ರಮೇಶ್ ಅರವಿಂದ್ ಓರ್ವ ಪರ್ಫೆಕ್ಷನಿಸ್ಟ್ ಮತ್ತು ಪಾಸಿಟಿವ್ ವ್ಯಕ್ತಿ: '100' ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ
ರಮೇಶ್ ಅರವಿಂದ್ ಅವರು ಓರ್ವ ಪರ್ಫೆಕ್ಷನಿಸ್ಟ್, ಸಿನಿಮಾ ಸೆಟ್ ಗೆ ಪಾಸಿಟಿವ್ ಕಳೆ ತಂದುಕೊಡುತ್ತಾರೆ ಎಂದು ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ ರಮೇಶ್ ರನ್ನು ಶ್ಲಾಘಿಸಿದ್ದಾರೆ. ಈ ಹಿಂದೆ ಅವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಯು ಟರ್ನ್ ಗೂ ಕೆಲಸ ಮಾಡಿದ್ದರು.

ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ಸೈಬರ್ ಕ್ರೈಮ್ ಥ್ರಿಲ್ಲರ್ 100 ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ. ಇದೇ ಸಿನಿಮಾದ ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ ಈ ಹಿಂದೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಯು ಟರ್ನ್ ಗೂ ಕೆಲಸ ಮಾಡಿದ್ದರು.
ರಮೇಶ್ ಅರವಿಂದ್ ಜೊತೆ ಸತ್ಯ ಹೆಗ್ಡೆ ಕಾರ್ಯ ನಿರ್ವಹಿಸಿರುವ ಎರಡು ಕನ್ನಡ ಸಿನಿಮಾ ಬಟರ್ ಫ್ಲೈ ಮತ್ತು ಪ್ಯಾರಿಸ್ ಪ್ಯಾರಿಸ್ ಬಿಡುಗಡೆಗೆ ಸಿದ್ಧವಾಗಿದೆ.
ರಮೇಶ್ ಅರವಿಂದ್ ಓರ್ವ ನಟ ಮತ್ತು ನಿರ್ದೇಶಕ ಅವರ ಜೊತೆ ಕೆಲಸ ಮಾಡುವುದು ಒಳ್ಳೆ ಅನುಭವ ನೀಡುತ್ತದೆ. ಇಷ್ಟು ಸಮಯದ ಬಾಂಧವ್ಯದಿಂದ ಪ್ರತಿ ಸೀನ್ ಶೂಟಿಂಗ್ ವೇಳೆ ಅವರಿಗೆ ಏನು ಬೇಕು ಎನ್ನುವುದನ್ನು ತಿಳಿದುಕೊಳ್ಳುವಷ್ಟು ನೈಪುಣ್ಯ ತಮಗೀಗ ಬಂದಿದೆ ಎನ್ನುತ್ತಾರೆ ಸತ್ಯ ಹೆಗ್ಡೆ.
ರಮೇಶ್, ಪ್ರಕಾಶ್ ಬೆಳವಾಡಿ, ರಚಿತಾ ರಾಮ್, ಪೂರ್ಣ ಅವರಂಥ ಕಲಾವಿದರು ಕ್ಯಾಮೆರಾ ಮುಂದಿದ್ದಾಗ ಸಿನಿಮೆಟೊಗ್ರಾಫರ್ ಗೆ ಅವರ ಅಭಿನಯವನ್ನು ಸೆರೆಹಿಡಿಯುವುದು ದೊಡ್ಡ ಸವಾಲು.
ಯಾವುದಕ್ಕೆ ಫೋಕಸ್ ನೀಡಬೇಕು ಎನ್ನುವ ಸಂದಿಗ್ಧತೆ ಎದುರಾಗುತ್ತದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎನ್ನುವ ವಿಶ್ವಾಸವನ್ನು ಅವರು ತೋರ್ಪಡಿಸಿದ್ದಾರೆ. ರಮೇಶ್ ಅರವಿಂದ್ ಅವರು ಓರ್ವ ಪರ್ಫೆಕ್ಷನಿಸ್ಟ್, ಸಿನಿಮಾ ಸೆಟ್ ಗೆ ಪಾಸಿಟಿವ್ ಕಳೆ ತಂದುಕೊಡುತ್ತಾರೆ ಎಂದು ಅವರು ರಮೇಶ್ ರನ್ನು ಶ್ಲಾಘಿಸಿದ್ದಾರೆ.
Related Article
ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣೆಗೂ ಸಾಂಗ್: ಎಲ್ಲೆಲ್ಲೂ ಹಾಡಿನ ಗುನುಗುನು!
ಮುಸ್ಲಿಮರನ್ನು ಮನೆಗೆ ಕರೆಸಿ ಹಂದಿ ಮಾಂಸ ಮಾಡಿ ಬಡಿಸಿ ನೋಡೋಣ: ಹಂಸಲೇಖ ವಿರುದ್ಧ ಪ್ರತಾಪ್ ಸಿಂಹ ಕಿಡಿ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು
ಸುಚಿತ್ರ ಫಿಲ್ಮ್ ಸೊಸೈಟಿ ಭವಿಷ್ಯ ಅತಂತ್ರ: ಸದಸ್ಯರ ಆತಂಕ
ಐಎಂಡಿಬಿ ಪಟ್ಟಿಯಲ್ಲಿ 'ಶಾವ್ಶಾಂಕ್ ರಿಡೆಂಪ್ಶನ್' ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ 'ಜೈಭೀಮ್'
ಪ್ರೇಮಂ ಪೂಜ್ಯಂ ಚಿತ್ರಕಥೆ ಕೇಳಿ ಮೆಚ್ಚಿಕೊಂಡಿದ್ದ ರೆಬೆಲ್ ಸ್ಟಾರ್ ಅಂಬರೀಷ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


