ಸಿನಿಮಾ ಸುದ್ದಿ

'ನಾನು ಮತ್ತು ಗುಂಡ' ಸೀಕ್ವೆಲ್‌ನ ಲೀಡ್ ರೋಲ್‌ನಲ್ಲಿ ಮಿಂಚಲಿದ್ದಾರೆ ನಟಿ ರಚನಾ ಇಂದರ್!

ನಿರ್ದೇಶಕ ರಘು ಹಾಸನ್ ಸದ್ಯ 'ನಾನು ಮತ್ತು ಗುಂಡ ಚಿತ್ರದ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರದಲ್ಲಿ ಶ್ವಾನವೇ ಕೇಂದ್ರಬಿಂದುವಾಗಿದೆ. ಜೊತೆಗೆ ಆಸಕ್ತಿದಾಯಕ ಪಾತ್ರವರ್ಗವಿದೆ. ರಚನಾ ಇಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

'ನಾನು ಮತ್ತು ಗುಂಡ' ಸೀಕ್ವೆಲ್‌ನ ಲೀಡ್ ರೋಲ್‌ನಲ್ಲಿ ಮಿಂಚಲಿದ್ದಾರೆ ನಟಿ ರಚನಾ ಇಂದರ್!
ನಟಿ ರಚನಾ ಇಂದರ್
Published On :

'ಲವ್ ಮಾಕ್‌ಟೇಲ್‌' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ರಚನಾ ಇಂದರ್, ನಂತರ ರಿಷಬ್ ಶೆಟ್ಟಿಯವರ ಹರಿಕಥೆ ಅಲ್ಲ ಗಿರಿಕಥೆ, ಶಶಾಂಕ್ ನಿರ್ದೇಶನದ ಲವ್ 360 ಮತ್ತು ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಹೊಸ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಲು ರೆಡಿಯಾಗಿದ್ದಾರೆ.  

ನಿರ್ದೇಶಕ ರಘು ಹಾಸನ್ ಸದ್ಯ 'ನಾನು ಮತ್ತು ಗುಂಡ' ಚಿತ್ರದ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರದಲ್ಲಿ ಶ್ವಾನವೇ ಕೇಂದ್ರಬಿಂದುವಾಗಿದೆ. ಜೊತೆಗೆ ಆಸಕ್ತಿದಾಯಕ ಪಾತ್ರವರ್ಗವಿದೆ. ನಿರ್ದೇಶಕರು ಪಾತ್ರದ ಹೆಚ್ಚಿನ ವಿವರಗಳನ್ನು ನೀಡಿಲ್ಲದಿದ್ದರೂ, ರಚನಾ ಇಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

ಈ ಚಿತ್ರವು ತನ್ನ ಮಾಲೀಕನನ್ನು ಕಳೆದುಕೊಂಡ ನಂತರ ವಿವಿಧೆಡೆ ಸಂಚರಿಸುವ ನಾಯಿಯ ಕಥೆಯನ್ನು ಹೇಳುತ್ತದೆ ಮತ್ತು ರಚನಾ ಈ ಪ್ರಯಾಣದಲ್ಲಿ ನಾಯಿಯನ್ನು ಸೇರಿಕೊಳ್ಳುತ್ತಾರೆ ಎನ್ನಲಾಗಿದೆ. ನಾನು ಮತ್ತು ಗುಂಡ 2 ಸಿನಿಮಾ ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಗೆ ಯೋಜನೆ ರೂಪಿಸಲಾಗಿದ್ದು, ಈ ಮೂಲಕ ರಚನಾ ಅವರ ಮೊದಲ ಬಹುಭಾಷಾ ಸಿನಿಮಾ ಇದಾಗಿದೆ. 

Story image

ಪೊಯೆಮ್ ಪಿಕ್ಚರ್ಸ್ ನಿರ್ಮಿಸಿರುವ ಸೀಕ್ವೆಲ್‌ನಲ್ಲಿ ಆರ್‌ಪಿ ಪಟ್ನಾಯಕ್ ಅವರ ಹಾಡುಗಳು ಮತ್ತು ರಿತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದೆ. ಚಿತ್ರದ ಸಂಭಾಷಣೆಯನ್ನು ರೋಹಿತ್, ರಾಮನ್ ಬರೆದಿದ್ದು, ತನ್ವಿಕ್ ಜಿ, ವಿ ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಸಾಹಿತ್ಯವನ್ನು ಬರೆಯಲಿದ್ದಾರೆ.

ಚಿತ್ರತಂಡ ಸೇರಿಕೊಂಡಿರುವ ರಚನಾ ಇಂದರ್ ಈಗಾಗಲೇ ಒಂದೆರಡು ದಿನಗಳ ಶೂಟಿಂಗ್ ಮುಗಿಸಿದ್ದಾರೆ. ನಾಯಕನನೊಂದಿಗೆ ಚಿತ್ರದಲ್ಲಿನ ಇತರ ಪ್ರಮುಖ ಪಾತ್ರಗಳ ಅಧಿಕೃತ ಪ್ರಕಟಣೆಯನ್ನು ಚಿತ್ರತಂಡ ಶೀಘ್ರದಲ್ಲೇ ಮಾಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.