ಕ್ರೀಡೆ

Asian Games 2026: 4x400m ರಿಲೇಯಲ್ಲಿ ಕನ್ನಡತಿ ಪೂವಮ್ಮ ಒಳಗೊಂಡ ಮಹಿಳಾ ತಂಡಕ್ಕೆ ಚಿನ್ನ!

ಇಂದು ನಗೋಯಾದ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಮುಕ್ತಾಯದ ದಿನದಂದು ಕಿರಣ್ ಪಹಲ್, ಎಂ ಆರ್ ಪೂವಮ್ಮ, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ತಂಡ, ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ.

Asian Games 2026: 4x400m ರಿಲೇಯಲ್ಲಿ ಕನ್ನಡತಿ ಪೂವಮ್ಮ ಒಳಗೊಂಡ ಮಹಿಳಾ ತಂಡಕ್ಕೆ ಚಿನ್ನ!
ಭಾರತ ಮಹಿಳಾ ತಂಡ
Published On :

ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026ರಲ್ಲಿ ಭಾರತದ ಮಹಿಳೆಯರು ಮಂಗಳವಾರ 4×400 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇಂದು ನಗೋಯಾದ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಮುಕ್ತಾಯದ ದಿನದಂದು ಕಿರಣ್ ಪಹಲ್, ಎಂ ಆರ್ ಪೂವಮ್ಮ, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ತಂಡ, ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ.

ಇನ್ನು ಈ ಐತಿಹಾಸಿಕ ಸಾಧನೆಯಲ್ಲಿ ಕರ್ನಾಟಕದ ಪೂವಮ್ಮ ಪ್ರಮುಖ ಪಾತ್ರವಹಿಸಿದ್ದಾರೆ.

ಭಾರತದ ಮಹಿಳಾ ತಂಡ 3:29.69 ಸೆಕೆಂಡುಗಳಲ್ಲಿ ರೇಸ್ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆಯಿತು. ಬಹ್ರೇನ್ ತಂಡವು (3:30.21) ಬೆಳ್ಳಿ ಪದಕ ಹಾಗೂ ಚೀನಾ ತಂಡವು (3:31.02) ಕಂಚಿನ ಪದಕವನ್ನು ಪಡೆದುಕೊಂಡವು.

ವಿತ್ಯಾ ರಾಮ್‌ರಾಜ್ ಹ್ಯಾಟ್ರಿಕ್ ಪದಕ

ತಮಿಳುನಾಡಿನ ಅಥ್ಲೀಟ್ ವಿತ್ಯಾ ರಾಮ್‌ರಾಜ್ ಪಾಲಿಗೆ ಈ ಬಾರಿಯ ಏಷ್ಯನ್ ಗೇಮ್ಸ್ ಅತ್ಯಂತ ಸ್ಮರಣೀಯವಾಗಿ ಮೂಡಿಬಂದಿದೆ. ಈ ಕೂಟದಲ್ಲಿ ಅವರು ಗಳಿಸಿದ 3ನೇ ಪದಕ ಇದಾಗಿದೆ:

ಇನ್ನು ಪುರುಷರ 5000 ಮೀಟರ್ಸ್ ಓಟದಲ್ಲಿ ಗುಲ್ವೀರ್ ಸಿಂಗ್ 13:32.75 ಸಮಯದಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಈ ಹಿಂದೆ 10,000 ಮೀ. ಹಾಗೂ 1500 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದ ಗುಲ್ವೀರ್‌ಗೆ ಇದು ಕೂಟದ 3ನೇ ಪದಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.