವುದು ಹೇಗೆ ಎಂಬ ಚಿಂತೆ ಎಲ್ಲರಿಗೂ ಇರುತ್ತದೆ. ಅಂತಹ ಸಮಯದಲ್ಲಿ ಚಿನ್ನದ ಸಾಲ ಅತ್ಯಂತ ಸುಲಭ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ಅದಕ್ಕೆ ಕಾರಣ...
ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಲಾಭ
ಪರ್ಸನಲ್ ಲೋನ್ ಗೆ ಹೋಲಿಸಿದರೆ ಚಿನ್ನದ ಸಾಲದ ಬಡ್ಡಿದರ ತುಂಬಾ ಕಡಿಮೆ. ಪರ್ಸನಲ್ ಲೋನ್ ಮೇಲೆ ಸಾಮಾನ್ಯವಾಗಿ ಶೇಕಡ 12 ರಿಂದ 24 ರಷ್ಟು ಬಡ್ಡಿ ವಿಧಿಸಲಾಗುತ್ತದೆ, ಆದರೆ ಚಿನ್ನದ ಸಾಲದ ಮೇಲೆ ಶೇಕಡ 7 ರಿಂದ 12 ರಷ್ಟು ಮಾತ್ರ ಬಡ್ಡಿ ಇರುತ್ತದೆ. ಇದರಿಂದ ಮರುಪಾವತಿಯ ಹೊರೆ ಕಡಿಮೆಯಾಗುತ್ತದೆ.
ಕನಿಷ್ಠ ದಾಖಲೆ
ಚಿನ್ನದ ಸಾಲ ಪಡೆಯಲು ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ನಿಮ್ಮ ಚಿನ್ನ ಇದ್ದರೆ ಸಾಕು. ಆದಾಯ ಪ್ರಮಾಣಪತ್ರ ಅಥವಾ ಕ್ರೆಡಿಟ್ ಸ್ಕೋರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಹಣ ನಿಮ್ಮ ಖಾತೆಗೆ ಬರುತ್ತದೆ.
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ
ಪರ್ಸನಲ್ ಲೋನ್ ಅಥವಾ ಹೋಮ್ ಲೋನ್ ಗೆ ಉತ್ತಮ ಸಿಬಿಲ್ ಸ್ಕೋರ್ ಕಡ್ಡಾಯ. ಆದರೆ ಚಿನ್ನದ ಸಾಲದಲ್ಲಿ ನಿಮ್ಮ ಚಿನ್ನವೇ ಗ್ಯಾರಂಟಿ. ಹಾಗಾಗಿ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಅಥವಾ ಆದಾಯ ಕಡಿಮೆ ಇದ್ದರೂ ಸಾಲ ಸುಲಭವಾಗಿ ಸಿಗುತ್ತದೆ.
ಸಾಲದ ಮೊತ್ತ ಮತ್ತು ಮರುಪಾವತಿ
ನಿಮ್ಮ ಚಿನ್ನದ ಮೌಲ್ಯದ ಶೇಕಡ 75 ರಷ್ಟು ವರೆಗೆ ಸಾಲ ಪಡೆಯಬಹುದು. ಜೊತೆಗೆ ಬುಲೆಟ್ ಪಾವತಿ, ಮಾಸಿಕ ಬಡ್ಡಿ ಪಾವತಿ ಅಥವಾ ಇಎಂಐ ಆಯ್ಕೆಗಳು ಇರುತ್ತವೆ. ನಿಮಗೆ ಅನುಕೂಲವಾದ ರೀತಿಯಲ್ಲಿ ಹಣವನ್ನು ಹಿಂದಿರುಗಿಸಬಹುದು.
0 ಪ್ರೊಸೆಸಿಂಗ್ ಫೀಸ್
ಪರ್ಸನಲ್ ಲೋನ್‌ಗಳಿಗೆ ಶೇ. 1 ರಿಂದ ಶೇ. 3 ರವರೆಗೆ ಪ್ರೊಸೆಸಿಂಗ್ ಫೀಸ್ ಇರುತ್ತದೆ. ಆದರೆ ಚಿನ್ನದ ಸಾಲಕ್ಕೆ ತೀರಾ ಕಡಿಮೆ ಅಥವಾ ಶೂನ್ಯ ಸಂಸ್ಕರಣಾ ಶುಲ್ಕ ಇರುತ್ತದೆ. ಅಲ್ಲದೆ, ಅವಧಿಗೂ ಮುನ್ನ ಸಾಲ ಮುಚ್ಚಿದರೆ ಯಾವುದೇ ದಂಡ ಇರುವುದಿಲ್ಲ.
ಸುರಕ್ಷತೆ
ಬ್ಯಾಂಕ್ ಅಥವಾ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ನಿಮ್ಮ ಚಿನ್ನ ಸುರಕ್ಷಿತವಾಗಿರುತ್ತದೆ. ಸಾಲ ತೀರಿದ ನಂತರ ಅದೇ ತೂಕ ಮತ್ತು ಶುದ್ಧತೆಯ ಚಿನ್ನವನ್ನು ವಾಪಸ್ ಪಡೆಯಬಹುದು.ಒಟ್ಟಾರೆ ಹೇಳುವುದಾದರೆ ಕಡಿಮೆ ಬಡ್ಡಿ, ಕಡಿಮೆ ದಾಖಲೆ, ತ್ವರಿತ ವಿತರಣೆ ಮತ್ತು ಸುಲಭ ಮರುಪಾವತಿಯ ಕಾರಣದಿಂದಾಗಿ ಚಿನ್ನದ ಸಾಲವು ಇತರ ಎಲ್ಲ ಸಾಲಗಳಿಗಿಂತ ಉತ್ತಮ ಆಯ್ಕೆಯಾಗಿದೆ.
ಒಟ್ಟಾರೆಯಾಗಿ, ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲ ಪಡೆಯುವುದು ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ತುರ್ತು ಆರ್ಥಿಕ ಅಗತ್ಯಗಳ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಒಡವೆಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



