ಫೋನ್ ನಿಮ್ಮ ಗೆಳೆಯನೂ ಹೌದು, ಶತ್ರುವೂ ಹೌದು, '100' ಸಿನಿಮಾದಲ್ಲಿ ಆ ಬಗ್ಗೆ ಸಾಮಾಜಿಕ ಸಂದೇಶವಿದೆ: ರಚಿತಾ ರಾಮ್
ನಟ ರಮೇಶ್ ನಿರ್ದೇಶನದ ರಾಮ ಶಾಮ ಭಾಮ, ವೆಂಕಟ ಇನ್ ಸಂಕಟ, ಆಕ್ಸಿಡೆಂಟ್, ಉತ್ತಮ ವಿಲನ್ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿರುವ ರಚಿತಾ ರಾಮ್ ರಮೇಶ್ ಅವರನ್ನು ಇಂಟೆಲಿಜೆಂಟ್ ಫಿಲಂ ಮೇಕರ್ ಎಂದು ಶ್ಲಾಘಿಸಿದ್ದಾರೆ.

ಬೆಂಗಳೂರು: ನಟ ರಮೇಶ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಬೇಕು ಎನ್ನುವ ರಚಿತಾ ರಾಮ್ ಆಸೆ, ಸೈಬರ್ ಕ್ರೈಮ್ ಥ್ರಿಲ್ಲರ್ ಸಿನಿಮಾ 100 ಮೂಲಕ ನೆರವೇರಿದೆ.
100 ಸಿನಿಮಾ ನವೆಂಬರ್ 19ರಂದು ಬಿಡುಗಡೆಯಾಗುತ್ತಿದೆ. ರಮೇಶ್ ಅರವಿಂದ್ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿರುವುದರ ಜೊತೆಗೆ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ರಚಿತಾ ರಾಮ್ ಅವರು ಈ ಹಿಂದೆ ರಮೇಶ್ ಅರವಿಂದ್ ಅವರ ಜೊತೆ ಪುಷ್ಪಕ ವಿಮಾನ ಸಿನಿಮಾದಲ್ಲಿ ನಟಿಸಿದ್ದರು. ರಮೇಶ್ ನಿರ್ದೇಶನದ ರಾಮ ಶಾಮ ಭಾಮ, ವೆಂಕಟ ಇನ್ ಸಂಕಟ, ಆಕ್ಸಿಡೆಂಟ್, ಉತ್ತಮ ವಿಲನ್ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿರುವ ರಚಿತಾ ರಾಮ್ ರಮೇಶ್ ಅವರನ್ನು ಇಂಟೆಲಿಜೆಂಟ್ ಫಿಲಂ ಮೇಕರ್ ಎಂದು ಶ್ಲಾಘಿಸಿದ್ದಾರೆ.
ಕೊರೊನಾ ಪೂರ್ವಕಾಲದ ಕಥೆಯನ್ನು ಹೊಂದಿದ್ದರೂ ಇಂದಿಗೂ 100 ಸಿನಿಮಾದ ಕಥಾವಸ್ತು ಪ್ರಸ್ತುತತೆ ಪಡೆದುಕೊಳ್ಳುತ್ತದೆ ಎನ್ನುವುದು ರಚಿತಾ ಅವರ ಅಭಿಪ್ರಾಯ. ಇಂದಿನ ದಿನದಲ್ಲಿ ಅತಿ ದುರುಪಯೋಗಕ್ಕೆ ಒಳಗಾಗುತ್ತಿರುವ ವಸ್ತು ಎಂದರೆ ಫೋನ್.
ಇದನ್ನೂ ಓದಿ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು
ಒಂದಿನವೂ ನಾವು ಅದನ್ನು ಬಿಟ್ಟಿರುವುದಿಲ್ಲ. ಅದರಿಂದಾಗಿ ನಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗಿವೆ ನಿಜ. ಆದರೆ ಅದೇ ಸಮಯದಲ್ಲಿ ಅದರಿಂದಾಗಿ ನಮ್ಮ ಜೀವನದ ಮುಖ್ಯ ಸಂಗತಿಗಳನ್ನು ಕಡೆಗಣಿಸುತ್ತಿದ್ದೇವೆ ಎನ್ನುತ್ತಾರೆ ರಚಿತಾ ರಾಮ್. ಅವರು ಸಿನಿಮಾದಲ್ಲಿ ರಮೇಶ್ ತಂಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಜನರು ನಟನೆ ಕನಸನ್ನು ನನಸಾಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ. ರಿಯಾಲಿಟಿ ಶೋ ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಒಳ್ಳೆಯ ಲಕ್ಷಣ. ಇನ್ನೊಂದೆಡೆ ಹಲವು ವಿಷಯಗಳ ಕುರಿತಾಗಿ ಕಮೆಂಟ್ ಮಾಡಿ ವಿವಾದಗಳೂ ಸೃಷ್ಟಿಗೂ ಸಾಮಾಜಿಕ ಜಾಲತಾಣಗಳು ಕಾರಣವಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
Related Article
'ವೆಡ್ಡಿಂಗ್ ಗಿಫ್ಟ್' ಕೊಡಲು ಬರ್ತಿದ್ದಾರೆ ನಿಶಾನ್ ನಾಣಯ್ಯ-ಸೋನುಗೌಡ
ಪುನೀತ್ ನಮನ: ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ
ಬರೆದ ಹಣೆಬರಹ ತಿದ್ದಲಿಲ್ಲ ಬ್ರಹ್ಮ; ಪುನೀತ್ ಸರ್ ಇಂದಿಗೂ ನಮ್ಮ ಜೊತೆಯಲ್ಲೇ ಇದ್ದಾರೆ: ನಟ ದರ್ಶನ್
ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣಿಗೂ ಸಾಂಗ್: ಎಲ್ಲೆಲ್ಲೂ ಹಾಡಿನ ಗುನುಗುನು!
ಕೊನೆಗೂ ಕ್ಷಮೆಯಾಚಿಸಿದ ಹಂಸಲೇಖ: ಪೇಜಾವರ ಶ್ರೀಗಳ ಬಗ್ಗೆ 'ನಾದಬ್ರಹ್ಮ' ಹೇಳಿದ್ದಾದರೂ ಏನು?
ಸುಚಿತ್ರ ಫಿಲ್ಮ್ ಸೊಸೈಟಿ ಭವಿಷ್ಯ ಅತಂತ್ರ: ಸದಸ್ಯರ ಆತಂಕ
ಮಕ್ಕಳ ದಿನಾಚರಣೆ: ಅಪ್ಪು ಬಾಲ್ಯ ಸ್ಮರಿಸಿದ ನಟ ರಾಘವೇಂದ್ರ ರಾಜ್‌ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


