ಸಿನಿಮಾ ಸುದ್ದಿಲವ್ ಮಾಕ್ಟೇಲ್ ಖ್ಯಾತಿಯ ರಚನಾ ಇಂದರ್ ನಟನೆಯ '4N6' ಈ ವಾರ ತೆರೆಗೆ
ಲವ್ ಮಾಕ್ಟೇಲ್ ಮತ್ತು ಲವ್ 360 ನಲ್ಲಿನ ಅಭಿನಯಕ್ಕಾಗಿ ಖ್ಯಾತಿ ಪಡೆದ ನಟಿ ರಚನಾ ಇಂದರ್, ದರ್ಶನ್ ಶ್ರೀನಿವಾಸ್ ಚೊಚ್ಚಲ ನಿರ್ದೇಶನದ 4N6 ಎಂಬ ಶೀರ್ಷಿಕೆಯ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಅವರು ವಿಧಿವಿಜ್ಞಾನ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಈವರೆಗಿನ ಪಾತ್ರಗಳಿಗಿಂತ ಭಿನ್ನವಾಗಿದ್ದು, ಭವಾನಿ ಪ್ರಕಾಶ್ ಜೊತೆಗೆ ತನಿಖಾಧಿಕಾರಿಯಾಗಿ ನಟಿಸಿದ್ದಾರೆ.