Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ; 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!
ಭಾರತ ಕೇವಲ ಒಂದು ನಿಮಿಷದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ಪುರುಷರ 80 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್ ಅಂಕುಶ್ ಪಂಗಲ್ ಚಿನ್ನ ಗೆದ್ದಿದ್ದರೇ ಕೇವಲ ಒಂದು ನಿಮಿಷದ ಮೊದಲು ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಜೀತ್ ಕಲ್ಕಲ್ ಚಿನ್ನ ಗೆದ್ದಿದ್ದಾರೆ.

ಶುಕ್ರವಾರ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕೇವಲ ಒಂದು ನಿಮಿಷದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ಪುರುಷರ 80 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್ ಅಂಕುಶ್ ಪಂಗಲ್ ಚಿನ್ನ ಗೆದ್ದಿದ್ದರೇ ಕೇವಲ ಒಂದು ನಿಮಿಷದ ಮೊದಲು ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಜೀತ್ ಕಲ್ಕಲ್ ಚಿನ್ನ ಗೆದ್ದಿದ್ದಾರೆ.
ಇದಕ್ಕೂ ಮೊದಲು, ಬಾಕ್ಸರ್ ಪರ್ವೀನ್ ಹೂಡಾ ಮಹಿಳೆಯರ 65 ಕೆಜಿ ವಿಭಾಗದಲ್ಲಿ ಮತ್ತು ಮಹಿಳೆಯರ 75 ಕೆಜಿ ತೂಕ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಚಿನ್ನ ಗೆದ್ದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮೂವರು ಭಾರತೀಯ ಬಾಕ್ಸರ್‌ಗಳು ಚಾಂಪಿಯನ್ ಆಗಿದ್ದಾರೆ. ಇಂದು ಬೆಳಿಗ್ಗೆ ಭಾರತೀಯ ಮಹಿಳಾ ಬಿಲ್ಲುಗಾರಿಕೆ ತಂಡವು ರಿಕರ್ವ್ ಸ್ಪರ್ಧೆಯಲ್ಲಿಯೂ ಚಿನ್ನ ಗೆದ್ದಿದೆ. ಇದರೊಂದಿಗೆ, ಭಾರತದ ಒಟ್ಟು ಪದಕಗಳ ಸಂಖ್ಯೆ 15 ತಲುಪಿದ್ದು, ಒಟ್ಟಾರೆ 75 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತಲುಪಿದೆ. ಏತನ್ಮಧ್ಯೆ, ಭಾರತ ಮತ್ತು ಚೀನಾ ನಡುವಿನ ಮಹಿಳಾ ಹಾಕಿ ಫೈನಲ್ ನಡೆಯುತ್ತಿದೆ. ಭಾರತ 1-0 ಮುನ್ನಡೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



