ಪೃಥ್ವಿ ಅಂಬರ್- ಅಯನ ನಟನೆಯ 'ದೂರದರ್ಶನ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್
ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಚಿತ್ರತಂಡ ಭಾನುವಾರ ಹೊರಡಿಸಿದೆ.
ಇದೇ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವ ನಿರ್ದೇಶಕ ಸುಕೇಶ್ ಶೆಟ್ಟಿ ಅವರೇ ಸ್ವತಃ ಕಥೆಯನ್ನು ಬರೆದಿದ್ದಾರೆ. ಅವರು ಈ ಹಿಂದೆ ತುಳು ಚಲನಚಿತ್ರಗಳಲ್ಲಿ ಮತ್ತು ಕನ್ನಡ ಚಲನಚಿತ್ರ ಟ್ರಂಕ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. 1980ರ ದಶಕದಲ್ಲಿ ದೂರದರ್ಶನ ಮಾಡಿದ್ದ ಮೋಡಿಯ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರವು, 'ಒಂದು ಹಳ್ಳಿಯಲ್ಲಿ ಟಿವಿ ಬಂದ ನಂತರ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಮತ್ತು ಇದು ಹಾಸ್ಯ ಆಧಾರಿತ ನಾಟಕವಾಗಿದೆ'.
ಚಿತ್ರದಲ್ಲಿ ಅಯನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಉಗ್ರಂ ಮಂಜು, ವೀಣಾ ಸುಂದರ್, ಹರಿಣಿ ಶ್ರೀಕಾಂತ್, ಹುಲಿ ಕಾರ್ತಿಕ್, ಸೂರಜ್, ಸೂರ್ಯ ಕುಂದಾಪುರ ಮತ್ತು ದೀಪಕ್ ರೈ ಪಣಾಜೆ ನಟಿಸಿದ್ದಾರೆ. ರಾಜೇಶ್ ಭಟ್ ಅವರ ವಿಎಸ್ ಮೀಡಿಯಾ ಎಂಟರ್‌ಪ್ರೈಸಸ್ ನಿರ್ಮಿಸಿರುವ ದೂರದರ್ಶನ ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ, ಪ್ರದೀಪ್ ರಾವ್ ಸಂಕಲನವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


