ಗ್ಯಾಡ್ಜೆಟ್ಸ್

ಫೋನ್ ವಾಟರ್‌ಪ್ರೂಫ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು! ಯಾವುವು ಗೊತ್ತಾ?

ಮಳೆಗಾಲದಲ್ಲಿ ಮೊಬೈಲ್ ಫೋನ್ ನೀರಿಗೆ ಬೀಳುವುದು ಅಥವಾ ಮಳೆಯಲ್ಲಿ ಒದ್ದೆಯಾಗುವುದು ಸಾಮಾನ್ಯ. IP68 ಅಂದ್ರೆ ಫೋನ್‌ನ ಸುರಕ್ಷಿತವಾಗಿ ನೀರಲ್ಲಿ ಮುಳುಗಿಸಬಹುದು ಅಂತ ಅಲ್ಲ.! ಹಾಗಾಗಿ, ಈ 5 ಭಾಗಕ್ಕೆ ಮಾತ್ರ ನೀರು ತಾಗದ ಹಾಗೆ ನೋಡ್ಕೊಳ್ಳಿ.!

ಫೋನ್ ವಾಟರ್‌ಪ್ರೂಫ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು! ಯಾವುವು ಗೊತ್ತಾ?
ಫೋನ್ ವಾಟರ್‌ಪ್ರೂಫ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು — Online Desk
Published On :

Mobile Water Damage: ನನ್ನ ಫೋನ್ IP68 ವಾಟರ್‌ಪ್ರೂಫ್ (Waterproof) ಇದೆ ಅಂತ ಮಳೆಯಲ್ಲಿ ಧೈರ್ಯವಾಗಿ ಬಳಸ್ತೀರಾ? ಒಂದು ನಿಮಿಷ ನಿಲ್ಲಿ! IP67 ಅಥವಾ IP68 ಅಂದ್ರೆ ಫೋನ್‌ನ (Phone) ಸುರಕ್ಷಿತವಾಗಿ ನೀರಲ್ಲಿ ಮುಳುಗಿಸಬಹುದು ಅಂತ ಅಲ್ಲ.! ಹೌದು, ಆದರೆ ವಾಟರ್ ರೆಸಿಸ್ಟೆಂಟ್ (Water-Resistant) ಎಂದರೆ ಅದು ಸಂಪೂರ್ಣವಾಗಿ ವಾಟರ್ ಪ್ರೂಫ್ ಎಂದಲ್ಲ! ಅದರಲ್ಲೂ, ಮಳೆಯಲ್ಲಿ ಒದ್ದೆ ಆದ್ರೆ ವಾಟರ್‌ಪ್ರೂಫ್ ಫೋನ್ (Waterproof Phone) ಆದ್ರೂ ಈ 5 ಭಾಗಕ್ಕೆ ನೀರು ತಾಗಿದರೆ ರಿಪೇರಿ ಖರ್ಚು ₹10,000 ವರೆಗೂ ದಾಟಬಹುದು. ಹಾಗಾಗಿ, ಈ 5 ಭಾಗಕ್ಕೆ ಮಾತ್ರ ನೀರು ತಾಗದ ಹಾಗೆ ನೋಡ್ಕೊಳ್ಳಿ.!

ಚಾರ್ಜಿಂಗ್ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್:

ಇದು ಅತಿ ಸೆನ್ಸಿಟಿವ್ ಜಾಗ.! ಒದ್ದೆಯಾದ ಪೋರ್ಟ್‌ನಲ್ಲಿ ಚಾರ್ಜ್ ಹಾಕಿದ್ರೆ ಶಾರ್ಟ್ ಸರ್ಕ್ಯೂಟ್ ಆಗಿ ಮದರ್‌ಬೋರ್ಡ್ ಸುಟ್ಟು ಹೋಗಬಹುದು. ಹಾಗಾಗಿ, ಮೊಬೈಲ್ ಒದ್ದೆ ಆದ ತಕ್ಷಣ ಪೋರ್ಟ್‌ನ ಟಿಶ್ಯೂನಿಂದ ಒರೆಸಿ, 2-3 ಗಂಟೆ ಚಾರ್ಜ್ ಹಾಕಬೇಡಿ.

