ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ತಿನ್ನಬಹುದಾ? ತಜ್ಞರು ಹೇಳೋದು ಏನು?
ತೂಕ ಇಳಿಸಿಕೊಳ್ಳಬೇಕು ಎಂದ ಕೂಡಲೇ ಅಕ್ಕಿ ಮತ್ತು ಗೋಧಿಯನ್ನು ದೂರ ಇಡುವವರು ಅನೇಕರು.! ಹಾಗಾಗಿ, ಬಹುತೇಕರಲ್ಲಿ ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ಎರಡನ್ನೂ ತಿನ್ನುವುದು ಸರಿಯೇ ತಪ್ಪೇ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ:

ಫುಲ್ ಮೀಲ್ಸ್, ಪ್ಲೇಟ್ ಮೀಲ್ಸ್, ಚಪಾತಿ ಮೀಲ್ಸ್.. ಹೀಗೆ ಬಹುತೇಕ ಮೀಲ್ಸ್ ಗಳಲ್ಲಿ ಅನ್ನ ಸಾಂಬಾರ್ ಜೊತೆಗೆ ಚಪಾತಿ ಸಾಗು ಇಲ್ಲ ಚಪಾತಿ ಚಟ್ನಿ ಫಿಕ್ಸ್! ಕೆಲವೊಂದು ಸಂದರ್ಭದಲ್ಲಿ ಚಪಾತಿ ಬದಲು ಪುರಿ ಕೊಡುತ್ತಾರೆ. ಆದರೆ, ನಿಮಗೆ ಗೊತ್ತಾ, ಈ ಫುಡ್ ಕಾಂಬಿನೇಷನ್ ಒಳ್ಳೆಯದಾ ಅಥವಾ ಕೆಟ್ಟದಾ ಅಂತಾ? ಇಲ್ಲಿದೆ ಆ ಕುರಿತ ವರದಿ:
ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ಎರಡನ್ನೂ ತಿನ್ನೋದು ಒಳ್ಳೆಯದು. ಆದರೆ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅಥವಾ ಮಧುಮೇಹ (ಸಕ್ಕರೆ) ನಿಯಂತ್ರಣದಲ್ಲಿದ್ದರೆ ಕೆಲವು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಅನ್ನ ಮತ್ತು ಚಪಾತಿ: ಪೌಷ್ಟಿಕಾಂಶಗಳ ವ್ಯತ್ಯಾಸವೇನು?
ಅನ್ನ ಮತ್ತು ಚಪಾತಿ ಎರಡೂ ನಮ್ಮ ದೇಹಕ್ಕೆ ಶಕ್ತಿ ನೀಡುವ ಕಾರ್ಬೋಹೈಡ್ರೇಟ್ಸ್ ಮೂಲಗಳಾಗಿವೆ. ಆದರೆ ಇವುಗಳ ಜೀರ್ಣಕ್ರಿಯೆಯ ವೇಗದಲ್ಲಿ ವ್ಯತ್ಯಾಸವಿದೆ:
ಚಪಾತಿ (ಗೋಧಿ): ಇದರಲ್ಲಿ ನಾರಿನಂಶ ಮತ್ತು ಪ್ರೊಟೀನ್ ಹೆಚ್ಚಿರುತ್ತದೆ. ಇದು ನಿಧಾನವಾಗಿ ಜೀರ್ಣವಾಗುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ತಕ್ಷಣ ಏರದಂತೆ ತಡೆಯುತ್ತದೆ.
ಅನ್ನ (ಅಕ್ಕಿ): ಇದರಲ್ಲಿ ನಾರಿನಂಶ ಕಡಿಮೆ ಇರುತ್ತದೆ (ವಿಶೇಷವಾಗಿ ಬಿಳಿ ಅಕ್ಕಿ). ಇದು ಬೇಗನೆ ಜೀರ್ಣವಾಗಿ ತಕ್ಷಣ ಶಕ್ತಿ ನೀಡುತ್ತದೆ, ಆದರೆ ಬೇಗನೆ ಹಸಿವಾಗುವಂತೆ ಮಾಡುತ್ತದೆ.
