ವಿಜ್ಞಾನ-ತಂತ್ರಜ್ಞಾನ

ಆರ್ಡರ್ ಮಾಡಿದ 60 ನಿಮಿಷದಲ್ಲಿ ಫೋನ್ ನಿಮ್ಮ ಕೈಗೆ, ತಡವಾದರೆ ಫ್ರೀ

ಪಿಜ್ಜಾ ಆರ್ಡರ್ ಮಾಡುವ ರೀತಿಯಲ್ಲಿಯೇ ಇನ್ನು ಫೋನ್ ಕೂಡಾ ಆರ್ಡರ್ ಮಾಡಿ ಖರೀದಿಸಿಕೊಳ್ಳಬಹುದು. ನೀವು ಆರ್ಡರ್ ಮಾಡಿ 60 ನಿಮಿಷಗಳೊಳಗೆ...

ಆರ್ಡರ್ ಮಾಡಿದ 60 ನಿಮಿಷದಲ್ಲಿ ಫೋನ್ ನಿಮ್ಮ ಕೈಗೆ, ತಡವಾದರೆ ಫ್ರೀ
ಒನ್ ಪ್ಲಸ್ ಒನ್
Published On :
ಬೆಂಗಳೂರು: ಪಿಜ್ಜಾ ಆರ್ಡರ್ ಮಾಡುವ ರೀತಿಯಲ್ಲಿಯೇ ಇನ್ನು ಫೋನ್ ಕೂಡಾ ಆರ್ಡರ್ ಮಾಡಿ ಖರೀದಿಸಿಕೊಳ್ಳಬಹುದು. ನೀವು ಆರ್ಡರ್ ಮಾಡಿ 60 ನಿಮಿಷಗಳೊಳಗೆ ನಿಮ್ಮ ಕೈಗೆ ಫೋನ್ ತಲುಪಿರುತ್ತದೆ. ಒಂದು ವೇಳೆ ಫೋನ್ ಸಿಗುವುದು ನಿಮಗೆ ತಡವಾದರೆ, ಫೋನ್ ಉಚಿತವಾಗಿ ಕೊಡಲಾಗುತ್ತದೆ. ಹೀಗೂ ಉಂಟೆ? ಎಂದು ಅಚ್ಚರಿ ಪಡಬಹುದು. ಆದರೆ ಇದು ನಿಜ.
ಚೀನಾದ ಸ್ಮಾರ್ಟ್ ಫೋನ್ ಕಂಪನಿಯಾದ ಒನ್ ಪ್ಲಸ್ ಒನ್ ಈ ರೀತಿಯ ಆಫರ್ ಗಳನ್ನು ನೀಡಿ ಮೊಬೈಲ್ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಬೆಂಗಳೂರಿನ ಜನತೆಗಾಗಿ ಅಕ್ಟೋಬರ್ 8,9,10 ಈ ಮೂರು ದಿನಗಳಲ್ಲಿ ಆಫರ್ ಲಭ್ಯವಾಗಲಿದೆ. ಬೆಂಗಳೂರಿನ ಬ್ಲೋಬಾನ್ ಎಂಬ ಮಾರ್ಕೆಟಿಂಗ್ ಕಂಪನಿಯ ಜತೆ ಸೇರಿ ಒನ್ ಪ್ಲಸ್ ಒನ್ ಕಂಪನಿ 60 ನಿಮಿಷ ಡೆಲಿವರಿ ಯೋಜನೆ ಹಮ್ಮಿಕೊಂಡಿದೆ.
ಬ್ಲೋಹೋನ್ ಮೊಬೈಲ್ ಆ್ಯಪ್ ಮೂಲಕ  ಆರ್ಡರ್ ಮಾಡಿದ ಕೂಡಲೇ 60 ನಿಮಿಷಗಳ ಕೌಂಟ್ ಡೌನ್ ಆರಂಭವಾಗುತ್ತದೆ .ಒಂದು ವೇಳೆ ಫೋನ್ ತಡವಾಗಿ ತಲುಪಿದರೆ, ಗ್ರಾಹಕರಿಗೆ ಫೋನ್ ಉಚಿತವಾಗಿ ಕೊಡಲಾಗುತ್ತದೆ ಎಂದು ಕಂಪನಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.