ಸ್ಪೀಕರ್ ಮತ್ತು ಮೈಕ್ರೋಫೋನ್ ಗ್ರಿಲ್:

ಸ್ಪೀಕರ್‌ನಲ್ಲಿ ನೀರು ಹೋದ್ರೆ ಸೌಂಡ್ ಕರ್ಕಶವಾಗಿ ಬರುತ್ತೆ ಇದರೊಂದಿಗೆ ಸೌಂಡ್ ಕಡಿಮೆ ಆಗುತ್ತೆ. ಅದರಲ್ಲೂ, ಮೈಕ್‌ನಲ್ಲಿ ನೀರು ಹೋದ್ರೆ ಕಾಲ್‌ನಲ್ಲಿ ನಿಮ್ಮ ಮಾತು ಕೇಳಿಸಲ್ಲ. ಹಾಗಾಗಿ, ಒದ್ದೆ ಆದ ತಕ್ಷಣ ಫೋನ್‌ನ ಸ್ಪೀಕರ್ ಕಡೆ ಕೆಳಗೆ ಇಟ್ಟು ಲಘುವಾಗಿ ಜೋರು ಮಾಡಿ. ನೀರು ಹೊರಗೆ ಬರುತ್ತೆ.

ಸಿಮ್ ಸ್ಲಾಟ್:

ಸಿಮ್ ಟ್ರೇ ಸುತ್ತ ರಬ್ಬರ್ ಸೀಲ್ ಇದ್ರೂ, ಜಾಸ್ತಿ ನೀರು ಹೋದ್ರೆ ಒಳಗೆ ಹೋಗುತ್ತೆ. ಇದರಿಂದ ಸಿಮ್ ಕಾರ್ಡ್ ಮತ್ತು ಮದರ್‌ಬೋರ್ಡ್ ಕನೆಕ್ಷನ್ ಡ್ಯಾಮೇಜ್ ಆಗಬಹುದು. ಹಾಗಾಗಿ, ಮೊಬೈಲ್ ಒದ್ದೆ ಆದ್ರೆ ಸಿಮ್ ಟ್ರೇ ತೆಗೆದು ಒಣಗಿಸಿ.

ಕ್ಯಾಮೆರಾ ಲೆನ್ಸ್ ಮತ್ತು ಸೆನ್ಸರ್:

ಕ್ಯಾಮೆರಾ ಸುತ್ತ ಜಾಗದಲ್ಲಿ ನೀರು ನಿಂತರೆ ಲೆನ್ಸ್‌ನಲ್ಲಿ ಮಂಜು ಕಟ್ಟುತ್ತೆ. ಫೋಟೋ ಬ್ಲರ್ ಆಗುತ್ತೆ. ಜೊತೆಗೆ ಪ್ರಾಕ್ಸಿಮಿಟಿ ಸೆನ್ಸರ್ ಹಾಗೂ ಫಿಂಗರ್ಪ್ರಿಂಟ್ ಸೆನ್ಸರ್ ಕೆಲಸ ಮಾಡೋದಿಲ್ಲ. ಹಾಗಾಗಿ, ಮೃದುವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿ.

ಪವರ್ ಮತ್ತು ವಾಲ್ಯೂಮ್‍ ಬಟನ್‌ಗಳು:

ಈ ಬಟನ್‌ಗಳ ಕೆಳಗೆ ಚಿಕ್ಕ ಗ್ಯಾಪ್ ಇರುತ್ತೆ. ಅಲ್ಲಿಂದ ನೀರು ಒಳಗೆ ಹೋಗಿ ಬಟನ್ ಸ್ಟಕ್ ಆಗಬಹುದು.ಹಾಗಾಗಿ, ಆ ಬಟನ್ಗಳ್ಳನು ಒತ್ತಿ ಒತ್ತಿ ಚೆಕ್ ಮಾಡ್ಬೇಡಿ. ಸ್ವಾಭಾವಿಕವಾಗಿ ಒಣಗಲು ಬಿಡಿ.

ಮಳೆಯಲ್ಲಿ ಒದ್ದೆಯಾದ್ರೆ ತಕ್ಷಣ ಏನ್ ಮಾಡ್ಬೇಕು?

  • ಮೊದಲು ಫೋನ್ ಆಫ್ ಮಾಡಿ

  • ನೀರು ಇನ್ನೂ ಒಳಗೆ ಹೋಗುತ್ತೆ. ಅಲುಗಾಡಿಸಬೇಡಿ, ಬ್ಲೋ ಮಾಡ್ಬೇಡಿ

  • ಕೇಸ್, ಸಿಮ್ ಟ್ರೇ ತೆಗೆದು ಟಿಶ್ಯೂನಿಂದ ಒರೆಸಿ

  • ಹೇರ್ ಡ್ರೈಯರ್, ಓವನ್, ಅಕ್ಕಿ ಡಬ್ಬಕ್ಕೆ ಹಾಕೋ ಟ್ರಿಕ್ ಬೇಡ. ಹೀಟ್‌ನಿಂದ ಇನ್ನಷ್ಟು ಡ್ಯಾಮೇಜ್

  • ಹಾಗಾಗಿ, ಫ್ಯಾನ್ ಮುಂದೆ ಇಟ್ಟು 6-8 ಗಂಟೆ ಒಣಗಲು ಬಿಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.