ಇನ್ ಸ್ಟಾಗ್ರಾಂನಲ್ಲಿ ಪತಿ ಜೋನಾಸ್ ಹೆಸರು ಕೈಬಿಟ್ಟ ಪ್ರಿಯಾಂಕಾ ಚೋಪ್ರಾ: ದಾಂಪತ್ಯದಲ್ಲಿ ಬಿರುಕು ಶಂಕೆ!
ಇತ್ತೀಚಿಗೆ ಪತಿ ನಾಗಚೈತನ್ಯರಿಂದ ಬೇರ್ಪಟ್ಟ ಟಾಲಿವುಡ್ ನಟಿ ಸಮಂತಾ ಕೂಡಾ ವಿಷಯ ಬಹಿರಂಗವಾಗುವುದಕ್ಕೂ ಮೊದಲು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿನ ಹೆಸರಿನಿಂದ ನಾಗಚತನ್ಯ ಅವರ ಹೆಸರನ್ನು ತೆಗೆದು ಹಾಕಿದ್ದರು ಎನ್ನುವುದು ಗಮನಾರ್ಹ.

ಹಾಲಿವುಡ್: ಗ್ಲೋಬಲ್ ಐಕಾನ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಹರಡಿದೆ.
ಬಾಲಿವುಡ್ ನಲ್ಲಿ ಹೆಸರು ಮಾಡಿದ್ದ ನಟಿ ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್1 ರಂದು ವಿವಾಹವಾಗಿದ್ದರು. ಅಲ್ಲದೆ ಹಾಲಿವುಡ್ ನ ಖ್ಯಾತನಾಮರೊಂದಿಗೆ ಪ್ರಿಯಾಂಕಾ ನಟಿಸಿದ್ದಲ್ಲದೆ ಚಿತ್ರ ನಿರ್ಮಾಪಕಿಯಾಗಿಯೂ ಹೆಸರು ಮಾಡಿದ್ದರು.

ಇತ್ತೀಚಿಗಷ್ಟೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎನ್ನುವ ಸಂದೇಶ ಹಂಚಿಕೊಂಡಿದ್ದರು.
ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇಂದು ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲಕ್ಕೆಡೆಮಾಡಿದೆ. ಅಲ್ಲದೆ ಪ್ರಿಯಾಂಕ ನಡೆ ಅಭಿಮಾನಿಗಳನ್ನು ಆತಂಕಕ್ಕೆ ನೂಕಿದೆ.
ಇದನ್ನೂ ಓದಿ: 'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿ
ಇತ್ತೀಚಿಗೆ ಪತಿ ನಾಗಚೈತನ್ಯರಿಂದ ಬೇರ್ಪಟ್ಟ ಟಾಲಿವುಡ್ ನಟಿ ಸಮಂತಾ ಕೂಡಾ ವಿಷಯ ಬಹಿರಂಗವಾಗುವುದಕ್ಕೂ ಮೊದಲು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿನ ಹೆಸರಿನಿಂದ ನಾಗಚತನ್ಯ ಅವರ ಹೆಸರನ್ನು ತೆಗೆದು ಹಾಕಿದ್ದರು ಎನ್ನುವುದು ಗಮನಾರ್ಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


