ಪರಪ್ಪನ ಅಗ್ರಹಾರ ಕಾರಾಗೃಹ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ: ಕೈದಿಗಳ ಬಳಿಯಿದ್ದ ಮೊಬೈಲ್, ಸಿಮ್ ಕಾರ್ಡ್ ವಶಕ್ಕೆ; ಶೌಚಾಲಯದಲ್ಲಿ ಕಂತೆ ಕಂತೆ ಹಣ ಜಪ್ತಿ..!
ಸೆಪ್ಟೆಂಬರ್ 29ರ ಮಧ್ಯಾಹ್ನ ಇಬ್ಬರು ವಾರ್ಡರ್‌ಗಳು ಸಿ ಬ್ಯಾರಕ್‌ನ ಕೊಠಡಿ ಸಂಖ್ಯೆ 4ರಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅಪರಾಧಿ ಕೈದಿ ಮಲತೇಶ್ ಬಳಿಯಲ್ಲಿ ಸಿಮ್ ಕಾರ್ಡ್ ಇಲ್ಲದ ಬಿಳಿ ಬಣ್ಣದ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ.

ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ, ಆಕೆ ನನ್ನ ಮಗಳಿದ್ದಂತೆ: ಅವರ ಸ್ಥಿತಿ ಹೇಳಬಾರದು; ನಾಗಲಕ್ಷ್ಮೀ ಚೌಧರಿ
ಮಹಿಳಾ ಕೈದಿಗಳನ್ನು ಇಟ್ಟಿರುವ ಬ್ಯಾರಕ್‌ಗಳನ್ನು ಪರಿಶೀಲಿಸಿದ್ದೇನೆ. ಕೈದಿಗಳಿಗೆ ನೀಡುವ ಊಟ, ಸೋಪು, ಪೇಸ್ಟ್ ಸೇರಿದಂತೆ ಇತರೆ ಸೌಲಭ್ಯಗಳನ್ನೂ ಪರಿಶೀಲಿಸಿದ್ದೇನೆ. ಇದೇ ವೇಳೆ ಸೊಳ್ಳೆಗಳ ಕಾಟ ವಿಪರೀತವಿದೆ ಎಂಬುದಾಗಿ ಹಲವು ಕೈದಿಗಳು ನೋವು ತೋಡಿಕೊಂಡರು ಎಂದು ಹೇಳಿದರು.

ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಕಾರಾಗೃಹದಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ
ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯ ವೇಳೆ ಪ್ರಜ್ವಲ್ ಅವರಿಂದ ಸಿಮ್ ಕಾರ್ಡ್ ಹೊಂದಿದ್ದ ಸ್ಮಾರ್ಟ್‌ಫೋನ್, ಮೊಬೈಲ್ ಚಾರ್ಜರ್, ಡೈರಿ ಹಾಗೂ ಕಪ್ಪು ಬಣ್ಣದ ಪೆನ್‌ಡ್ರೈವ್ ಪತ್ತೆಯಾಗಿದೆ.

ಪರಪ್ಪನ ಅಗ್ರಹಾರ ಜೈಲಲ್ಲಿ ಮುಂದುವರೆದ ಐಷಾರಾಮಿ ಸೌಲಭ್ಯ; ಹಿರಿಯ ಅಧಿಕಾರಿ ವಿರುದ್ಧವೇ ಕೈದಿಗಳ ಗಂಭೀರ ಆರೋಪ: Video ವೈರಲ್
ವಿಡಿಯೋ ವೈರಲ್ ಆದ ಬೆನ್ನಲ್ಲೇ ತೀವ್ರವಾಗಿ ಗರಂ ಆಗಿರುವ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲಿನ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸಿಗರೇಟ್-ನಿಷೇಧಿತ ಮಾದಕವಸ್ತು ಕಳ್ಳಸಾಗಣೆ ಮಾಡಲು ಯತ್ನ: ವಾರ್ಡನ್ ಬಂಧನ
ರಾಹುಲ್ ಪಾಟೀಲ್ ಎಂಬಾತ ಬಂಧನಕ್ಕೊಳಗಾದ ಜೈಲು ವಾರ್ಡನ್ ಎಂದು ಗುರುತಿಸಲಾಗಿದೆ. ಈತ ಹಿಂದಿನ ಜೂನ್‍ನಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ 'ರಾಜಾತಿಥ್ಯ': ಇಬ್ಬರು ಅಧಿಕಾರಿಗಳು ಅಮಾನತು; ಮುಖ್ಯ ಅಧೀಕ್ಷಕ ಎತ್ತಂಗಡಿ; ತನಿಖೆಗೆ ಸಮಿತಿ ರಚನೆ; Video
ಪರಪ್ಪನ ಅಗ್ರಹಾರ ಕೈದಿಗಳಿಗೆ ನಿಯಮ ಮೀರಿ ವಿಶೇಷ ಸವಲತ್ತು ನೀಡಿರುವ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಪರಮೇಶ್ವರ್ ಅವರು ಇಂದು ಮಹತ್ವದ ಸಭೆ ನಡೆಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳು ಅವ್ಯಾಹತ: ಕೈದಿಗಳಿಂದ ಮೊಬೈಲ್ ಬಳಕೆ ಅಬಾಧಿತ; ಹೊರಗೆ ಹೋದ ವಿಚಾರಾಧೀನ ಕೈದಿಗಳ ಬೆದರಿಸಿ ಸುಲಿಗೆ..!
ಜಾಮೀನು ಮೂಲಕ ಹೊರ ಹೋಗುವ ವಿಚಾರಣಾಧೀನ ಕೈದಿಗಳ ಫೋನ್ ಸಂಖ್ಯೆಗಳನ್ನು ಪಡೆಯುವ ಕೈದಿಗಳು, ವಾಟ್ಸಾಪ್ ಮೂಲಕ ಅವರಿಗೆ ಕರೆ ಮಾಡಿ, ಕೊಲೆ ಬೆದರಿಕೆ ಮತ್ತು ಕಿರುಕುಳ ನೀಡುವ ಮೂಲಕ ಹಣವನ್ನು ವಸೂಲಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಜೈಲು ಪಾಲಾದ “ದಾಸ”: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕೈದಿ ನಂಬರ್ 6106, ವಿಶೇಷ ಬ್ಯಾರಕ್ ವ್ಯವಸ್ಥೆ!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದು, ದರ್ಶನ್ ಈಗ ವಿಚಾರಣಾಧೀನ ಕೈದಿ ನಂಬರ್ 6106 ಆಗಿದ್ದಾರೆ.

ಬೆಂಗಳೂರು: ಜೈಲಿನಲ್ಲಿರುವ ಮಗನಿಗೆ ಡ್ರಗ್ಸ್ ನೀಡಲು ಹೋದ ತಾಯಿಯ ಬಂಧನ
ಜೈಲಿನಲ್ಲಿರುವ ಮಗನಿಗೆ ಮಾದಕ ವಸ್ತು ನೀಡಲು ಹೋದ ತಾಯಿಯು ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