ಅದರಲ್ಲೂ, ಇವೆರಡನ್ನೂ ಒಟ್ಟಿಗೆ ಜಾಸ್ತಿ ತಿಂದರೆ ದೇಹಕ್ಕೆ ಅತಿ ಹೆಚ್ಚು ಕ್ಯಾಲೊರಿ ಮತ್ತು ಶಕ್ತಿ ಸಿಗುತ್ತದೆ. ಇದರೊಂದಿಗೆ,
ತೂಕ ಹೆಚ್ಚಾಗುವ ಸಾಧ್ಯತೆ: ದೇಹಕ್ಕೆ ಸಿಕ್ಕ ಈ ಹೆಚ್ಚಿನ ಕ್ಯಾಲೊರಿಗಳನ್ನು ನೀವು ದೈಹಿಕ ಶ್ರಮದ ಮೂಲಕ ಕರಗಿಸದಿದ್ದರೆ, ಅದು ಕೊಬ್ಬಾಗಿ ಬದಲಾಗಿ ತೂಕ ಹೆಚ್ಚಾಗಬಹುದು.
ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ: ಮಧುಮೇಹ ಇರುವಾತರು ಇವೆರಡನ್ನೂ ಒಟ್ಟಿಗೆ ಹೊಟ್ಟೆ ತುಂಬಾ ತಿಂದರೆ ರಕ್ತದಲ್ಲಿ ಸಕ್ಕರೆಯ ಮಟ್ಟ (Blood Sugar) ತಕ್ಷಣವೇ ಹೆಚ್ಚಾಗಬಹುದು.

ಹಾಗಾದರೆ, ಸರಿಯಾದ ಕ್ರಮ ಯಾವುದು?
ನೀವು ಅನ್ನ ಮತ್ತು ಚಪಾತಿ ಎರಡನ್ನೂ ತಿನ್ನಲು ಬಯಸಿದರೆ ಈ ಕೆಳಗಿನ ನಿಯಮ ಪಾಲಿಸಿ:
ಪ್ರಮಾಣ ಕಡಿಮೆ ಮಾಡಿ: ಮೊದಲು ತಿನ್ನುತ್ತಿದ್ದಷ್ಟೇ ಪ್ರಮಾಣದ ಚಪಾತಿ ಮತ್ತು ಅನ್ನ ಎರಡನ್ನೂ ಒಟ್ಟಿಗೆ ತಿನ್ನಬೇಡಿ.
ಉದಾಹರಣೆಗೆ, 2 ಚಪಾತಿ ಮತ್ತು 1 ತಟ್ಟೆ ಅನ್ನ ತಿನ್ನುವ ಅಭ್ಯಾಸವಿದ್ದರೆ, ಅದನ್ನು 1 ಚಪಾತಿ ಮತ್ತು ಅರ್ಧ ತಟ್ಟೆ ಅನ್ನಕ್ಕೆ ಸೀಮಿತಗೊಳಿಸಿ.
ನಾರಿನಂಶ ಮತ್ತು ಪ್ರೊಟೀನ್ ಹೆಚ್ಚಿಸಿ: ತಟ್ಟೆಯಲ್ಲಿ ಅನ್ನ-ಚಪಾತಿ ಪ್ರಮಾಣ ಕಡಿಮೆ ಮಾಡಿ, ಅದರ ಬದಲಿಗೆ ಹಸಿರು ತರಕಾರಿ ಪಲ್ಯ, ಸಲಾಡ್, ಬೇಳೆ ಸಾರು, ಮೊಳಕೆ ಕಾಳುಗಳು ಅಥವಾ ಮೊಸರನ್ನು ಹೆಚ್ಚಾಗಿ ಬಳಸಿ.
ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ರಾತ್ರಿ ಊಟಕ್ಕೆ ಬೇಡ: ರಾತ್ರಿಯ ಸಮಯದಲ್ಲಿ ನಮ್ಮ ದೇಹದ ಚಯಾಪಚಯ ಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ ರಾತ್ರಿ ವೇಳೆ ಅನ್ನ-ಚಪಾತಿ ಎರಡನ್ನೂ ಒಟ್ಟಿಗೆ ತಿನ್ನುವ ಬದಲು ಯಾವುದಾದರೂ ಒಂದನ್ನು ಮಾತ್ರ ತಿನ್ನುವುದು ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




