ಅಡುಗೆ ಮನೆ Gas Stove ಜಿಡ್ಡುಗಟ್ಟಿದೆಯಾ? ನಿಮಿಷಗಳಲ್ಲಿ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ Kitchen Hacks!
Kitchen Hacks: ಅಡುಗೆ ಮನೆಯಲ್ಲಿ ದಿನಾ ಅಡುಗೆ ಮಾಡುವುದರಿಂದ ಗ್ಯಾಸ್ ಸ್ಟೌವ್ ಮೇಲೆ ಎಣ್ಣೆ ಮತ್ತು ಜಿಡ್ಡು ಕಟ್ಟಿಕೊಳ್ಳುವುದು ಸಾಮಾನ್ಯ. ಎಷ್ಟೇ ಒರೆಸಿದರೂ ಆ ಜಿಡ್ಡು ಹೋಗುವುದಿಲ್ಲ ಮತ್ತು ಸ್ಟೌವ್ ನೋಡಲು ಕೊಳಕಾಗಿ ಕಾಣುತ್ತದೆ. ಅದಕ್ಕೆ ಇಲ್ಲಿದೆ ನೋಡಿ ಸಿಂಪಲ್ ಕಿಚನ್ ಹ್ಯಾಕ್ಸ್:

How To Clean Gas Stove: ಅಡುಗೆ ಮನೆಯಲ್ಲಿ ದಿನಾ ಅಡುಗೆ ಮಾಡುವುದರಿಂದ ಗ್ಯಾಸ್ ಸ್ಟೌವ್ ಮೇಲೆ ಎಣ್ಣೆ ಮತ್ತು ಜಿಡ್ಡು ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಅಡುಗೆ ಮನೆಯ ದೊಡ್ಡ ತಲೆನೋವು.! ಎಷ್ಟೇ ಒರೆಸಿದರೂ ಸಹ ಆ ಜಿಡ್ಡು ಹೋಗುವುದಿಲ್ಲ. ಅದರಿಂದ, ಸ್ಟೌವ್ ನೋಡಲು ಕೊಳಕಾಗಿ ಕಾಣುತ್ತದೆ. ಹಾಗಾಗಿ, ಆ ಹಠಮಾರಿ ಕಲೆಗಳನ್ನು ಕ್ಲೀನ್ ಮಾಡಲು ಮಾರ್ಕೆಟ್‌ನ ದುಬಾರಿ ಕೆಮಿಕಲ್ ಕ್ಲೀನರ್‌ಗಳ ಮೊರೆ ಹೋಗುತ್ತೇವೆ. ಆದರೆ, ನಿಮಗೆ ಗೊತ್ತಾ? ದುಬಾರಿ ಕ್ಲೀನರ್ ಖರೀದಿಸುವ ಬದಲು ಮನೆಯಲ್ಲಿಯೇ ಇರುವ ವಸ್ತುಗಳಿಂದ ನಿಮಿಷಗಳಲ್ಲಿ ಸ್ಟೌವ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು.! ಆ ಕುರಿತ ವರದಿ ಇಲ್ಲಿದೆ:
ಬೇಕಾಗುವ ಸಾಮಗ್ರಿಗಳು:
ಈ ಟಿಪ್ಸ್ ಗಾಗಿ ನಿಮಗೆ ಅಡುಗೆ ಸೋಡಾ, ಬಿಳಿ ವಿನೆಗರ್, ನಿಂಬೆಹಣ್ಣು, ದ್ರವ ಸೋಪು ಮತ್ತು ಬಿಸಿ ನೀರು ಸಾಕು.
ಇವು ಆರೋಗ್ಯಕ್ಕೆ ಹಾನಿ ಮಾಡದ ನೈಸರ್ಗಿಕ ಕ್ಲೀನರ್ ಗಳಿದ್ದಂತೆ ಕೆಲಸ ಮಾಡುತ್ತವೆ.
