ಹಾಲಿನ ಪ್ಯಾಕೆಟ್‌ನ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು? ನಿಮ್ಮ ಆರೋಗ್ಯಕ್ಕೆ ಯಾವ ಹಾಲು ಉತ್ತಮ?
ನಾವು ದಿನಾ ಅಂಗಡಿಯಿಂದ ಹಾಲಿನ ಪ್ಯಾಕೆಟ್ ತರುತ್ತೇವೆ ಆದರೆ ಅದರ ಬಣ್ಣವನ್ನು ಗಮನಿಸಿದ್ದೀರಾ. ಕೆಲವು ನೀಲಿ ಬಣ್ಣದಲ್ಲಿರುತ್ತವೆ, ಇನ್ನೂ ಕೆಲವು ಹಸಿರು, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿರುತ್ತವೆ.! ಹಾಗಾದ್ರೆ, ಹಾಲಿನ ಪ್ಯಾಕೆಟ್‌ನ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು? ಆ ಕುರಿತ ವರದಿ ಇಲ್ಲಿದೆ:

Milk Packet Colors Decoded: ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅಂಗಡಿಯಿಂದ ತರುವ ಹಾಲಿನ ಪ್ಯಾಕೆಟ್ ಮೇಲೆ ನೀವು ಎಂದಾದರೂ ಕಣ್ಣಾಡಿಸಿದ್ದೀರಾ? ಕೆಲವೊಮ್ಮೆ ನೀಲಿ, ಕೆಲವೊಮ್ಮೆ ಹಸಿರು, ಇನ್ನು ಕೆಲವೊಮ್ಮೆ ಕಿತ್ತಳೆ ಬಣ್ಣದ ಪ್ಯಾಕೆಟ್‌ಗಳಲ್ಲಿ ಹಾಲು ಬರುತ್ತದೆ. ಇದನ್ನು ಬಹುತೇಕರು ಕೇವಲ ಕಂಪನಿಯ ಡಿಸೈನ್ ಅಥವಾ ಸುಂದರವಾದ ಪ್ಯಾಕಿಂಗ್ ಎಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಈ ಬಣ್ಣಗಳ ಹಿಂದೆ ನಿಮ್ಮ ಆರೋಗ್ಯವನ್ನು ನಿರ್ಧರಿಸುವ ಅತಿ ಮುಖ್ಯವಾದ ರಹಸ್ಯವಿದೆ. ನೀವು ಕುಡಿಯುವ ಹಾಲಿನಲ್ಲಿ ಎಷ್ಟು ಕೊಬ್ಬಿನಾಂಶವಿದೆ ಮತ್ತು ಅದು ನಿಮ್ಮ ದೇಹಕ್ಕೆ ಸರಿಹೊಂದುತ್ತದೆಯೇ ಎಂಬುದರ ಮಾಹಿತಿ ಇಲ್ಲಿದೆ:
ನೀಲಿ ಬಣ್ಣದ ಪ್ಯಾಕೆಟ್
- ಟೋನ್ಡ್ ಮಿಲ್ಕ್
ನಾವು ಹೆಚ್ಚಾಗಿ ಬಳಸುವ ಹಾಲು ಇದೇ. ಇದರಲ್ಲಿ ಕೊಬ್ಬಿನ ಅಂಶ 3 ಶೇಕಡಾ ಮತ್ತು SNF 8.5 ಶೇಕಡಾ ಇರುತ್ತದೆ. ಇದು ಸಾಮಾನ್ಯ ಬಳಕೆಗೆ, ಟೀ ಕಾಫಿಗೆ ಉತ್ತಮ. ಕೊಬ್ಬು ಕಡಿಮೆ ಇರುವುದರಿಂದ ಎಲ್ಲಾ ವಯಸ್ಸಿನವರು ಕುಡಿಯಬಹುದು.
ಹಸಿರು ಬಣ್ಣದ ಪ್ಯಾಕೆಟ್
- ಫುಲ್ ಕ್ರೀಮ್ ಮಿಲ್ಕ್
ಇದರಲ್ಲಿ ಕೊಬ್ಬಿನ ಅಂಶ ಅತಿ ಹೆಚ್ಚು, ಅಂದರೆ 6 ಶೇಕಡಾ ಇರುತ್ತದೆ. ಇದು ದಪ್ಪವಾಗಿರುತ್ತದೆ ಮತ್ತು ರುಚಿ ಜಾಸ್ತಿ. ಮಕ್ಕಳು, ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಮತ್ತು ಮೊಸರು, ತುಪ್ಪ, ಪನೀರ್ ಜಾಸ್ತಿ ಮಾಡುವವರಿಗೆ ಇದು ಬೆಸ್ಟ್. ಆದರೆ ಕೊಲೆಸ್ಟ್ರಾಲ್ ಅಥವಾ ಬೊಜ್ಜು ಇರುವವರು ಇದನ್ನು ತಪ್ಪಿಸುವುದು ಒಳ್ಳೆಯದು.
