ತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ vs ಚಪಾತಿ, ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ದೊಡ್ಡ ಗೊಂದಲವೆಂದರೆ ರಾತ್ರಿ ಊಟಕ್ಕೆ ಅನ್ನ ತಿನ್ನಬೇಕಾ ಅಥವಾ ಚಪಾತಿ ತಿನ್ನಬೇಕಾ. ಇವೆರಡರಲ್ಲಿ ಯಾವುದು ಬೆಸ್ಟ್ ಎಂಬದುರ ಕುರಿತ ಮಾಹಿತಿ ಇಲ್ಲಿದೆ:

Weight Loss Tips: ದಿನವಿಡೀ ಡಯಟ್ ಮಾಡಿ ರಾತ್ರಿ ಊಟದ ಸಮಯಕ್ಕೆ ಬಂದರೆ ಸಾಕು, ಪ್ರತಿಯೊಬ್ಬರ ತಲೆಯಲ್ಲೂ ಒಂದೇ ಗೊಂದಲ ಶುರುವಾಗುತ್ತದೆ: ಇಂದು ರಾತ್ರಿ ಅನ್ನ ತಿನ್ನಬೇಕಾ ಅಥವಾ ಚಪಾತಿಯೇ ಉತ್ತಮವಾ? ಅನ್ನ ತಿಂದರೆ ತೂಕ ಹೆಚ್ಚಾಗುತ್ತಾ, ಚಪಾತಿಯಿಂದ ಮಾತ್ರ ಸಣ್ಣಗಾಗಲು ಸಾಧ್ಯವೇ ಎನ್ನುವ ಸಂಶಯ ಬಹುತೇಕರನ್ನು ಕಾಡುತ್ತದೆ. ಆದರೆ, ಈ ಎರಡರಲ್ಲಿ ದೇಹದ ತೂಕ ಇಳಿಸಲು ನಿಜಕ್ಕೂ ಯಾವುದು ಹೆಚ್ಚು ಸಹಕಾರಿ ಮತ್ತು ವೈದ್ಯರು ರಾತ್ರಿ ಊಟಕ್ಕೆ ಏನನ್ನು ಶಿಫಾರಸು ಮಾಡುತ್ತಾರೆ? ಇಲ್ಲಿದೆ ಆ ಕುರಿತ ಸಂಪೂರ್ಣ ವಿವರ.
100 ಗ್ರಾಂ ಅನ್ನ ಮತ್ತು ಚಪಾತಿಯಲ್ಲಿ ಏನಿದೆ?
1 ಕಪ್ ಬಿಳಿ ಅನ್ನ, ಅಂದರೆ ಸುಮಾರು 100 ಗ್ರಾಂ ನಲ್ಲಿ 130 ಕ್ಯಾಲೋರಿ ಇರುತ್ತದೆ. ಕಾರ್ಬೋಹೈಡ್ರೇಟ್ ಜಾಸ್ತಿ, ಫೈಬರ್ ಕಡಿಮೆ.
1 ಚಪಾತಿ, 40 ಗ್ರಾಂ ನಲ್ಲಿ ಸುಮಾರು 120 ಕ್ಯಾಲೋರಿ ಇರುತ್ತದೆ. ಆದರೆ ಇದರಲ್ಲಿ ಫೈಬರ್ ಜಾಸ್ತಿ ಮತ್ತು ಪ್ರೋಟೀನ್ ಸ್ವಲ್ಪ ಜಾಸ್ತಿ ಇರುತ್ತದೆ.
ತೂಕ ಇಳಿಸಲು ಯಾವುದು ಬೆಸ್ಟ್?
ನೇರವಾಗಿ ಹೇಳುವುದಾದರೆ ತೂಕ ಇಳಿಸಲು ಚಪಾತಿ ಅನ್ನಕ್ಕಿಂತ ಸ್ವಲ್ಪ ಉತ್ತಮ.
ಕಾರಣ 1: ಫೈಬರ್ ಜಾಸ್ತಿ. ಗೋಧಿ ಚಪಾತಿಯಲ್ಲಿ ಫೈಬರ್ ಇರುವುದರಿಂದ ಹೊಟ್ಟೆ ಬೇಗ ತುಂಬುತ್ತದೆ ಮತ್ತು ಹೆಚ್ಚು ತಿನ್ನುವ ಆಸೆ ಕಡಿಮೆಯಾಗುತ್ತದೆ. ಅನ್ನದಲ್ಲಿ ಫೈಬರ್ ಕಡಿಮೆ.
