ಜೀವನಶೈಲಿ

ಲವ್ ಮ್ಯಾರೇಜಿಗಿಂತ ಅರೇಂಜ್ಡ್ ಮ್ಯಾರೇಜ್ ಸಕ್ಸಸ್ ರೇಟ್ ಜಾಸ್ತಿ: ಭಾರತದ ನಂ.1 ಮ್ಯಾಚ್ ಮೇಕರ್ ಹೇಳಿದ ಗುಟ್ಟು

ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಸುಳ್ಳು. ಈಗಿನವರಲ್ಲಿ ಇಗೋ ಸಮಸ್ಯೆ ಇದೆ, ಆರ್ಥಿಕವಾಗಿ ತಾವು ಸಬಲರು ಎನ್ನುವ ಅಹಂ ಇದೆ. ವಿವಾಹ ಸಂಬಂಧಗಳು ಮುರಿದುಬೀಳುವುದಕ್ಕೆ ಇವೇ ಮುಖ್ಯ ಕಾರಣ.

ಲವ್ ಮ್ಯಾರೇಜಿಗಿಂತ ಅರೇಂಜ್ಡ್ ಮ್ಯಾರೇಜ್ ಸಕ್ಸಸ್ ರೇಟ್ ಜಾಸ್ತಿ: ಭಾರತದ ನಂ.1 ಮ್ಯಾಚ್ ಮೇಕರ್ ಹೇಳಿದ ಗುಟ್ಟು
ಸೀಮಾ ತಪಾರಿಯ
Published On :

ನವದೆಹಲಿ: ಇಂದಿನ ಯುವಪೀಳಿಗೆ ಅರೇಂಜ್ಡ್ ಮ್ಯಾರೇಜ್ ಬಗ್ಗೆ ಅಸಡ್ಡೆ ತೋರುತ್ತಿರುವ ಬಗ್ಗೆ ಭಾರತದ ನಂಬರ್ 1 ಮ್ಯಾಚ್ ಮೇಕರ್ ಎಂದೇ ಹೆಸರಾಗಿರುವ ಸೀಮಾ ತಪಾರಿಯ ಅವರು ಖೇದ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಯುವಪೀಳಿಗೆಯ ಅಭಿಪ್ರಾಯ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಅರೇಂಜ್ಡ್ ಮ್ಯಾರೇಜಿನಲ್ಲಿ ಎರಡು ಕುಟುಂಬಗಳು ಒಂದಾಗುತ್ತವೆ. ಹುಡುಗ ಮತ್ತು ಹುಡುಗಿ ಮಧ್ಯೆ ಏನೇ ಸಮಸ್ಯೆ ಬಂದರೂ ಕೂತು ಪರಿಹರಿಹರಿಸುವ ಒಂದು ಸವಲತ್ತಿರುತ್ತದೆ. ಅದುವೇ ಅರೇಂಜ್ಡ್ ಮ್ಯಾರೇಜಿನ ಅತಿ ದೊಡ್ಡ ಶಕ್ತಿ. ಆದರೆ ಲವ್ ಮ್ಯಾರೇಜಿನಲ್ಲಿ ಹುಡುಗ ಹುಡುಗಿ ಒಂಟಿಯಾಗುತ್ತಾರೆ. ಅವರ ನಡುವೆ ಭಿನ್ನಾಭಿಪ್ರಾಯ ಬಂದರೆ ಅವರ ಹೆಗಲಿಗೆ ಯಾರೂ ಇರುವುದಿಲ್ಲ.

ಅರೇಂಜ್ಡ್ ಮ್ಯಾರೇಜ್ ಎಂದರೆ ಬಲವಂತದ ಮದುವೆ ಎನ್ನುವ ಅಭಿಪ್ರಾಯ ಈಗಿನ ಯುವ ಪೀಳಿಗೆಯವರಲ್ಲಿದೆ. ಆದರೆ ಈಗೀಗ ಮದುವೆ ವಿಚಾರದ ಬಗ್ಗೆ ಅವರು ಹೆಚ್ಚಿನ ತಿಳಿವಳಿಕೆ ಹೊಂದುತ್ತಿದ್ದಾರೆ. ಕೆಲವರಾದರೂ ತಮಗೆ ಅರೇಂಜ್ಡ್ ಮದುವೆಯೇ ಬೇಕು ಎನ್ನುವ ತೀರ್ಮಾನಕ್ಕೆ ಬದ್ಧರಾಗುತ್ತಿದ್ದಾರೆ.

