ಸಿನಿಮಾ ಸುದ್ದಿ

ಪ್ರಿಯಾಂಕಾ ಚೋಪ್ರಾ ಪತಿಯ ಹೆಸರನ್ನು ತಮ್ಮ ಇನ್ ಸ್ಟಾಗ್ರಾಂನಿಂದ ಕೈಬಿಟ್ಟಿದ್ದಾರೆಯೇ ಹೊರತು ಬದುಕಿನಿಂದಲ್ಲ: ಆಪ್ತರ ಸ್ಪಷ್ಟನೆ

ಪ್ರಿಯಾಂಕ ಚೋಪ್ರಾ ಮತ್ತು ಪಾಪ್ ಸ್ಟಾರ್ ಪತಿ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗಾಳಿಸುದ್ದಿಗಳು ಹರಿದಾಡಿದ್ದವು.

ಪ್ರಿಯಾಂಕಾ ಚೋಪ್ರಾ ಪತಿಯ ಹೆಸರನ್ನು ತಮ್ಮ ಇನ್ ಸ್ಟಾಗ್ರಾಂನಿಂದ ಕೈಬಿಟ್ಟಿದ್ದಾರೆಯೇ ಹೊರತು ಬದುಕಿನಿಂದಲ್ಲ: ಆಪ್ತರ ಸ್ಪಷ್ಟನೆ
ಪ್ರಿಯಾಂಕ ಚೋಪ್ರಾ ಮತ್ತು ಪಾಪ್ ಸ್ಟಾರ್ ಪತಿ ನಿಕ್ ಜೋನಾಸ್
Published On :

ಹಾಲಿವುಡ್: ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಿಂದ ಪತಿ ಜೋನಾಸ್ ಹೆಸರನ್ನು ಕೈಬಿಟ್ಟಿದ್ದ ಪ್ರಿಯಾಂಕಾ ಚೋಪ್ರಾ ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಪ್ರಿಯಾಂಕ ಚೋಪ್ರಾ ಮತ್ತು ಪಾಪ್ ಸ್ಟಾರ್ ಪತಿ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗಾಳಿಸುದ್ದಿಗಳು ಹರಿದಾಡಿದ್ದವು.

ಪ್ರಿಯಾಂಕಾ ಆಪ್ತವಲಯದವರನ್ನು ಈ ಕುರಿತಾಗಿ ಪ್ರಶ್ನಿಸಿದಾಗ ಅವರು ಡೈವೊರ್ಸ್ ಶಂಕೆಗಳನ್ನು ತಳ್ಳಿಹಾಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟಿದ್ದಾರೆಯೇ ಹೊರತು ತಮ್ಮ ಬದುಕಿನಿಂದಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 

ಮುಂದೆ ಸಾಲು ಸಾಲಾಗಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು ಹಾಗೂ ಮತ್ತಿತರ ಕಾರ್ಯಕ್ರಮಗಳ ಪ್ರಚಾರ ಕಾರ್ಯಗಳಿಗೆ ಸಹಾಯವಾಗುವ ದೃಷ್ಟಿಯಿಂದ ಆವರು ಜೋನಾಸ್ ಹೆಸರನ್ನು ಕೈಬಿಟ್ಟಿರುವುದಾಗಿ ಸ್ಪಷ್ಟೀಕರನ ಪೀಸೀ ಅವರ ಆಪ್ತ ವಲಯದವರಿಂದ ಕೇಳಿಬಂದಿದೆ. 

Related Article

ಅಂತಾರಾಷ್ಟ್ರೀಯ ಎಮ್ಮೀ ಅವಾರ್ಡ್ 2021: ಮೂರೂ ವಿಭಾಗಗಳಲ್ಲಿ ಅವಾರ್ಡ್ ಮಿಸ್ ಆದರೂ ಬೀಗಿದ ಭಾರತ

1999ರ ಬ್ಲಾಕ್ ಬಸ್ಟರ್ ಸಿನಿಮಾ 'ಮ್ಯಾಟ್ರಿಕ್ಸ್' ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ

'ಹೀರೋ' ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಟ್ರೇಲರ್ ಬಿಡುಗಡೆ: ಕನ್ನಡದಲ್ಲೊಂದು ಟೆಕ್ನೊ ಥ್ರಿಲ್ಲರ್ ಸಿನಿಮಾ

ವಿಜಯ್ ಸೇತುಪತಿ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ: ಹಿಂದೂ ಸಂಘಟನೆ ಮುಖಂಡನ ವಿರುದ್ಧ ದೂರು

ನಿಖಿಲ್ ನಟನೆಯ 'ರೈಡರ್' ಡಿಸೆಂಬರ್ 24ಕ್ಕೆ ಬಿಡುಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.