ಕಾರಣ 2: ಗ್ಲೈಸೆಮಿಕ್ ಇಂಡೆಕ್ಸ್. ಬಿಳಿ ಅನ್ನದ ಗ್ಲೈಸೆಮಿಕ್ ಇಂಡೆಕ್ಸ್ ಜಾಸ್ತಿ, ಇದು ಬೇಗ ಜೀರ್ಣವಾಗಿ ಬೇಗ ಹಸಿವಾಗುವಂತೆ ಮಾಡುತ್ತದೆ. ಚಪಾತಿ ನಿಧಾನವಾಗಿ ಜೀರ್ಣವಾಗುತ್ತದೆ.
ಕಾರಣ 3: ರಾತ್ರಿ ಊಟಕ್ಕೆ ಚಪಾತಿ ಹಗುರ. ರಾತ್ರಿ ಅನ್ನ ತಿಂದರೆ ಅನೇಕರಿಗೆ ಹೊಟ್ಟೆ ಉಬ್ಬರ, ಜೀರ್ಣ ಸಮಸ್ಯೆ ಬರುತ್ತದೆ.
ಹಾಗಾದರೆ ಅನ್ನವೇ ತಿನ್ನಬಾರದಾ?
ಇಲ್ಲ, ಅನ್ನ ತಿನ್ನಲೇಬಾರದು ಎಂದಲ್ಲ. ನೀವು ಅನ್ನ ಪ್ರಿಯರಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ಬಿಳಿ ಅನ್ನದ ಬದಲು ಕಂದು ಅಕ್ಕಿ ಅಂದರೆ Brown Rice ಅಥವಾ ದಪ್ಪ ಅಕ್ಕಿಯ ಅನ್ನ ತಿನ್ನಿ.
ರಾತ್ರಿ 1 ಪ್ಲೇಟ್ ತುಂಬಾ ಅನ್ನ ತಿನ್ನುವ ಬದಲು ಅರ್ಧ ಕಪ್ ಅನ್ನ ಮತ್ತು ಜೊತೆಗೆ ಸಾಕಷ್ಟು ತರಕಾರಿ, ದಾಲ್, ಮೊಸರು ತಿನ್ನಿ.
ರಾತ್ರಿ 8 ಗಂಟೆಯೊಳಗೆ ಊಟ ಮುಗಿಸಿ.
ವೈದ್ಯರು ಹೇಳುವ ಬೆಸ್ಟ್ ಪ್ಲಾನ್ ಏನು?
ತೂಕ ಇಳಿಸಲು ರಾತ್ರಿ ಊಟಕ್ಕೆ 2 ಸಣ್ಣ ಚಪಾತಿ + 1 ಬೌಲ್ ತರಕಾರಿ + 1 ಬೌಲ್ ದಾಲ್ ಅಥವಾ ಮೊಸರು ಇದನ್ನು ಬೆಸ್ಟ್ ಕಾಂಬಿನೇಷನ್ ಎಂದು ಹೇಳಲಾಗುತ್ತದೆ. ಇದು ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ. ವಾರದಲ್ಲಿ 2 ದಿನ ಅನ್ನ ತಿನ್ನಬೇಕು ಎನಿಸಿದರೆ ಮಧ್ಯಾಹ್ನ ಅನ್ನ ತಿಂದು ರಾತ್ರಿ ಚಪಾತಿ ತಿನ್ನುವುದು ಒಳ್ಳೆಯದು.
ನೆನಪಿಡಿ, ಅನ್ನ ತಿಂದರೆ ದಪ್ಪ ಆಗ್ತೀರಿ, ಚಪಾತಿ ತಿಂದರೆ ಸಣ್ಣ ಆಗ್ತೀರಿ ಎಂಬುದಲ್ಲ. ಒಟ್ಟು ದಿನದಲ್ಲಿ ನೀವು ಎಷ್ಟು ಕ್ಯಾಲೋರಿ ತಿಂದಿದ್ದೀರಿ ಎಂಬುದು ಮುಖ್ಯ. ಆದರೆ ರಾತ್ರಿ ಊಟಕ್ಕೆ ಹಗುರವಾಗಿ ಮತ್ತು ಫೈಬರ್ ಇರುವ ಆಹಾರ ಬೇಕು ಎಂದರೆ ಚಪಾತಿಯೇ ಬೆಸ್ಟ್ ಆಯ್ಕೆ.

ಚಪಾತಿಯನ್ನ ಹೂವಿನಂತೆ ಸಾಫ್ಟ್ ಆಗಿ ಮಾಡಬೇಕಾ? ಇಲ್ಲಿದೆ ಸಿಂಪಲ್ ಕಿಚನ್ ಹಾಕ್ಸ್; ದಿನವಿಡೀ ಸಾಫ್ಟ್ ಆಗಿರೋದು ಪಕ್ಕಾ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



