ಪರಿಸರ

ಸಾಲು ಮರದ ತಿಮ್ಮಕ್ಕನವರಂತೆ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಉಳಿಸಬೇಕು: ಸಿಎಂ ಸಿದ್ದರಾಮಯ್ಯ
ಈ ಬಾರಿಯ ಚಿತ್ರಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸದ ರಾಜ್ಯಗಳಿಗೆ 79,098 ಕೋಟಿ ರೂ. ದಂಡ!
2022-23ರಲ್ಲಿ ಪುರಸಭೆ ಘನತ್ಯಾಜ್ಯ ನಿರ್ವಹಣಾ ನಿಯಮಗಳು ಮತ್ತು ಇತರ ಪರಿಸರ ಉಲ್ಲಂಘನೆಗಳಿಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 79,098 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಕೇಂದ್ರ ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.

ಸನ್ಮಾನ, ಸಂಭ್ರಮಾಚರಣೆಗಳಲ್ಲಿ ಪ್ಲಾಸ್ಟಿಕ್ ಹೂಮಾಲೆ ಬಳಕೆಯಿಂದ ಪರಿಸರಕ್ಕೆ ತೀವ್ರ ಹಾನಿ!
ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮಗಳು, ಖಾಸಗಿ ಕಾರ್ಯಕ್ರಮಗಳು, ಕಾಲೇಜುಗಳು, ನಾಗರಿಕ ಸಂಘಗಳು ಅಥವಾ ವಸತಿ ಕಲ್ಯಾಣ ಗುಂಪುಗಳ ಕಾರ್ಯಕ್ರಮಗಳು ಎಂದು ಕನಿಷ್ಠವೆಂದರೂ 20 ಕಾರ್ಯಕ್ರಮಗಳು ಜರುಗುತ್ತವೆ.

ರಾಜ್ಯ ಬಜೆಟ್ 2023: ಹಸಿರೀಕರಣಕ್ಕೆ 500 ಕೋಟಿ ರೂ.; ಮಾನವ-ಕಾಡಾನೆ ಸಂಘರ್ಷ ತಡೆಯಲು 120 ಕೋಟಿ ರೂ. ಮೀಸಲು
ರಾಜ್ಯದಲ್ಲಿ ಮಾನವ–ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಒಂದು 520 ಕಿ.ಮೀ.ಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಘೋಷಿಸಲಾಗಿತ್ತು.

ನೈಸರ್ಗಿಕ ಸಂಪನ್ಮೂಲದ ಮಿತ ಬಳಕೆ ಅಗತ್ಯ; ಪ್ರಕೃತಿ-ಮನುಷ್ಯನ ಜೀವನ ಒಂದಕ್ಕೊಂದು ಹೊಂದಿಕೊಂಡಿದೆ: ಸಿಎಂ ಸಿದ್ದರಾಮಯ್ಯ
ಪೂರ್ವಿಕರಿಗೆ ನಮ್ಮ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಇದ್ದ ಕಾಳಜಿ ಅನನ್ಯ. ಒಂದು ಮರ ಕಡಿದರೆ ಮತ್ತೊಂದು ಗಿಡ ನೆಡುತ್ತಿದ್ದರು. ಆದರೆ ಈಗ ಕೇವಲ ಮರ ಕಡಿಯುವುದಾಗಿದೆ. ಇದೇ ನಮ್ಮ ಪೂರ್ವಿಕರಿಗೂ ನಮಗೂ ಇರುವ ವ್ಯತ್ಯಾಸ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳ ರಕ್ಷಣೆಗಾಗಿ 'ಹೈ-ವೋಲ್ಟೇಜ್' ತೀರ್ಪು ನೀಡಿದ ಸುಪ್ರೀಂ ಕೋರ್ಟ್!
ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಅನ್ನು ಉಳಿಸುವ ಸಲುವಾಗಿ ಓವರ್ ಹೆಡ್ ವಿದ್ಯುತ್ ಕೇಬಲ್ ಗಳನ್ನು ಭೂಗತವಾಗಿ ಬದಲಾಯಿಸುವಂತೆ ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನಮಸ್ತೆ ಟ್ರಂಪ್: ನದಿಯ ಪರಿಸರ ಸುಂದರಗೊಳಿಸಲು 'ಯಮುನಾ'ಗೆ ನೀರು ಹರಿಸಿದ ಯುಪಿ ಸರ್ಕಾರ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲು ಅಲ್ಲಿನ ಸರ್ಕಾರ ನಾನಾ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದು, ಇದರಂತೆ ನದಿಯ ಸೌಂದರ್ಯವನ್ನು ಹೆಚ್ಚಿಸಲು ಇದೀಗ ಯಮುನಾ ನದಿಗೆ ನೀರು ಹರಿಸುವ ಕಾರ್ಯವನ್ನು ಮಾಡಿದೆ.

ಒಳ್ಳೆ ಸುದ್ದಿ: ಭಾರತದ ಒಟ್ಟಾರೆ ಅರಣ್ಯ ಭೂಮಿಯಲ್ಲಿ ಗಣನೀಯ ಹೆಚ್ಚಳ
ಜಾಗತಿಕ ತಾಪಮಾನ ಏರಿಕೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಒತ್ತುವರಿಯಂತಹ ಗಂಭೀರ ಸಮಸ್ಯೆಗಳ ನಡುವೆಯೂ ಭಾರತದ ಒಟ್ಟಾರೆ ಅರಣ್ಯ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

ವಾತಾವರಣ ಬದಲಾವಣೆ ಕೂಡ ವ್ಯಾಪಾರ! ಹೀಗಾದರೆ ನಮ್ಮ ಧರೆಯನ್ನ ಉಳಿಸುವರ್ಯಾರ?
ಹದಗೆಡುತ್ತಿರುವ ವಾತಾವರಣವನ್ನ ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ 12 ಸೊನ್ನೆ ಹಾಕಿ....