ಕಿತ್ತಳೆ ಅಥವಾ ಕೆಂಪು ಬಣ್ಣದ ಪ್ಯಾಕೆಟ್
- ಫುಲ್ ಕ್ರೀಮ್ ಅಥವಾ ಸ್ಟ್ಯಾಂಡರ್ಡ್ ಮಿಲ್ಕ್
ಕೆಲವು ಕಂಪನಿಗಳಲ್ಲಿ ಕಿತ್ತಳೆ ಬಣ್ಣವು ಸ್ಟ್ಯಾಂಡರ್ಡ್ ಮಿಲ್ಕ್ ಅನ್ನು ಸೂಚಿಸುತ್ತದೆ. ಇದರಲ್ಲಿ 4.5 ಶೇಕಡಾ ಕೊಬ್ಬು ಇರುತ್ತದೆ. ಇದು ಟೋನ್ಡ್ ಮತ್ತು ಫುಲ್ ಕ್ರೀಮ್ ನಡುವಿನ ಆಯ್ಕೆ. ಟೀ ಶಾಪ್ ಮತ್ತು ಹೋಟೆಲ್ ಗಳಲ್ಲಿ ಹೆಚ್ಚಾಗಿ ಇದನ್ನೇ ಬಳಸುತ್ತಾರೆ.
ಹಳದಿ ಅಥವಾ ತಿಳಿ ಹಸಿರು ಪ್ಯಾಕೆಟ್
- ಡಬಲ್ ಟೋನ್ಡ್ ಮಿಲ್ಕ್
ಇದರಲ್ಲಿ ಕೊಬ್ಬು ತುಂಬಾ ಕಡಿಮೆ, ಕೇವಲ 1.5 ಶೇಕಡಾ ಮಾತ್ರ. ತೂಕ ಇಳಿಸಿಕೊಳ್ಳಲು ಬಯಸುವವರು, ಮಧುಮೇಹ ಮತ್ತು ಹೃದಯದ ಸಮಸ್ಯೆ ಇರುವವರಿಗೆ ವೈದ್ಯರು ಇದನ್ನೇ ಸಲಹೆ ನೀಡುತ್ತಾರೆ.

ಹಾಗಾದರೆ ಯಾವ ಹಾಲು ಒಳ್ಳೆಯದು?
ಯಾವ ಹಾಲು ಒಳ್ಳೆಯದು ಎಂಬುದು ನಿಮ್ಮ ಆರೋಗ್ಯದ ಮೇಲೆ ಅವಲಂಬಿಸಿದೆ. ಮಕ್ಕಳ ಬೆಳವಣಿಗೆಗೆ ಮತ್ತು ರುಚಿಗೆ ಫುಲ್ ಕ್ರೀಮ್ ಹಸಿರು ಪ್ಯಾಕೆಟ್ ಒಳ್ಳೆಯದು. ಪ್ರತಿದಿನದ ಸಾಮಾನ್ಯ ಬಳಕೆಗೆ ನೀಲಿ ಪ್ಯಾಕೆಟ್ ಟೋನ್ಡ್ ಮಿಲ್ಕ್ ಆರೋಗ್ಯಕರ ಮತ್ತು ಬಜೆಟ್ ಫ್ರೆಂಡ್ಲಿ. ಡಯಟ್ ಮಾಡುವವರು ಮತ್ತು ಶುಗರ್ ಪೇಷೆಂಟ್ ಗಳಿಗೆ ಡಬಲ್ ಟೋನ್ಡ್ ಹಳದಿ ಪ್ಯಾಕೆಟ್ ಬೆಸ್ಟ್.
ಹಾಗಾಗಿ, ಮುಂದಿನ ಬಾರಿ ಹಾಲು ತರುವಾಗ ಬರೀ ಬ್ರಾಂಡ್ ನೋಡದೆ ಬಣ್ಣ ನೋಡಿ ನಿಮ್ಮ ಆರೋಗ್ಯಕ್ಕೆ ತಕ್ಕ ಹಾಲನ್ನು ಆಯ್ಕೆ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




