ಸಿನಿಮಾ ಸುದ್ದಿ'ನಾನು ಮತ್ತು ಗುಂಡ' ಸೀಕ್ವೆಲ್ನ ಲೀಡ್ ರೋಲ್ನಲ್ಲಿ ಮಿಂಚಲಿದ್ದಾರೆ ನಟಿ ರಚನಾ ಇಂದರ್!
ನಿರ್ದೇಶಕ ರಘು ಹಾಸನ್ ಸದ್ಯ 'ನಾನು ಮತ್ತು ಗುಂಡ ಚಿತ್ರದ ಸೀಕ್ವೆಲ್ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರದಲ್ಲಿ ಶ್ವಾನವೇ ಕೇಂದ್ರಬಿಂದುವಾಗಿದೆ. ಜೊತೆಗೆ ಆಸಕ್ತಿದಾಯಕ ಪಾತ್ರವರ್ಗವಿದೆ. ರಚನಾ ಇಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.