ಜೀವನಶೈಲಿ

ಉಪ್ಪು ಜಾಸ್ತಿಯಾಯ್ತಾ? ಅಡುಗೆ ಹಾಳಾಗದಂತೆ ತಡೆಯಲು ಇಲ್ಲಿದೆ 5 ಸೂಪರ್ ಟ್ರಿಕ್ಸ್!

ಅಡುಗೆ ಮಾಡುವಾಗ ಕೆಲವೊಮ್ಮೆ ಕೈ ತಪ್ಪಿ ಉಪ್ಪು ಜಾಸ್ತಿಯಾಗಿಬಿಡುತ್ತದೆ. ಒಮ್ಮೆ ಅಡುಗೆ ಹಾಳಾಯ್ತು ಎಂದು ಬಿಸಾಡುವ ಬದಲು ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ ರುಚಿಯನ್ನು ಸುಲಭವಾಗಿ ಬ್ಯಾಲೆನ್ಸ್ ಮಾಡಬಹುದು. ಅದರಂತೆ, ಈ 5 ಟ್ರಿಕ್ಸ್ ನಿಂದ ನಿಮಿಷದಲ್ಲಿ ರುಚಿ ಸರಿ ಮಾಡಿ!

ಉಪ್ಪು ಜಾಸ್ತಿಯಾಯ್ತಾ? ಅಡುಗೆ ಹಾಳಾಗದಂತೆ ತಡೆಯಲು ಇಲ್ಲಿದೆ 5 ಸೂಪರ್ ಟ್ರಿಕ್ಸ್!
ಉಪ್ಪು
Published On :

Cooking Tips: ಅಡುಗೆಗೆ ಉಪ್ಪೇ ಜೀವ. ಆದರೆ, ಅಡುಗೆ ಮಾಡುವಾಗ ಕೆಲವೊಮ್ಮೆ ಕೈ ತಪ್ಪಿ ಉಪ್ಪು ಜಾಸ್ತಿಯಾಗಿಬಿಡುತ್ತದೆ. ಆಗ ತಯಾರಿಸಿದ ಅಡುಗೆಯೆಲ್ಲವೂ ಹಾಳಾಯಿತಲ್ಲ ಎಂದು ಬೇಸರಮಾಡಿಕೊಂಡು, ಬಿಸಾಡುವ ಬದಲು ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ ರುಚಿಯನ್ನು ಸುಲಭವಾಗಿ ಬ್ಯಾಲೆನ್ಸ್ ಮಾಡಬಹುದು. ಆ ಕುರಿತ ಸಿಂಪಲ್ ಟಿಪ್ಸ್ ಇಲ್ಲಿದೆ:

ಆಲೂಗಡ್ಡೆ

ಹಸಿ ಆಲೂಗಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು ದೊಡ್ಡ ತುಂಡುಗಳಾಗಿ ಕತ್ತರಿಸಿ. ಈಗ ಆ ಆಲೂಗಡ್ಡೆ ತುಂಡುಗಳನ್ನು ಉಪ್ಪು ಹೆಚ್ಚಾಗಿರುವ ಸಾಂಬಾರ್, ರಸಂ ಅಥವಾ ಗ್ರೇವಿಗೆ ಹಾಕಿ 10-15 ನಿಮಿಷ ಕುದಿಸಿ. ತದನಂತರ ಆಲೂಗಡ್ಡೆಯು ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಬಡಿಸುವ ಮುನ್ನ ಆಲೂಗಡ್ಡೆಯನ್ನು ಹೊರಗೆ ತೆಗೆಯಿರಿ.

