'ರೇಮೋ' ಗಾಗಿ ರಾಕ್ ಸ್ಟಾರ್ ಆಗಿ ಬದಲಾದ ಇಶಾನ್
ನಿರ್ದೇಶಕ ಪವನ್ ಒಡೆಯರ್ "ರೇಮೋ" ಚಿತ್ರದ ಕಡೇ ಹಂತರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಶುಕ್ರವಾರ ಚಿತ್ರದಲ್ಲಿ ಇಶಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ನಿರ್ದೇಶಕ ಪವನ್ ಒಡೆಯರ್ "ರೇಮೋ" ಚಿತ್ರದ ಕಡೇ ಹಂತರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಶುಕ್ರವಾರ ಚಿತ್ರದಲ್ಲಿ ಇಶಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಟನ ಪಾಲಿಗಿದು ಎರಡನೇ ಚಿತ್ರವಾಗಿದ್ದು ಈ ಚಿತ್ರದಲ್ಲಿ ಇಶಾನ್ ರಾಕ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ. ಗಾಯಕ ಮತ್ತು ಗಿಟಾರ್ ವಾದಕನಾಗಿ ನಟಿಸಿರುವ ಇಶಾನ್ ಅವರ ಲುಕ್ ಅನ್ನು ಚೇತನ್ ಸ್ಟೈಲಿಶ್ ಆಗಿಸಿದ್ದಾರೆ.
ಇನ್ನು ನಟ ಇಶಾನ್ ಈ ಚಿತ್ರದಲ್ಲಿ ಗಿಟಾರ್ ವಾದಕನಾಗಿ ಕಾಣಿಸಿಕೊಳ್ಲಲು ಡಬಲ್ ಡೆಕ್ ಗಿಟಾರ್ ಅನ್ನು ನಿರ್ವಹಿಸಲು ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ನಿರೇಶಕ ಹೇಳುವಂತೆ, ಕನ್ನಡ ಚಿತ್ರಗಳಲ್ಲಿ ಮೊದಲ ಬಾರಿಗೆಇಂತಹಾ ಪಾತ್ರ ತೆರೆ ಮೇಲೆ ಬರುತ್ತಿದೆ. "ರೇಮೋ" ಬಾಗ್ಗೆ ಭಾರೀ ನಿರೀಕ್ಷೆ ಹೊಂದಿರುವ ನಿರ್ದೇಶಕ ಪವನ್ ಒಡೆಯರ್ ಇಶಾನ್ ಅವರ ಲೆವೆಲ್ ಅನ್ನು ಎತ್ತರಿಸುವ ಚಿತ್ರ ಇದಾಗಲಿದೆ ಎಂದಿದ್ದಾರೆ.
ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ಮಹಿಳಾ ನಾಯಕಿಯಾಗಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸಿಆರ್ ಮನೋಹರ್ ನಿರ್ಮಿಸುತ್ತಿರುವ ಈ ಚಿತ್ರಕ್ಕಾಗಿ ವೈದಿ ಕ್ಯಾಮೆರಾವನ್ನು ಹಿಡಿದ್ದಾರೆ.
ರೇಮೋದಲ್ಲಿ ವೈದ್ಯನಾದ ಮಧೂ
ಸುದೀಪ್ ಅಭಿನಯದ ರನ್ನ ಮೂಲಕ ಕಂಬ್ಯಾಕ್ ಮಾಡಿರುವ ಮಧೂ ರೇಮೋದಲ್ಲಿ ವೈದ್ಯ ಪಾತ್ರಧಾರಿಯಾಗಿದ್ದಾರೆ. ಈ ಹಿಂದೆ "ನಾನು ಮತ್ತು ವರಲಕ್ಷ್ಮಿ", "ಸೀತಾರಾಮ ಕಲ್ಯಾಣ", "ಪ್ರೀಮಿಯರ್ ಪದ್ಮಿನಿ"ಯಂತಹಾ ಚಿತ್ರದಲ್ಲಿ ಅಭಿನಯಿಸಿದ್ದ ಮಧೂ ಅವರ ಪಾತ್ರದ ಶೂಟಿಂಗ್ ಇದಾಗಲೇ ಮುಗಿಸಿದ್ದಾರೆ. . ಈ ಚಿತ್ರದಲ್ಲಿ ಶರತ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ರೇಮೋ ಚಿತ್ರವನ್ನು ಬೆಂಗಳೂರು, ಹೈದರಾಬಾದ್, ಶಿರಸಿ ಮತ್ತು ಯಲ್ಲಾಪುರದಕೆಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ತಂಡವು ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಒಂದು ಪ್ರಮುಖ ಶೆಡ್ಯೂಲ್ ಸಹ ಪೂರ್ಣಗೊಳಿಸಿದ್ದು ಸಿಂಗಾಪುರ್, ಮಲೇಷಿಯಾ, ಥಾಯ್ ಲ್ಯಾಂಡಿನಲ್ಲಿ ಸಹ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


