ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ: ಕೈದಿಗಳ ಬಳಿಯಿದ್ದ ಮೊಬೈಲ್, ಸಿಮ್ ಕಾರ್ಡ್ ವಶಕ್ಕೆ; ಶೌಚಾಲಯದಲ್ಲಿ ಕಂತೆ ಕಂತೆ ಹಣ ಜಪ್ತಿ..!
ಸೆಪ್ಟೆಂಬರ್ 29ರ ಮಧ್ಯಾಹ್ನ ಇಬ್ಬರು ವಾರ್ಡರ್‌ಗಳು ಸಿ ಬ್ಯಾರಕ್‌ನ ಕೊಠಡಿ ಸಂಖ್ಯೆ 4ರಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅಪರಾಧಿ ಕೈದಿ ಮಲತೇಶ್ ಬಳಿಯಲ್ಲಿ ಸಿಮ್ ಕಾರ್ಡ್ ಇಲ್ಲದ ಬಿಳಿ ಬಣ್ಣದ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ.

ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದೆ.
ಜೈಲು ಅಧಿಕಾರಿಗಳು ನಡೆಸಿದ ಜಂಟಿ ಅನಿರೀಕ್ಷಿತ ತಪಾಸಣೆಯ ವೇಳೆ ಕೈದಿಗಳ ಬಳಿ ಇದ್ದ ಒಂದು ಕೀಪ್ಯಾಡ್ ಮೊಬೈಲ್ ಫೋನ್, ಮೂರು ಸಿಮ್ ಕಾರ್ಡ್‌ಗಳು ಹಾಗೂ ರೂ. 8,500 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಜೈಲು ಅಧೀಕ್ಷಕ ಬಿ.ಎಂ. ಕೋಟ್ರೇಶ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಸೆಪ್ಟೆಂಬರ್ 29ರ ಮಧ್ಯಾಹ್ನ ಇಬ್ಬರು ವಾರ್ಡರ್‌ಗಳು ಸಿ ಬ್ಯಾರಕ್‌ನ ಕೊಠಡಿ ಸಂಖ್ಯೆ 4ರಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅಪರಾಧಿ ಕೈದಿ ಮಲತೇಶ್ ಬಳಿಯಲ್ಲಿ ಸಿಮ್ ಕಾರ್ಡ್ ಇಲ್ಲದ ಬಿಳಿ ಬಣ್ಣದ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ.
ಅದೇ ರೀತಿ, ಕೊಠಡಿ ಸಂಖ್ಯೆ 5ರಲ್ಲಿ ತಪಾಸಣೆ ನಡೆಸಿದಾಗ ಅಪರಾಧಿ ಕೈದಿ ಮೊಹಮ್ಮದ್ ನವಾಜ್ ಅವರ ಹಾಸಿಗೆಯ ಮೇಲಿದ್ದ ಟೋಪಿಯೊಳಗೆ ಮೂರು ಸಿಮ್ ಕಾರ್ಡ್‌ಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಇನ್ನು ಸೆಪ್ಟೆಂಬರ್ 28ರಂದು ಜೈಲಿನ ಅಡುಗೆಮನೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ, ಜೈಲರ್ ಕೊಠಡಿ ಸಂಖ್ಯೆ 7ರ ಶೌಚಾಲಯದಲ್ಲಿದ್ದ ಬ್ಯಾಗ್‌ನೊಳಗೆ ರೂ.8,500 ನಗದು ಪತ್ತೆಹಚ್ಚಿದ್ದಾರೆ. ಅಧಿಕಾರಿಗಳು ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆಯಡಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



