ಲವ್ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ನಟನೆಯ '4N6' ಈ ವಾರ ತೆರೆಗೆ
ಲವ್ ಮಾಕ್ಟೇಲ್ ಮತ್ತು ಲವ್ 360 ನಲ್ಲಿನ ಅಭಿನಯಕ್ಕಾಗಿ ಖ್ಯಾತಿ ಪಡೆದ ನಟಿ ರಚನಾ ಇಂದರ್, ದರ್ಶನ್ ಶ್ರೀನಿವಾಸ್ ಚೊಚ್ಚಲ ನಿರ್ದೇಶನದ 4N6 ಎಂಬ ಶೀರ್ಷಿಕೆಯ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಅವರು ವಿಧಿವಿಜ್ಞಾನ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಈವರೆಗಿನ ಪಾತ್ರಗಳಿಗಿಂತ ಭಿನ್ನವಾಗಿದ್ದು, ಭವಾನಿ ಪ್ರಕಾಶ್ ಜೊತೆಗೆ ತನಿಖಾಧಿಕಾರಿಯಾಗಿ ನಟಿಸಿದ್ದಾರೆ.

ಲವ್ ಮಾಕ್ಟೇಲ್ ಮತ್ತು ಲವ್ 360 ನಲ್ಲಿನ ಅಭಿನಯಕ್ಕಾಗಿ ಖ್ಯಾತಿ ಪಡೆದ ನಟಿ ರಚನಾ ಇಂದರ್, ದರ್ಶನ್ ಶ್ರೀನಿವಾಸ್ ಚೊಚ್ಚಲ ನಿರ್ದೇಶನದ '4N6' ಎಂಬ ಶೀರ್ಷಿಕೆಯ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಅವರು ವಿಧಿವಿಜ್ಞಾನ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಈವರೆಗಿನ ಪಾತ್ರಗಳಿಗಿಂತ ಭಿನ್ನವಾಗಿದ್ದು, ಭವಾನಿ ಪ್ರಕಾಶ್ ಜೊತೆಗೆ ತನಿಖಾಧಿಕಾರಿಯಾಗಿ ನಟಿಸಿದ್ದಾರೆ.
30 ದಿನಗಳ ಕಾಲ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣಗೊಂಡ 4N6 ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ರಿಷಿ ನಟನೆಯ ರಾಮನ ಅವತಾರ ಮತ್ತು ಗ್ರೇ ಗೇಮ್ಸ್ನಂತಹ ಇತರ ಚಿತ್ರಗಳೊಂದಿಗೆ ಮೇ 10 ರಂದು ರಾಜ್ಯದಾದ್ಯಂತ ಬಿಡುಗಡೆ ಕಾಣಲಿದೆ.
ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ನಲ್ಲಿ, ಸಾಕ್ಷ್ಯವನ್ನು ಉದ್ದೇಶಪೂರ್ವಕವಾಗಿ ತಿರುಚಿ ಯೋಜಿಸಲಾದ ಸರಣಿ ಕೊಲೆ ಪ್ರಕರಣಗಳನ್ನು ಬೇಧಿಸುವಲ್ಲಿ ರಚನಾ ಮತ್ತು ಭವಾನಿ ಮುಂದಾಗುತ್ತಾರೆ. ಈ ಪ್ರಕರಣವನ್ನು ಬೇಧಿಸುವ ಅವರ ಪ್ರಯತ್ನಗಳ ಸುತ್ತ ಚಿತ್ರ ಸುತ್ತುತ್ತದೆ. ಸಾವಿನ ಸಂಖ್ಯೆಯನ್ನು ಸೂಚಿಸುವ ಶೀರ್ಷಿಕೆಯು ತನಿಖೆಯ ಮೇಲೆ ಕೇಂದ್ರೀಕೃತವಾದ ನಿರೂಪಣೆಯ ಸುಳಿವು ಮತ್ತು ವಿಧಿವಿಜ್ಞಾನ ವಿಶ್ಲೇಷಣೆಯ ಸುತ್ತ ಸುತ್ತುತ್ತದೆ.
ಚಿತ್ರದಲ್ಲಿ ಆಧ್ಯ ಶೇಖರ್, ಸೌರವ್ ಪ್ರಶಾಂತ್, ನವೀನ್ ಕುಮಾರ್, ಅರ್ಜುನ್ ಮತ್ತು ಆರ್ ನಿಕ್ಸನ್ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ತೇಜ್ ಛಾಯಾಗ್ರಹಣ, ಸತ್ಯಕ ಅವರ ಸಂಭಾಷಣೆ ಮತ್ತು ಸಾಯಿ ಸೋಮೇಶ್ ಸಂಗೀತ ನಿರ್ದೇಶನವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



