ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಮೊದಲ ಹಾಡು ಬಿಡುಗಡೆ

‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಸಿನಿಮಾ ತನ್ನ ಕಥೆ ಮತ್ತು ತಾರಾಬಳಗದ ಮೂಲಕ ಈಗಾಗಲೇ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಸಂಗೀತ ಪಯಣಕ್ಕೂ ಚಾಲನೆ ಸಿಕ್ಕಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಮೊದಲ ಹಾಡು ಬಿಡುಗಡೆ
ಚಿತ್ರದ ಪೋಸ್ಟರ್
Published On :

‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಸಿನಿಮಾ ತನ್ನ ಕಥೆ ಮತ್ತು ತಾರಾಬಳಗದ ಮೂಲಕ ಈಗಾಗಲೇ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಸಂಗೀತ ಪಯಣಕ್ಕೂ ಚಾಲನೆ ಸಿಕ್ಕಿದೆ. ‘ರುಬರು’ ಎಂಬ ಹೆಸರಿನ ಈ ಹಾಡು, ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಗೌರವ್ ಧಿಂಗ್ರಾ ಮತ್ತು ಅಕೈಶಾ ವಾಟ್ಸ್ ಅವರ ನಡುವಿನ ಸುಂದರ ಪ್ರೇಮಕಥೆಯನ್ನು ಪರಿಚಯಿಸುತ್ತದೆ. ಹಿಮದಿಂದ ಆವೃತವಾಗಿರುವ ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಿರುವ ಹಾಡು, ಪ್ರೀತಿಯಲ್ಲಿ ಬೀಳುವ ಕ್ಷಣಗಳಲ್ಲಿರುವ ಮುಗ್ಧತೆ, ಬೆಚ್ಚಗಿನ ಭಾವನೆ ಮತ್ತು ಆ ಮ್ಯಾಜಿಕ್‌ ಅನ್ನು ಮನಸಿಗೆ ತಟ್ಟುವಂತೆ ಕಟ್ಟಿಕೊಡುತ್ತದೆ.

ಚಿತ್ರದ ಪ್ರೀತಿ ಮತ್ತು ಸಂಬಂಧಗಳ ಕಥೆಗೆ ‘ರುಬರು’ ಹಾಡು ಚೆನ್ನಾಗಿ ಹೊಂದಿಕೆಯಾಗಿದ್ದು, ಸಿನಿಮಾದ ಭಾವನಾತ್ಮಕ ಜಗತ್ತಿನ ಒಂದು ಸುಂದರ ಝಲಕ್ ಅನ್ನು ಪ್ರೇಕ್ಷಕರಿಗೆ ನೀಡುತ್ತದೆ. ಜೆ. ಅನೂಪ್ ಸೀಲಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಖ್ಯಾತ ಗೀತರಚನೆಕಾರ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಎಂ.ಡಿ. ಇರ್ಫಾನ್ ಮತ್ತು ಶಿವಾನಿ ಶರ್ಮಾ ಹಾಡಿಗೆ ಧ್ವನಿ ನೀಡಿದ್ದಾರೆ.

ಮನಮುಟ್ಟುವ ಸಾಹಿತ್ಯ ಮತ್ತು ಮಧುರವಾದ ಸಂಗೀತದೊಂದಿಗೆ ಮೂಡಿಬಂದಿರುವ ‘ರುಬರು’, ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಸಂಗೀತ ಲೋಕಕ್ಕೆ ಸುಂದರವಾದ ಆರಂಭ ನೀಡಿದೆ. ಹಾಡಿನ ಬಿಡುಗಡೆ ಕುರಿತು ಚಿತ್ರದ ನಿರ್ಮಾಪಕ ಸ್ಯಾಮಿ ನಾನ್ವಾನಿ ಮಾತನಾಡಿ, ‘ರುಬರು’ ಹಾಡಿನ ಬಿಡುಗಡೆಯೊಂದಿಗೆ ನಮ್ಮ ಹೊಸ ಮ್ಯೂಸಿಕ್ ಲೇಬಲ್ ‘ಸ್ಯಾಮೀಸ್ ಮ್ಯೂಸಿಕ್’ ಕೂಡ ಆರಂಭವಾಗುತ್ತಿದೆ. ಸಂಗೀತ, ಭಾವನೆ ಮತ್ತು ಸದಾ ನೆನಪಿನಲ್ಲಿ ಉಳಿಯುವ ಕಥೆಗಳನ್ನು ಸಂಭ್ರಮಿಸುವಂತಹ ಸಂಗೀತವನ್ನು ಪ್ರೇಕ್ಷಕರಿಗೆ ನೀಡುವುದು ನಮ್ಮ ಉದ್ದೇಶ, ಎಂದಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಪ್ರೀತಿ, ಗುರುತು, ಸಂಬಂಧಗಳು, ನಮ್ಮ ಬೇರುಗಳು ಮತ್ತು ‘ಮನೆ’ ಎಂದರೆ ಏನು ಎಂಬುದರ ಸುತ್ತ ಸಾಗುವ ಕಥೆಯಾಗಿದೆ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ಜಯಾ ಪ್ರದಾ, ಛಾಯಾ ಕದಮ್, ರಾಹುಲ್ ದೇವ್, ವಿಕ್ರಮ್ ಕೊಚ್ಚರ್, ಜರೀನಾ ವಾಹಬ್, ಅಮಿತ್ ಬೆಹ್ಲ್, ಇಂದಿರಾ ತಿವಾರಿ, ಉಪಾಸನಾ ಸಿಂಗ್, ಎಹ್ಸಾನ್ ಖಾನ್, ಪೂಜಾ ಕಟ್ಯಾಲ್, ಅಜಿತ್ ಶಿಧಾಯೆ, ಅಂಕಿತ್ ಅರೋರಾ, ರಾಜ್‌ವೀರ್ ಸಿಂಗ್, ನಾನಕ್ ಸಿಂಗ್, ಕಾರ್ತಿಕೇಯ ಮಾಳವೀಯ, ಫಾತಿಮಾ ಆಯೆಷಾ ಖಾನ್ ಮತ್ತು ಗರಿಮಾ ಅಗರ್ವಾಲ್ ನಟಿಸಿದ್ದಾರೆ.

ಇದೇ ಸಿನಿಮಾದ ಮೂಲಕ ಗೌರವ್ ಧಿಂಗ್ರಾ ಮತ್ತು ಅಕೈಶಾ ವಾಟ್ಸ್ ನಾಯಕ-ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಈ ವರ್ಷ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಥಿಯೇಟ್ರಿಕಲ್ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.