ಸಿನಿಮಾ ಸುದ್ದಿ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು

ಮುಗಿಲ್ ಪೇಟೆ ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ತಮಗೆ ಕೆಲ ಹಾಡುಗಳು, ರೊಮ್ಯಾಂಟಿಕ್ ಸನ್ನಿವೇಶಗಳು ಇರಬಹುದು ಎಂದುಕೊಂಡಿದ್ದರಂತೆ. ಆದರೆ ಸಿನಿಮಾ ಸೆಟ್ ಗೆ ಮೊದಲ ಬಾರಿ ಕಾಲಿಟ್ಟ ತಕ್ಷಣವೇ ತಾವು ಅಂದುಕೊಂಡಿದ್ದು ಸುಳ್ಳೆಂದು ಅರಿವಾಯಿತೆಂದು ಅವರು ಅನುಭವ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು
ಸಿನಿಮಾ ಸ್ಟಿಲ್
Published On :

ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಅವರ ಮುಗಿಲ್ ಪೇಟೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಮುಂಬೈ ಮೂಲದ ನಟಿ ಕಯಾದು ಲೋಹರ್ ತಾವು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಇಚ್ಛಿಸುವುದಾಗಿ ಹೇಳಿದ್ದಾರೆ. 

ತಾವು ಹೀಗೆ ಬಂಡು ಒಂದೆರಡು ಚಿತ್ರಗಳಲ್ಲಿ ನಟಿಸಿಹೋಗಲು ಬರುತ್ತಿಲ್ಲ. ಬದಲಾಗಿ ತಮಗೆ ದಕ್ಷಿಣ ಭಾರತೀಯ ಚಿತ್ರರಂಗದ ಕುರಿತು ಒಲವು ಇರುವುದಾಗಿಯೂ ಅದರಿಂದಾಗಿ ತಾವು ಇಲ್ಲೆ ನೆಲೆ ಕಂಡುಕೊಳ್ಳಲು ಇಚ್ಛಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ತಮ್ಮನ್ನು ಕನ್ನಡಿಗರು ನೋಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಕಯಾದು ಅವರು ಮೂಲತಃ ಮಾಡೆಲ್ ಆಗಿದ್ದು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೋರಂಜನ್ ಅವರ ಮುಗಿಲ್ ಪೇಟೆ ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ತಮಗೆ ಕೆಲ ಹಾಡುಗಳು, ರೊಮ್ಯಾಂಟಿಕ್ ಸನ್ನಿವೇಶಗಳು ಇರಬಹುದು ಎಂದುಕೊಂಡಿದ್ದರಂತೆ. ಆದರೆ ಸಿನಿಮಾ ಸೆಟ್ ಗೆ ಮೊದಲ ಬಾರಿ ಕಾಲಿಟ್ಟ ತಕ್ಷಣವೇ ತಾವು ಅಂದುಕೊಂಡಿದ್ದು ಸುಳ್ಳೆಂದು ಅರಿವಾಯಿತೆಂದು ಅವರು ಅನುಭವ ಹಂಚಿಕೊಂಡಿದ್ದಾರೆ.

ಮನೋರಂಜನ್ ಅವರಲ್ಲಿ ತಾವು ರವಿಚಂದ್ರನ್ ಅಂಶವನ್ನು ಕಂಡಿದ್ದಾಗಿ ಅವರು ಹೇಳಿದ್ದಾರೆ. ಕ್ಯಾಮೆರಾ ಮುಂದೆ ನಟಿಸುವಾಗ ಮನೋರಂಜನ್ ಅವರು ನೀಡಿದ ಪ್ರತಿ ಸಲಹೆ ಕೂಡಾ ನೆರವಾಯಿತು ಎನ್ನುತ್ತಾರೆ ಕಯಾದು. ಮುಂದಿನ ದಿನಗಳಲ್ಲಿ ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಭರತ್ ನಾವುಂದ ನಿರ್ದೇಶಿಸಿರುವ ಮುಗಿಲ್ ಪೇಟೆ ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ.

Related Article

ಅರಮನೆ ಮೈದಾನದಲ್ಲಿ ಇಂದು ಅಪರಾಹ್ನ 'ಪುನೀತ್ ನಮನ'ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ, ಸಿನಿಮಾ ಪ್ರದರ್ಶನ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗಳಿಗೆ ಬ್ರೇಕ್

ತೆಲುಗು ನಟಿಯ ಮೇಲೆ ಅಪರಿಚಿತನಿಂದ ಹಲ್ಲೆ: ಮೊಬೈಲ್ ಕಸಿದು ಪರಾರಿ

ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

ಐಎಂಡಿಬಿ ಪಟ್ಟಿಯಲ್ಲಿ 'ಶಾವ್ಶಾಂಕ್ ರಿಡೆಂಪ್ಶನ್' ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ 'ಜೈಭೀಮ್'

'ಏಕ್ ಲವ್ ಯಾ' ಚಿತ್ರದ ಹಾಡಿನ ಬಿಡುಗಡೆ ವೇಳೆ ಶಾಂಪೇನ್ ಸಂಭ್ರಮ: ಕ್ಷಮೆ ಕೇಳಿದ ನಿರ್ದೇಶಕ ಪ್ರೇಮ್ ಹಾಗೂ ಚಿತ್ರತಂಡ

ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.