ಯುಕೆ ನಲ್ಲಿ ಬಳಕೆಯಾಗದ ಮೊಬೈಲ್ ನಿಂದ ಪೋಲಾಗುತ್ತಿದೆ 100 ಮಿಲಿಯನ್ ಪೌಂಡ್ ಮೌಲ್ಯದ ಚಿನ್ನ!
ಬಳಕೆಯಾಗದ ಮೊಬೈಲ್ ಗಳಿಂದ ಯು.ಕೆ ನಲ್ಲಿ ಸುಮಾರು 100 ಮಿಲಿಯನ್ ಪೌಂಡ್ ಮೌಲ್ಯದ ಚಿನ್ನ ಪೋಲಾಗುತ್ತಿದೆ.

ಲಂಡನ್: ಬಳಕೆಯಾಗದ ಮೊಬೈಲ್ ಗಳಿಂದ ಯು.ಕೆ ನಲ್ಲಿ ಸುಮಾರು 100 ಮಿಲಿಯನ್ ಪೌಂಡ್ ಮೌಲ್ಯದ ಚಿನ್ನ ಪೋಲಾಗುತ್ತಿದೆ.
ಹೊಸ ಆವೃತ್ತಿಗಳ ಉತ್ತೇಜನ ಮಾಡುವ ಕಾಂಟ್ರಾಕ್ಟ್, ಪರಿಣಾಮಕಾರಿಯಾಗಿರದ ಮರುಬಳಕೆಯಿಂದಾಗಿ ಯು.ಕೆ ನಲ್ಲಿ 85 ಮಿಲಿಯನ್ ಮೊಬೈಲ್ ಗಳು ತಯಾರಾಗಿವೆ ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ರೆ ವಿಶ್ವವಿದ್ಯಾನಿಲಯದ ಡಾ.ಜೇಮ್ಸ್ ಸಕ್ಲಿಂಗ್, 85 ಮಿಲಿಯನ್ ಮೊಬೈಲ್ ಗಳ ಪೈಕಿ ಪ್ರತಿಯೊಂದನ್ನೂ ಚಿನ್ನ, ತಾಮ್ರ ಮತ್ತು ಬೆಳ್ಳಿ ಬೆಲೆಬಾಳುವ ಲೋಹಗಳಿಂದ ತಯಾರಿಸಲಾಗಿದೆ. ಅನುಪಯುಕ್ತ ಮೊಬೈಲ್ ಗಳಿಂದ ಇದನ್ನು ಹೊರತೆಗೆಯುವುದು ಹಣ ಹಾಗೂ ಪರಿಸರದ ಮೇಲೆ ಉಂಟಾಗುವ ಪರಿಣಾಮ ಈ ಎರಡೂ ವಿಷಯಗಳಲ್ಲಿ ಅತ್ಯಂತ ದುಬಾರಿಯಾಗಿದೆ ಎಂದು ಹೇಳಿದ್ದಾರೆ.
ಚಿನ್ನವನ್ನು ಮಾತ್ರ ಬದಲಾಯಿಸುವುದಕ್ಕೆ ಸುಮಾರು 110 ಮಿಲಿಯನ್ ಪೌಂಡ್ ಖರ್ಚಾಗಲಿದೆ. ಅಷ್ಟೇ ಅಲ್ಲದೇ ಈ ಪ್ರಕ್ರಿಯೆಯಿಂದ 84,000 ಟನ್ ನಷ್ಟು ಕಾರ್ಬನ್ ಡಯಾಕ್ಸೈಡ್ ಪರಿಸರಕ್ಕೆ ಸೇರಲಿದೆ ಎಂದು ಜೇಮ್ಸ್ ಸಕ್ಲಿಂಗ್ ತಿಳಿಸಿದ್ದಾರೆ. ಬಳಕೆದಾರರು ತಮ್ಮ ಮೊಬೈಲ್ ನ್ನು ವಾಪಸ್ ನೀಡುವಂತೆ ಹೊಸ ಆವೃತ್ತಿಗಳ ಉತ್ತೇಜನ ಮಾಡುವ ಕಾಂಟ್ರಾಕ್ಟ್ ನಲ್ಲಿ ಟೇಕ್ ಬ್ಯಾಕ್ ನಿಯಮವನ್ನು ವಿಧಿಸುವಂತೆ ಹಲವು ಸಂಶೋಧಕರು ಸಲಹೆ ನೀಡಿದ್ದಾರೆ. ಅಲ್ಲದೇ ಮೊಬೈಲ್ ಗಳಲ್ಲಿ ಸಂಕೀರ್ಣ ಪ್ರಕ್ರಿಯೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೆಮೊರಿ ಯನ್ನು ಅಂತರ್ಜಾಲ ಸರ್ವರ್ ನಲ್ಲಿ ಸಂಗ್ರಹಿಸಲು ಕ್ಲೌಡ್ ಬೇಸ್ಡ್ ಪ್ರೊಡೆಕ್ಟೀವ್ ವ್ಯವಸ್ಥೆ ಜಾರಿಗೆ ತರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಧ್ಯಯನ ವರದಿ ಲೈಫ್ ಸೈಕಲ್ ಅಸೆಸ್ಮೆಂಟ್ ಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಪತ್ರಿಕೆ ನಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


