Rachana Inder

Watch | ಶೂಟಿಂಗ್ ಸೆಟ್ ನಲ್ಲಿ ಅಹಂಕಾರ ಬದಿಗಿರಿಸಬೇಕು, ಇಲ್ಲದಿದ್ದರೇ ದೃಶ್ಯದ ಜೀವಂತಿಕೆಯೇ ಸತ್ತುಹೋಗುತ್ತದೆ...

ನಾನು ಮತ್ತು ಗುಂಡ 2 ಚಿತ್ರದ ಟ್ರೈಲರ್

ನಿರಂಜನ್ ಸುಧೀಂದ್ರ, ರಚನಾ ಇಂದರ್ ನಟನೆಯ 'ಸ್ಪಾರ್ಕ್' ಅದ್ಧೂರಿ ಮುಹೂರ್ತ!
ಚೇತನ್ ಕುಮಾರ್ ಮತ್ತು ಆರ್ ಚಂದ್ರು ಅವರ ಅಡಿಯಲ್ಲಿ ಪಳಗಿರುವ ಮತ್ತು ಜೇಮ್ಸ್, ಭರಾಟೆ ಮತ್ತು ಕನಕ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಡಿ ಮಹಾಂತೇಶ ಹಂದ್ರಾಳ್ ಇದೀಗ 'ಸ್ಪಾರ್ಕ್' ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

'ತೀರ್ಥರೂಪ ತಂದೆಯವರಿಗೆ' ಚಿತ್ರದಲ್ಲಿ 'ಲವ್ 360' ಖ್ಯಾತಿಯ ನಟಿ ರಚನಾ ಇಂದರ್ ನಟನೆ
ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು 2023ರಲ್ಲಿ ತೆರೆಕಂಡ 'ಹೊಂದಿಸಿ ಬರೆಯಿರಿ' ಚಿತ್ರದ ಹಿಂದಿನ ನಿರ್ಮಾಣ ಸಂಸ್ಥೆಯಾದ ಸಂಡೇ ಸಿನಿಮಾಸ್ ಪ್ರಸ್ತುತಪಡಿಸುತ್ತಿದೆ.

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ 'ಫೈರ್ ಫ್ಲೈ' ಸಿನಿಮಾದಲ್ಲಿ ವಂಶಿಗೆ ರಚನಾ ಇಂದರ್ ಜೋಡಿ!
ವಂಶಿ ತುಂಬಾ ಹಾರ್ಡ್ ವರ್ಕ್ ಮಾಡಿದ್ದಾರೆ. ದೀಪಾವಳಿಗೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ ಎಂದಿದ್ದಾರೆ. ಫೈರ್ ಫ್ಲೈ ಸಿನಿಮಾವನ್ನು ಯುವ ನಟ ವಂಶಿ ಡೈರೆಕ್ಟ್ ಮಾಡುತ್ತಿದ್ದಾರೆ.

ಲವ್ ಮಾಕ್‌ಟೇಲ್ ಖ್ಯಾತಿಯ ರಚನಾ ಇಂದರ್ ನಟನೆಯ '4N6' ಈ ವಾರ ತೆರೆಗೆ
ಲವ್ ಮಾಕ್‌ಟೇಲ್ ಮತ್ತು ಲವ್ 360 ನಲ್ಲಿನ ಅಭಿನಯಕ್ಕಾಗಿ ಖ್ಯಾತಿ ಪಡೆದ ನಟಿ ರಚನಾ ಇಂದರ್, ದರ್ಶನ್ ಶ್ರೀನಿವಾಸ್ ಚೊಚ್ಚಲ ನಿರ್ದೇಶನದ 4N6 ಎಂಬ ಶೀರ್ಷಿಕೆಯ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಅವರು ವಿಧಿವಿಜ್ಞಾನ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಈವರೆಗಿನ ಪಾತ್ರಗಳಿಗಿಂತ ಭಿನ್ನವಾಗಿದ್ದು, ಭವಾನಿ ಪ್ರಕಾಶ್ ಜೊತೆಗೆ ತನಿಖಾಧಿಕಾರಿಯಾಗಿ ನಟಿಸಿದ್ದಾರೆ.

'ನಾನು ಮತ್ತು ಗುಂಡ' ಸೀಕ್ವೆಲ್‌ನ ಲೀಡ್ ರೋಲ್‌ನಲ್ಲಿ ಮಿಂಚಲಿದ್ದಾರೆ ನಟಿ ರಚನಾ ಇಂದರ್!
ನಿರ್ದೇಶಕ ರಘು ಹಾಸನ್ ಸದ್ಯ 'ನಾನು ಮತ್ತು ಗುಂಡ ಚಿತ್ರದ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರದಲ್ಲಿ ಶ್ವಾನವೇ ಕೇಂದ್ರಬಿಂದುವಾಗಿದೆ. ಜೊತೆಗೆ ಆಸಕ್ತಿದಾಯಕ ಪಾತ್ರವರ್ಗವಿದೆ. ರಚನಾ ಇಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

ಯಾವ ನಿರೀಕ್ಷೆಗಳೂ ಇಲ್ಲದೆ ನಾನು ಸಿನಿಮಾ ರಂಗ ಪ್ರವೇಶಿಸಿದ್ದೇನೆ: ನಟಿ ರಚನಾ ಇಂದರ್
ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚನಾ ಇಂದರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಮೇಘಾ ಶೆಟ್ಟಿ ಕೂಡ ಇದ್ದಾರೆ.

ಮೂವರು ನಾಯಕಿಯರೊಂದಿಗೆ ಗೋಲ್ಡನ್ ಸ್ಟಾರ್ 'ತ್ರಿಬಲ್ ರೈಡಿಂಗ್'; ಯಟ್ಟಾ ಯಟ್ಟಾ ಹಾಡಿಗೆ ಭರ್ಜರಿ ರೆಸ್ಪಾನ್ಸ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಮಂಗ್ಲಿ ಹಾಡಿರುವ ಸಾಯಿ ಕಾರ್ತಿಕ್ ಸಂಯೋಜನೆಯ ಯಟ್ಟಾ ಯಟ್ಟಾ ಯಟ್ಟಾ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