ನೂರಕ್ಕೆ ನೂರು ಪರ್ಸೆಂಟ್ ಮ್ಯಾಚ್ ಆಗುವ ಸಂಗಾತಿ ಯಾರಿಗೂ ಸಿಕ್ಕುವುದಿಲ್ಲ. ಇಬ್ಬರು ವ್ಯಕ್ತಿಗಳು ಯಾವತ್ತೂ ಒಂದೇ ರೀತಿಯಿರಲು ಸಾಧ್ಯವೇ ಇಲ್ಲ. ಹೀಗಾಗಿ ಶೇ. 70 ರಷ್ಟು ಮ್ಯಾಚ್ ಆದರೆ ಹುಡುಗ ಹುಡುಗಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ಆಗಬಹುದು. ಉಳಿದ 30 ಪರ್ಸೆಂಟ್ ಜೀವನ ಇರೋದು ಹೊಂದಾಣಿಕೆಯಲ್ಲಿ.

ಲವ್ ಮ್ಯಾರೇಜೇ ಆಗಲಿ, ಅರೇಂಜ್ಡ್ ಮ್ಯಾರೇಜೇ ಆಗಲಿ ಸತಿಪತಿಯರ ನಡುವೆ ಹೊಂದಾಣಿಕೆ, ತ್ಯಾಗ ಮನೋಭಾವ ಇರಲೇಬೇಕು. ಇದ್ದರೆ ಮಾತ್ರ ಸಂಸರ ಚೆನ್ನಾಗಿರುತ್ತದೆ. ಅದಿರದೇ ಹೋದಲ್ಲಿ ಎಂಥಾ ಮಾದರಿ ಪ್ರೇಮಿಗಳ ನಡುವೆಯೂ ವಿರಸ ಮೂಡುತ್ತದೆ. 

ಈಗಿನವರಲ್ಲಿ ಇಗೋ ಸಮಸ್ಯೆ ಇದೆ, ಆರ್ಥಿಕವಾಗಿ ತಾವು ಸಬಲರು ಎನ್ನುವ ಅಹಂ ಇದೆ. ಈಗಿನವರ ವಿವಾಹ ಸಂಬಂಧಗಳು ಮುರಿದುಬೀಳುವುದಕ್ಕೆ ಅದುವೇ ಮುಖ್ಯ ಕಾರಣ. ಸೀಮಾ ತಪಾರಿಯ ಅವರು ನೆಟ್ ಫ್ಲಿಕ್ಸ್ ನಲ್ಲಿ 'ಇಂಡಿಯನ್ ಮ್ಯಾಚ್ ಮೇಕಿಂಗ್' ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. 

Related Article

ಬೆಂಗಳೂರು: ಮತ್ತೊಬ್ಬನೊಂದಿಗೆ ತನ್ನ ಪ್ರೇಯಸಿಯ ಲವ್ವಿಡವ್ವಿ, ಭಗ್ನ ಪ್ರೇಮಿ ಆತ್ಮಹತ್ಯೆಗೆ ಶರಣು!

ಮಧ್ಯಪ್ರದೇಶ: ಲವ್ ಜಿಹಾದ್ ಶಂಕೆ, ಅಪ್ರಾಪ್ತ ಬಾಲಕನಿಗೆ ಥಳಿತ

'ಲವ್ ಮಾಕ್ ಟೇಲ್' ಕೃಷ್ಣ, ಪಿಸಿ ಶೇಖರ್, ಕಡ್ಡಿಪುಡಿ ಚಂದ್ರು ತಂಡದಿಂದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ!

ವಿವಾಹಿತ ಮಹಿಳೆಗೆ 'ಲವ್' ಚೀಟಿ ನೀಡುವುದು ಆಕೆಯ ಘನತೆಯನ್ನು ಅವಮಾನಿಸಿದಂತೆ: ಬಾಂಬೆ ಹೈಕೋರ್ಟ್

''ಲವ್ ಮಿ or ಹೇಟ್ ಮಿ'' ಚಿತ್ರಕ್ಕೆ ಬೆಂಗಳೂರಿನಲ್ಲಿ ಮುಹೂರ್ತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.