ಗೋಧಿ ಹಿಟ್ಟಿನ ಉಂಡೆಗಳು

ಚಪಾತಿಗೆ ಮಾಡುವಂತೆ ಗೋಧಿ ಹಿಟ್ಟನ್ನು ನೀರು ಹಾಕಿ ಸಣ್ಣ ಸಣ್ಣ ಉಂಡೆಗಳಾಗಿ (2-3 ಉಂಡೆಗಳು) ಮಾಡಿಕೊಳ್ಳಿ. ಈ ಹಸಿ ಹಿಟ್ಟಿನ ಉಂಡೆಗಳನ್ನು ಕುದಿಯುತ್ತಿರುವ ಸಾರಿಗೆ ಹಾಕಿ. 10-12 ನಿಮಿಷಗಳ ನಂತರ ಇವುಗಳನ್ನು ಹೊರತೆಗೆಯಿರಿ. ಇದು ಸಾರಿನಲ್ಲಿರುವ ಹೆಚ್ಚುವರಿ ಉಪ್ಪು ಮತ್ತು ಖಾರ ಎರಡನ್ನೂ ಸುಲಭವಾಗಿ ಹೀರಿಕೊಳ್ಳುತ್ತದೆ.

ಕ್ರೀಮ್, ಮೊಸರು ಅಥವಾ ಹಾಲು

ಉತ್ತರ ಭಾರತದ ಗ್ರೇವಿಗಳು, ಕುರ್ಮಾ ಅಥವಾ ಮಸಾಲಾ ಅಡುಗೆಗಳಾಗಿದ್ದರೆ ಈ ಟ್ರಿಕ್ ಬೆಸ್ಟ್. ಅಡುಗೆಗೆ 2-3 ಚಮಚ ಗಟ್ಟಿ ಮೊಸರು, ಫ್ರೆಶ್ ಕ್ರೀಮ್ ಅಥವಾ ಸ್ವಲ್ಪ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿ. ಇದು ಉಪ್ಪಿನ ಅಂಶವನ್ನು ಕರಗಿಸುವುದಲ್ಲದೆ, ಗ್ರೇವಿಗೆ ಹೋಟೆಲ್ ಶೈಲಿಯ ರಿಚ್ ರುಚಿಯನ್ನು ನೀಡುತ್ತದೆ.

ಹುಳಿ ಪದಾರ್ಥಗಳ ಬಳಕೆ

ಅಡುಗೆಗೆ ತಕ್ಕಂತೆ ನಿಂಬೆಹಣ್ಣಿನ ರಸ, ಹುಣಿಸೇಹಣ್ಣಿನ ರಸ ಅಥವಾ ಟೊಮೆಟೊ ಪ್ಯೂರಿ ಬಳಸಿ. ಅಂದ್ರೆ, ಸಾಂಬಾರ್ ಅಥವಾ ಪಲ್ಯಗಳಿಗೆ 1-2 ಚಮಚ ನಿಂಬೆ ರಸ ಅಥವಾ ಹುಳಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಅದರಂತೆ, ಹುಳಿಯು ಉಪ್ಪಿನ ತೀವ್ರತೆಯನ್ನು ತಕ್ಷಣವೇ ಕಡಿಮೆ ಮಾಡಿ ರುಚಿಯನ್ನು ಸಮತೋಲನಗೊಳಿಸುತ್ತದೆ.

ಈರುಳ್ಳಿ ಬಳಕೆ

ಹಸಿ ಈರುಳ್ಳಿ ಅಥವಾ ಹುರಿದ ಈರುಳ್ಳಿಯನ್ನು ಬಳಸಬಹುದು. ಅದರಂತೆ, ಗ್ರೇವಿ ಅಥವಾ ಸಾಂಬಾರ್ ಆಗಿದ್ದರೆ ಹಸಿ ಈರುಳ್ಳಿಯನ್ನು ಎರಡು ಭಾಗವಾಗಿ ಕತ್ತರಿಸಿ ಹಾಕಿ ಸ್ವಲ್ಪ ಹೊತ್ತಿನ ನಂತರ ತೆಗೆಯಿರಿ. ಪಲ್ಯಗಳಾಗಿದ್ದರೆ ಸ್ವಲ್ಪ ಈರುಳ್ಳಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಅದಕ್ಕೆ ಮಿಕ್ಸ್ ಮಾಡಿ. ಯಾಕಂದ್ರೆ, ಈರುಳ್ಳಿಯ ನೈಸರ್ಗಿಕ ಸಿಹಿ ಅಂಶವು ಉಪ್ಪಿನ ಕಟುತ್ವನ್ನು ಮರೆಮಾಚುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.