ಮೊದಲ ಟ್ರಿಕ್ ಅಡುಗೆ ಸೋಡಾ ಮತ್ತು ವಿನೆಗರ್
ಮೊದಲು ಗ್ಯಾಸ್ ಸ್ಟೌವ್ ಮೇಲಿನ ಬರ್ನರ್ ಮತ್ತು ಸ್ಟ್ಯಾಂಡ್ ಗಳನ್ನು ತೆಗೆದು ಬಿಸಿ ನೀರಿನಲ್ಲಿ ಹಾಕಿ. ನಂತರ ಸ್ಟೌವ್ ಮೇಲೆ ಅಡುಗೆ ಸೋಡಾವನ್ನು ಚೆನ್ನಾಗಿ ಉದುರಿಸಿ. ಅದರ ಮೇಲೆ ವಿನೆಗರ್ ಸಿಂಪಡಿಸಿ. ಎರಡೂ ಸೇರಿದಾಗ ನೊರೆ ಬರುತ್ತದೆ. ಹೀಗೆ 10 ರಿಂದ 15 ನಿಮಿಷ ಬಿಟ್ಟುಬಿಡಿ. ನಂತರ ಸ್ಕ್ರಬ್ಬರ್ ನಿಂದ ಉಜ್ಜಿ ಒದ್ದೆ ಬಟ್ಟೆಯಿಂದ ಒರೆಸಿದರೆ ಜಿಡ್ಡು ಸಂಪೂರ್ಣ ಮಾಯವಾಗುತ್ತದೆ.
ಎರಡನೇ ಟ್ರಿಕ್ ನಿಂಬೆ ಮತ್ತು ಉಪ್ಪು
ಗ್ಯಾಸ್ ಸ್ಟೌವ್ ಮೇಲೆ ತುಂಬಾ ಹಳೆಯ ಜಿಡ್ಡು ಇದ್ದರೆ ನಿಂಬೆಹಣ್ಣನ್ನು ಅರ್ಧ ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪು ಹಾಕಿ ಜಿಡ್ಡಿರುವ ಜಾಗಕ್ಕೆ ಉಜ್ಜಿ. ನಿಂಬೆಯಲ್ಲಿರುವ ಆಮ್ಲ ಮತ್ತು ಉಪ್ಪಿನ ಒರಟುತನದಿಂದ ಜಿಡ್ಡು ಸುಲಭವಾಗಿ ಕರಗುತ್ತದೆ. ನಂತರ ಬೆಚ್ಚಗಿನ ನೀರಿನಲ್ಲಿ ಬಟ್ಟೆ ಅದ್ದಿ ಒರೆಸಿದರೆ ಸ್ಟೌವ್ ಹೊಳೆಯುತ್ತದೆ.
ಇನ್ನು, ಬರ್ನರ್ ಕ್ಲೀನ್ ಮಾಡುವುದು ಹೇಗೆ?
ಬರ್ನರ್ ರಂಧ್ರಗಳಲ್ಲಿ ಜಿಡ್ಡು ತುಂಬಿ ಬೆಂಕಿ ಸರಿಯಾಗಿ ಬರುವುದಿಲ್ಲ. ಅಂತಹ ಬರ್ನರ್ ಗಳನ್ನು ಒಂದು ಬೌಲ್ ಬಿಸಿ ನೀರಿನಲ್ಲಿ ಅಡುಗೆ ಸೋಡಾ ಮತ್ತು ಸೋಪು ಹಾಕಿ ಒಂದು ಗಂಟೆ ನೆನೆಸಿಡಿ. ನಂತರ ಹಳೆಯ ಟೂತ್ ಬ್ರಷ್ ನಿಂದ ತಿಕ್ಕಿ ತೊಳೆದರೆ ಬರ್ನರ್ ಹೊಸದರಂತೆ ಆಗುತ್ತದೆ.
ಇನ್ನು, ಕೊನೆಯಲ್ಲಿ ಯಾವುದೇ ಕಾರಣಕ್ಕೂ ಗ್ಯಾಸ್ ಸ್ಟೌವ್ ಮೇಲೆ ಕಠಿಣವಾದ ಸ್ಟೀಲ್ ಸ್ಕ್ರಬ್ಬರ್ ಬಳಸಬೇಡಿ. ಇದು ಒಲೆಯ ಗ್ಲಾಸ್ ಅಥವಾ ಸ್ಟೀಲ್ ಬಾಡಿ ಮೇಲೆ ಗೀರುಗಳನ್ನು ಉಂಟುಮಾಡುತ್ತದೆ. ಅದರ ಬದಲು ಸಾಫ್ಟ್ ಆದ ಸ್ಪಾಂಜ್ ಅಥವಾ ಕಾಟನ್ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ ಒಲೆಯನ್ನು ಸ್ವಚ್ಛವಾಗಿ ಒರೆಸಿ. ವಾರಕ್ಕೆ ಕನಿಷ್ಠ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಗ್ಯಾಸ್ ಸ್ಟೌವ್ ಯಾವಾಗಲೂ ಹೊಸದರಂತೆ ಹೊಳೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




